ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ಸಲುವಾಗಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಪಾಟೀಲ ಅವರು ಇವು ಸೇರಿದಂತೆ ಹಲವು ರೈಲ್ವೆ ಯೋಜನೆಗಳ ಬಗ್ಗೆ ಸಚಿವ ಸೋಮಣ್ಣ ಅವರ ಗಮನ ಸೆಳೆದರು. ಬಳಿಕ ಈ ಕುರಿತ ಪತ್ರಗಳನ್ನೂ ಸಚಿವರು ಸೋಮಣ್ಣ ಅವರಿಗೆ ನೀಡಿದರು.
Karnataka Assembly Election: ಪಕ್ಷ ಸಂಘಟನೆಗೆ ಕರೆದರೇ ನನಗೂ ಬಿಜೆಪಿಗೂ ಸಂಬಂಧವಿಲ್ಲ, ನಾನು ಸರ್ಕಾರದ ಸಚಿವ ಎಂದು ಹೇಳುತ್ತಿದ್ದರು. ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದ ಸೋಮಣ್ಣ ಅವರು ಕೆಲ ಷರತ್ತುಗಳಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಚಾಮರಾಜನಗರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಲು ಸೋಮಣ್ಣ ಅವರು ಕಾರಣ, ಈಗ ಸೋಮಣ್ಣ ಅವರೇ ಅಭ್ಯರ್ಥಿಯಾಗಿರುವುದು ವಿಪರ್ಯಾಸ- ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ರುದ್ರೇಶ್
Karnataka Assembly Election: ನೀತಿ ಸಂಹಿತೆ ಘೋಷಣೆಯಾದ ಬಳಿಕ ಸೋಮಣ್ಣ ಜಿಲ್ಲೆಗೆ ಅವರ ಮೊದಲ ಬೇಟಿ ಇದಾಗಿದ್ದು ಅವರ ಅಭಿಮಾನಿಗಳು ಜಿಲ್ಲೆಯ ನಾಲ್ಕೈದು ಕಡೆ ಪಟಾಕಿ ಸಿಡಿಸಿ, ಹೂಗಳನ್ನು ಎರಚಿ ಸ್ವಾಗತ ಕೋರಿರುವುದು ಸೋಮಣ್ಣ ಚಾಮರಾಜನಗರಕ್ಕೆ ಬರುತ್ತಾರೆ ಎಂಬ ಊಹಾಪೋಹಕ್ಕೆ ಇಂಬು ಕೊಟ್ಟಿದೆ.
Karnataka Assembly Eelection: ಟಿಕೆಟ್ ಸಂಬಂಧ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಚಿವ ವಿ. ಸೋಮಣ್ಣ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಜೊತೆಗೆ, ಟಿಕೆಟ್ ಗಾಗಿ ಓಡಾಡುತ್ತಿದ್ದ ವಿಜಯೇಂದ್ರ ಆಪ್ತ ರುದ್ರೇಶ್ ಹೆಸರು ಪ್ರಸ್ತಾಪ ಆಗಿಲ್ಲದಿರುವುದು ಗಡಿಜಿಲ್ಲೆ ರಾಜಕೀಯದ ಹೊಸ ಟರ್ನಿಂಗ್ ಪಾಯಿಂಟಾಗಿದ್ದು ವರಿಷ್ಠರ ಸಭೆಯಲ್ಲಿ ರುದ್ರೇಶ್ ಹೆಸರು ಪ್ರಸ್ತಾಪ ಆಗದಿರುವುದರಿಂದ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಇದೇ 26 ಇಲ್ಲವೇ 27 ಕ್ಕೆ ಸಚಿವ ಸೋಮಣ್ಣ ಗ್ರಾಮದ ದೇಗುಲಕ್ಕೆ ಬಂದು ಕೊಟ್ಟ ಮಾತಿನಂತೆ ರಥ ನಿರ್ಮಿಸಿಕೊಡಬೇಕು ಇಲ್ಲದಿದ್ದರೇ ಗೋ ಬ್ಯಾಕ್ ಸೋಮಣ್ಣ ಹೋರಾಟ ಮಾಡುತ್ತೇವೆ. ಜೊತೆಗೆ, ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ ಎಂದು ಗ್ರಾಮದ ಮುಖಂಡರುಗಳು ಎಚ್ಚರಿಕೆ ಕೊಟ್ಟಿದ್ದಾರೆ.
ಸಚಿವ ವಿ.ಸೋಮಣ್ಣ ಮುನಿಸಿಗೆ ಹೈಕಮಾಂಡ್ ಮುಲಾಮು. ಅಮಿತ್ ಶಾ ಭೇಟಿ ಬಳಿಕ ಸಮಾಧಾನಗೊಂಡಿರುವ ಸೋಮಣ್ಣ. ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದ ಉಭಯ ನಾಯಕರು. BJP ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆಗೂ ಚರ್ಚೆ. ಸಂಧಾನ ಸಕ್ಸಸ್, ಬೆಂಗಳೂರಿನತ್ತ ಆಗಮಿಸುತ್ತಿರುವ ಸಚಿವ.
ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ವಿ.ಸೋಮಣ್ಣ. ದೆಹಲಿಯ ಕೃಷ್ಣ ಮೆನನ್ ರೋಡ್ನಲ್ಲಿರೋ ಮನೆಯಲ್ಲಿ ಭೇಟಿ. ಒಟ್ಟು 11 ನಿಮಿಷಗಳ ಕಾಲ ಮಾತುಕತೆ ನಡೆಸಿರೋ ನಾಯಕರು. ನಾನು ಎಲ್ಲವನ್ನ ಸರಿಪಡಿಸುವೆ, ಕೆಲಸ ಮಾಡಿ ಎಂದಿರೋ ಶಾ. ಎಲ್ಲವೂ ಅಂದುಕೊಂಡಂತೆ ಆಗಿದೆ ಎಂದ ಸಚಿವ ಸೋಮಣ್ಣ.
Karnataka Assembly Election 2023: ಮೊನ್ನೆಯಷ್ಟೇ (ಮಾರ್ಚ್ 14) ಪಕ್ಷದ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದ ವಸತಿ ಸಚಿವ ವಿ. ಸೋಮಣ್ಣ, ನಿನ್ನೆ (ಮಾರ್ಚ್ 15) ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದರು. ದೆಹಲಿಯಲ್ಲಿ ಬಿಜೆಪಿ ಚಾಣಾಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಸುಮಾರು 11 ನಿಮಿಷಗಳ ಮಾತುಕತೆ ನಡೆಸಿದ್ದರು.
ದಿಢೀರ್ ದೆಹಲಿ ಪ್ರವಾಸಕ್ಕೆ ತೆರಳಲು ಸೋಮಣ್ಣ ನಿರ್ಧಾರ. ಕುತೂಹಲ ಕೆರಳಿಸಿದ ಸಚಿವ ವಿ.ಸೋಮಣ್ಣ ದೆಹಲಿ ಭೇಟಿ. ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವ ಸಾಧ್ಯತೆ. ಇತ್ತೀಚೆಗೆ ಪಕ್ಷದ ನಾಯಕರ ಬಗ್ಗೆ ಸೋಮಣ್ಣ ಅಸಮಾಧಾನ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಎಂಬ ಚರ್ಚೆ. ರಾಜಕೀಯ ಪಡಸಾಲೆಯಲ್ಲಿ ಭಾರೀ ಜೋರಾಗಿ ನಡೀತಿದೆ ಚರ್ಚೆ. BYS ಪುತ್ರನ ಬಗ್ಗೆ ಸೋಮಣ್ಣ ಪುತ್ರ ಅರುಣ್ ಅಸಮಾಧಾನ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಪಕ್ಷ ಬಿಡಲು ಸೋಮಣ್ಣ ನಿರ್ಧಾರ..?
ಚುನಾವಣೆ ಬರುತ್ತೆ-ಹೋಗತ್ತೆ ಅವರು 70 ವರ್ಷ ಅಧಿಕಾರದಲ್ಲಿದ್ದರು, 5-10 ವರ್ಷದಿಂದ ನಾವಿದ್ದೇವೆ ತಡೆದುಕೊಳ್ಳಿ, ಸೆಸ್ಕ್ ನೌಕರರಿಗೆ ಕೊಡುತ್ತಿದ್ದ ಉಚಿತ ವಿದ್ಯುತ್ ನ್ನು ವಾಪಾಸ್ ತೆಗೆದುಕೊಂಡಿದ್ದು ಯಾರು.? ಎಂದು ಪ್ರಶ್ನಿಸಿದ ಸಚಿವ ಸೋಮಣ್ಣ
ಚಂದ್ರಾ ಲೇಔಟ್ ನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿವೀಕ್ಷಿಸಿದರು. ಅರುಂಧತಿ ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸರ್ಕಾರಿ ಪ್ರಾಥಮಿಕ ಶಾಲೆ, ಗಂಗೊಂಡನಹಳ್ಳಿಯಲ್ಲಿ ಪ್ರಗತಿಯಲ್ಲಿರುವ ಸರ್ಕಾರಿ ಉರ್ದು ಶಾಲೆ ಕಾಮಗಾರಿಯನ್ನು ಪರಿಶೀಲಿಸಿದ ಸಚಿವರು ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಲ್ಸನ್ ಗಾರ್ಡನ್ ನಾಗ ಸಚಿವ ಸೋಮಣ್ಣ ಅವರನ್ನು ಭೇಟಿಯಾದ ವಿಚಾರ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡಿತ್ತು. ಈ ಕುರಿತಂತೆ ಮಾಧ್ಯಮ ಮಿತ್ರರಿಗೆ ಪ್ರತಿಕ್ರಿಯೆ ನೀಡಿರುವ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ, ನಾನು ಶಾಸಕನಾಗಿ 40 ವರ್ಷ ಆಯ್ತು. ನಮ್ಮ ಮನೆಗೆ ನೂರಾರು ಜನ ಬರ್ತಾರೆ. ಇವರಲ್ಲಿ ನಾಗ ಯಾರು..? ತಿಮ್ಮ ಯಾರು..? ಬೊಮ್ಮ ಯಾರು..? ನನಗೆ ಗೊತ್ತಿಲ್ಲ ಎಂದರು.
ನಾನು ನನ್ನನ್ನು ಯಾರಿಗೂ ಹೋಲಿಕೆ ಮಾಡಲು ಹೋಗಲ್ಲ,ಸಿದ್ಧರಾಮಯ್ಯ ಸಿದ್ಧರಾಮಯ್ಯನೇ.ಗಾಂಧಿ ಅಂಬೇಡ್ಕರ್ ಗೆ ಹೋಲಿಕೆ ಮಾಡಲು ಆಗುತ್ತಾ? ಜೆಪಿ, ಲೋಹಿಯಾಗೆ ಕಂಪೇರ್ ಮಾಡಲು ಆಗುತ್ತಾ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.