Monkeypox Symptoms & Treatment: ಜ್ವರ ಕಾಣಿಸಿಕೊಂಡ ನಂತರ 1-3 ದಿನಗಳಲ್ಲಿ ರೋಗಿಯಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತದೆ. ಮೊದಲು ಮುಖದ ಮೇಲೆ ದದ್ದು ಪ್ರಾರಂಭವಾಗುತ್ತದೆ. ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಈ ಅನಾರೋಗ್ಯವು ಸಾಮಾನ್ಯವಾಗಿ 2-4 ವಾರಗಳವರೆಗೆ ಇರುತ್ತದೆ.
ಇ-ಕ್ಲಿನಿಕಲ್ ಮೆಡಿಸಿನ್ ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯ ಪ್ರಕಾರ ಮಂಕಿಫಾಕ್ಸ್ನ ಕೆಲವು ಹೊಸ ರೋಗಲಕ್ಷಣಗಳ ಬಗ್ಗೆ ಹೇಳಲಾಗಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಮಂಕಿಪಾಕ್ಸ್ ಲಕ್ಷಣಗಳು: ಕರೋನಾವೈರಸ್ ನಂತರ ಇದೀಗ ಇನ್ನೊಂದು ವೈರಸ್ ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿದೆ. ಮಂಗನ ಕಾಯಿಲೆ ಅಂದರೆ ಮಂಕಿಪಾಕ್ಸ್ ವೈರಸ್ ಒಂದು ಅಪರೂಪದ ಕಾಯಿಲೆ ಆಗಿದ್ದು, ಪಾಕ್ಸ್ವಿರಿಡೆ ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದೆ ಎಂದು ಹೇಳಲಾಗುತ್ತಿದೆ. ಇದರ ಲಕ್ಷಣಗಳ ಬಗ್ಗೆ ತಿಳಿಯೋಣ...
Monkeypox: ಕರೋನಾವೈರಸ್ ಬಳಿಕ ಇಡೀ ವಿಶ್ವದಲ್ಲಿ ಮತ್ತೊಂದು ವೈರಸ್ ಮಂಕಿಪಾಕ್ಸ್ ತಲ್ಲಣ ಸೃಷ್ಟಿಸಿದೆ. ಇದೀಗ ಭಾರತದಲ್ಲಿ ನಾಲ್ಕು ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಈ ಸಂದರ್ಭದಲ್ಲಿ ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಕಾಯಿಲೆ ಎಷ್ಟು ಅಪಾಯಕಾರಿ. ಈ ಬಗ್ಗೆ ನಿಗಾವಹಿಸುವುದು ಹೇಗೆ ಎಂದು ತಿಳಿಯೋಣ...
ಮಂಕಿಪಾಕ್ಸ್ ಪ್ರಕರಣವು ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಹೆಚ್ಚು ವ್ಯಾಪಕವಾಗಿ ಹರಡುತ್ತಿವೆ. 80 ಪ್ರತಿಶತ ಮಂಕಿಪಾಕ್ಸ್ ಪ್ರಕರಣಗಳು ಯುರೋಪ್ನಲ್ಲಿ ಕಂಡುಬಂದಿದೆ. ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳು ಯಾವುವು ಮತ್ತು ಅದು ಹೇಗೆ ಹರಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
Monkeypox In India - ಪುಟ್ಟ ಬಾಲಕಿಯೋರ್ವಳು ತುರಿಕೆಯಿಂದ ತೊಂದರೆಗೆ ಒಳಗಾಗಿದ್ದು, ಆಕೆಯ ಮೈಮೇಲೆ ದದ್ದುಗಳು ಕೂಡ ಕಾಣಿಸಿಕೊಂಡಿವೆ. ಈ ಕುರಿತು ಮಾಹಿತಿ ನೀಡಿರುವ ಗಾಜಿಯಾಬಾದ್ ಸಿಎಂಓ, ಬಾಲಕಿಯ ಶರೀರದಿಂದ ಪಡೆದ ನಮೂನೆಯನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದ್ದು, ಮುಂದಿನ 24ಗಂಟೆಯೊಳಗೆ ಅದರ ವರದಿ ಬರಲಿದೆ ಎಂದಿದ್ದಾರೆ. ಪ್ರಸ್ತುತ ಬಾಲಕಿಯನ್ನು ಪ್ರತ್ಯೇಕಿಸಲಾಗಿದ್ದು, ಆಕೆಯ ಶರೀರದ ಮೇಲೆ ಕಾಣಿಸಿಕೊಂಡ ಲಕ್ಷಣಗಳು ಇತರ ರೋಗ ಲಕ್ಷಣಗಳಾಗಿರುವ ಸಾಧ್ಯತೆಯೂ ಇದೆ. ಆದರೆ ಮುಂಜಾಗ್ರತೆ ವಹಿಸುವ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
Monkeypox outbreak: ಜಗತ್ತಿನಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ವೈದ್ಯಕೀಯ ಸಂಸ್ಥೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಂಕಿಪಾಕ್ಸ್ ವೈರಸ್ನಿಂದ ಮಕ್ಕಳು ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು ಎಂದು ಮಾಹಿತಿ ನೀಡಿದೆ.
Monkeypox Community Spread - ಕರೋನಾ ನಂತರ, ಮಂಕಿಪಾಕ್ಸ್ ವೈರಸ್ ವಿಶ್ವಾದ್ಯಂತ ನಿಧಾನವಾಗಿ ತನ್ನ ಪಾದಗಳನ್ನು ಚಾಚತೊಡಗಿದೆ. ಬ್ರಿಟನ್ನಲ್ಲಿ, ಈ ರೋಗವು ಈಗ ಸಮುದಾಯ ಹರಡುವಿಕೆ ಹಂತಕ್ಕೆ ಹೋಗಿದೆ. ಯುಕೆ ಸರ್ಕಾರ ಪರಿಸ್ಥಿತಿಯ ಮೇಲೆ ತೀವ್ರ ನಿಗಾವಹಿಸಿದೆ.
2018ರಲ್ಲಿ ಇಂಗ್ಲೆಂಡಿನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣವು ವರದಿಯಾಗಿತ್ತು. ಆ ಸಮಯದಿಂದ ಇಲ್ಲಿವರೆಗೆ ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.
Monkeypox In North Wales: UKಯಲ್ಲಿ 2 ಮಂಕಿ ಪಾಕ್ಸ್ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸೋಂಕು ಹರಡುವುದನ್ನು ತಡೆಯಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸಾರ್ವಜನಿಕ ಆರೋಗ್ಯ ವಿಭಾಗದ ವೇಲ್ಸ್ ನ ಆರೋಗ್ಯ ರಕ್ಷಣಾ ಸಲಹೆಗಾರರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.