ಮಹಿಳಾ ಅರಣ್ಯಾಧಿಕಾರಿ (ಎಫ್ಆರ್ಒ) ಮೇಲೆ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ಎಸ್) ಸಿರ್ಪುರ ಶಾಸಕ ಕೊನೆರು ಕೊನಪ್ಪ ಅವರ ಸಹೋದರ ಕೊನೇರು ಕೃಷ್ಣ ರಾವ್ ಅಧಿಕಾರಿಣಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೃಷ್ಣ ರಾವ್ ಇತ್ತೀಚೆಗೆ ಕೊಮರಾಮ್ ಭೀಮ್ ಆಸಿಫಾಬಾದ್ ಜಿಲ್ಲಾ ಪರಿಷತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಪಕ್ಷದ ನಿಯಮಗಳನ್ನು ಗಾಳಿಗೆ ತೂರಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಅಧಿಕೃತ ದೂರು ನೀಡಿದೆ.
ಬಹುಜನ ಸಮಾಜ ಪಕ್ಷದ ಶಾಸಕಿ ರಮಾಬಾಯಿ ಸಿಂಗ್ ತಾನು ಎಲ್ಲ ಸಚಿವರ ಬಾಪ್ ಎಂದು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ತನಗೆ ಮತ್ತು ಇತರ ಬಿಎಸ್ಪಿ ಶಾಸಕರಿಗೆ ಮಂತ್ರಿಗಿರಿ ನೀಡದೆ ಹೋದಲ್ಲಿ ಕರ್ನಾಟಕದ ರೀತಿಯ ರಾಜಕೀಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂತ್ರಿಗಳು, ಎಂಎಲ್ಎಗಳು, ಸ್ಪೀಕರ್, ಉಪಾಧ್ಯಕ್ಷರು, ಪ್ರತಿಪಕ್ಷದ ನಾಯಕ ಮತ್ತು ಮುಖ್ಯ ಸಚೇತಕರ ವೇತನ ಹೆಚ್ಚಿಸುವ ಮಸೂದೆಯನ್ನು ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಇದರಿಂದಾಗಿ ಅವರ ವೇತನ, ಭತ್ಯೆ ದ್ವಿಗುಣಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.