ಅನರ್ಹತೆಯನ್ನು ಪ್ರಶ್ನಿಸಿ 'ಸುಪ್ರೀಂ' ಮೊರೆಹೋಗಲಿರುವ ಎಐಎಡಿಎಂಕೆ ಶಾಸಕರು

 ತಮಿಳುನಾಡಿನ ವಿಧಾನಸಭೆಯ 18 ಎಐಎಡಿಎಂಕೆ ಶಾಸಕರು ಮದ್ರಾಸ್ ಹೈಕೋರ್ಟ್ ತಮ್ಮ ಅನರ್ಹತೆಯನ್ನು ಎತ್ತಿ ಹಿಡಿದ ಹಿನ್ನಲೆಯಲ್ಲಿ ಅವರು ಈಗ ಸುಪ್ರಿಂಕೋರ್ಟ್ ಮೊರೆಹೋಗಲು ನಿರ್ಧರಿಸಿದ್ದಾರೆ. 

Last Updated : Oct 26, 2018, 05:16 PM IST
ಅನರ್ಹತೆಯನ್ನು ಪ್ರಶ್ನಿಸಿ 'ಸುಪ್ರೀಂ' ಮೊರೆಹೋಗಲಿರುವ ಎಐಎಡಿಎಂಕೆ ಶಾಸಕರು title=

ಮಧುರೈ: ತಮಿಳುನಾಡಿನ ವಿಧಾನಸಭೆಯ 18 ಎಐಎಡಿಎಂಕೆ ಶಾಸಕರು ಮದ್ರಾಸ್ ಹೈಕೋರ್ಟ್ ತಮ್ಮ ಅನರ್ಹತೆಯನ್ನು ಎತ್ತಿ ಹಿಡಿದ ಹಿನ್ನಲೆಯಲ್ಲಿ ಅವರು ಈಗ ಸುಪ್ರಿಂಕೋರ್ಟ್ ಮೊರೆಹೋಗಲು ನಿರ್ಧರಿಸಿದ್ದಾರೆ. 

ಅನರ್ಹಗೊಂಡಿರುವ ಶಾಸಕರಲ್ಲಿ ಒಬ್ಬರಾಗಿರುವ ತಂಗಾ ತಮಿಳ್ಸೆಲ್ವನ್ ಮತ್ತು ಟಿಟಿವಿ ದಿನಕರನ್ ಅವರ ಬೆಂಬಲಿಗರಾದ ಎಲ್ಲ 18 ಜನ ಶಾಸಕರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಈ ನಿರ್ಧಾರವನ್ನು ದಿನಕರನ್ ಮತ್ತು ಅನರ್ಹಗೊಂಡಿರುವ ಶಾಸಕರೆಲ್ಲರೂ ಸೇರಿ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ತಂಗಾ ತಮಿಳ್ಸೆಲ್ವನ್ "ಸ್ಪೀಕರ್ ಏನು ತಪ್ಪು ಮಾಡಿದ್ದಾರೆ ಎನ್ನುವುದನ್ನು ಜಗತ್ತಿಗೆ ತೋರಿಸಲು ನಾವು ಸುಪ್ರಿಂಕೋರ್ಟ್ ನ ಮೊರೆಹೊಗಲಿದ್ದೇವೆ" ಎಂದು ತಿಳಿಸಿದರು.

ಮದ್ರಾಸ್ ಹೈಕೋರ್ಟ್ ಸ್ಪೀಕರ್ ಕೈಗೊಂಡಿರುವ ಕ್ರಮವನ್ನು ಎತ್ತಿಹಿಡಿದ ಹಿನ್ನಲೆಯಲ್ಲಿ ಈಗ ಎಲ್ಲ ಅನರ್ಹ ಶಾಸಕರು ಸುಪ್ರಿಂಕೋರ್ಟ್ ನಲ್ಲಿ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಲಿದ್ದಾರೆ ಎನ್ನಲಾಗಿದೆ.ವಿಶೇಷವೆಂದರೆ ಈಗ ಅನರ್ಹಗೊಂಡಿರುವ ಎಲ್ಲ 18 ಶಾಸಕರು ದಿನಕರನ್ ಅವರ ಬೆಂಬಲಿಗರಾಗಿದ್ದಾರೆ.
 

Trending News