ಮಣಿಪುರದಲ್ಲಿ ಹಿಂಸಾಚಾರ, ಅಸ್ಥಿರ ಪರಿಸ್ಥಿತಿ ಮರುಕಳಿಸಿದ ಕಾರಣ ಭಾನುವಾರ ಬೆಳಗ್ಗೆ ಕೇಂದ್ರ ಗೃಹಸಚಿವ ಅಮಿತ್ ಷಾ ತಮ್ಮ ಮಹಾರಾಷ್ಟ್ರ ಪ್ರಚಾರವನ್ನು ರದ್ದುಗೊಳಿಸಿದರು ಹಾಗೂ ಮುಂಬೈನಿಂದ ದಿಲ್ಲಿಗೆ ಮರಳಿದರು. ಬಳಿಕ ಗೃಹ ಸಚಿವಾಲಯದ ಅಧಿಕಾರಿಗಳ ಜತೆ ಸತತ ಸಭೆ ನಡೆಸಿದರು ಎಂದು ಮೂಲಗಳು ಹೇಳಿವೆ.
ಜನಾಂಗೀಯ ಸಂಘರ್ಷಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭ ಆಗುತ್ತಿದ್ದಂತೆಯೇ, ಇದನ್ನು ತಣಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವೇಶಿಸಿದ್ದಾರೆ. ಭಾನು ವಾರ ಮಹಾರಾಷ್ಟ್ರದಲ್ಲಿ ನಡೆಸಬೇಕಿದ್ದ ಚುನಾವ ಣಾ ಕ್ಯಾಲಿಗಳನ್ನು ಅವರು ರದುಗೊಳಿಸಿ ದೆಹಲಿಗೆ ಮರಳಿದ್ದಾರೆ. ಇದರ ಬೆನ್ನಲ್ಲೇ ಮಣಿಪುರದ ಪ್ರಕ್ಷುಬ್ಧ ಪರಿಸ್ಥಿತಿ ಬಗ್ಗೆ ಅವರು ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿ ಮಣಿಪುರದಲ್ಲಿ ಶಾಂತಿ ಮರಳಿಸಲು ಸಾಧ್ಯವಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದಾಗಿ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಇಂದಿನಿಂದ ಸಾರ್ವಜನಿಕರಿಗೆ ಪುನರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಘೋಷಿಸಿದ್ದಾರೆ.ಇಂಫಾಲದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಘೋಷಣೆ ಮಾಡಿದರು.
ಗುರುವಾರ ಬಂಧಿತ ಐವರು ಯುವಕರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಣಿಪುರದ ಭದ್ರತಾ ಪಡೆಗಳು ಪೊಲೀಸ್ ಠಾಣೆಗಳಿಗೆ ನುಗ್ಗಿ ನ್ಯಾಯಾಲಯದ ಬಂಧನಕ್ಕೆ ಯತ್ನಿಸಿದ್ದಕ್ಕಾಗಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್ಗಳನ್ನು ಹಾರಿಸಿದಾಗ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ, ಇಂಫಾಲ್ನ ಅವಳಿ ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆಯನ್ನು ರಾಜ್ಯ ಸರ್ಕಾರವು ಸಂಜೆ 5 ಗಂಟೆಯಿಂದ ರದ್ದುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣೆಗಾಗಿ ರಾಜ್ಯಗಳಲ್ಲಿ ತಿಂಗಳುಗಟ್ಟಲೆ ಟೆಂಟ್ ಹಾಕುವ ಇವರು ಬಿಜೆಪಿ ಆಡಳಿತದ ಒಂದು ರಾಜ್ಯ ಸಂಕಷ್ಟ ಎದುರಿಸುತ್ತಿರುವಾಗ ಅತ್ತ ಸುಳಿಯದಿರುವುದೇಕೆ? ಮಣಿಪುರ ವಿಷಯ ಬಂದರೆ 56 ಇಂಚಿನ ಎದೆಯ ಅಳತೆ 16 ಇಂಚಿಗೆ ಇಳಿಯುವುದೇಕೆ? ಎಂದು ಕಾಂಗ್ರೆಸ್ ಕುಟುಕಿದೆ.
Go back Mr Crime Minister: ಪ್ರಧಾನಿ ಮೋದಿ ನಾಳೆ ಅಂದರೆ ಮಂಗಳವಾರ ಪುಣೆಗೆ ಭೇಟಿ ನೀಡಲಿದ್ದು, ದಗ್ದುಶೇತ್ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
Congress on PM Modi : ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಬಗ್ಗೆ ಮೋದಿ ತುಟಿ ಬಿಚ್ಚಲು ಅತ್ಯಂತ ಹೇಯ ಕೃತ್ಯವೇ ನಡೆಯಬೇಕಾಯಿತು ಎಂದು ಕಾಂಗ್ರೇಸ್ ಪ್ರಧಾನಿ ಮೋದಿ ಅವರ ಬೇಜವ್ದಾರಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದೆ.
Actor Kishore on Manipur Sexual Violence : ಬಹುಭಾಷಾ ನಟ ಕಿಶೋರ್ ಮತ್ತೇ ಮೋದಿ ವಿರುದ್ದ ಧ್ವನಿ ಎತ್ತಿದ್ದಾರೆ. ಮಣಿಪುರದಲ್ಲಿ ಯುವತಿಯರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಕೇಸ್ಗೆ ಸಂಬಂಧಿಸಿದಂತೆ ನಿಮ್ಮ 56 ಇಂಚಿನ ಬಡಾಯಿಗೆ, ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ ಎಂದಿದ್ದಾರೆ.
ಮೇ 3 ರಂದು ಗುಡ್ಡಗಾಡು ರಾಜ್ಯದಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಿಂದಾಗಿ ಮಣಿಪುರ ಸರ್ಕಾರದ ಶಿಕ್ಷಣ ಇಲಾಖೆ ಅಡಿಯಲ್ಲಿರುವ ಶಾಲೆಗಳು ಎರಡು ತಿಂಗಳಿಗೂ ಹೆಚ್ಚು ಕಾಲ ಮುಚ್ಚಲ್ಪಟ್ಟ ನಂತರ 1-8 ನೇ ತರಗತಿಯ ತರಗತಿಗಳನ್ನು ಬುಧವಾರ ಪುನಃ ತೆರೆಯಲಾಗಿದೆ.
Manipur Violence: ಮಣಿಪುರದಲ್ಲಿ ಹದಗೆಟ್ಟ ಪರಿಸ್ಥಿತಿಯ ನಡುವೆ ಇಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂಬ ಊಹಾಪೋಹಗಳೂ ಕೇಳಿಬರುತ್ತಿವೆ.
Manipur Violence Latest Updates: ಸೇನಾ ಸಮವಸ್ತ್ರದಲ್ಲಿ ಬಂದ ಉಗ್ರರು ಶೋಧ ಕಾರ್ಯದ ನೆಪದಲ್ಲಿ ಕೆಲವರನ್ನು ಮನೆಯಿಂದ ಹೊರಗೆ ಕರೆದಿದ್ದರು. ಇದಾದ ಬಳಿಕ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
Manipur Clash: ಮಣಿಪುರದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲೆಡೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಇಷ್ಟಾದರೂ ಕೂಡ ದುಷ್ಕರ್ಮಿಗಳು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ.
Manipur Violence: ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಮನವಿಯಲ್ಲಿ ಅರ್ಜಿದಾರರು ಮಣಿಪುರ ಸಾಮ್ರಾಜ್ಯ ಭಾರತದೊಳಗೆ ವಿಲೀನವಾಗುವ ಮುನ್ನ, 1949ರಲ್ಲೇ ಮೈತಿ ಸಮುದಾಯವನ್ನು ಬುಡಕಟ್ಟು ಸಮುದಾಯ ಎಂದು ಪರಿಗಣಿಸಲಾಗಿತ್ತು ಎಂದಿದ್ದಾರೆ. ಆದರೆ, ಭಾರತದೊಡನೆ ಮಣಿಪುರ ವಿಲೀನವಾದ ಬಳಿಕ ಸಮುದಾಯಕ್ಕೆ ಈ ಸ್ಥಾನಮಾನ ಸಿಗಲಿಲ್ಲ. ನ್ಯಾಯಾಲಯದಲ್ಲಿ ಅರ್ಜಿದಾರರು ಮೈತಿ ಸಮುದಾಯವನ್ನು ಕಾಪಾಡಿಕೊಳ್ಳಲು, ಪೂರ್ವಜರ ನೆಲವನ್ನು ರಕ್ಷಿಸಲು, ಸಂಪ್ರದಾಯ, ಸಂಸ್ಕೃತಿ, ಮತ್ತು ಭಾಷೆಯನ್ನು ಕಾಪಾಡಿಕೊಳ್ಳಲು ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಣಿಪುರ ಸರ್ಕಾರವು ಗುರುವಾರದಂದು ರಾಜ್ಯದಲ್ಲಿ ಬುಡಕಟ್ಟು ಮತ್ತು ಬಹುಸಂಖ್ಯಾತ ಮೈತೇಯ್ ಸಮುದಾಯದ ನಡುವಿನ ಹಿಂಸಾಚಾರವನ್ನು ತಡೆಯಲು ಕಂಡಲ್ಲಿ ಗುಂಡಿನ ಆದೇಶವನ್ನು ಹೊರಡಿಸಿದೆ, ಇದು ಅವರ ಹಳ್ಳಿಗಳಿಂದ 9,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.