ಮಂಕಿಪಾಕ್ಸ್ ಮನುಷ್ಯ ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುವ ವೈರಸ್. ಈ ವೈರಸ್ ಕೂಡ ಸಿಡುಬು ಕುಟುಂಬಕ್ಕೆ ಸೇರಿದೆ. ಆದಾಗ್ಯೂ, ಅದರ ರೋಗಲಕ್ಷಣಗಳು ಕಡಿಮೆ ತೀವ್ರವಾಗಿರುತ್ತವೆ. ಮಂಕಿಪಾಕ್ಸ್ ಜ್ವರ, ಆಯಾಸ, ದೇಹದ ನೋವು ಮತ್ತು ಚರ್ಮದ ದದ್ದುಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ರೋಗವು ಗಂಭೀರವಾಗಿಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ, ರೋಗವು ಗಂಭೀರವಾಗಬಹುದು.
ಇ-ಕ್ಲಿನಿಕಲ್ ಮೆಡಿಸಿನ್ ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯ ಪ್ರಕಾರ ಮಂಕಿಫಾಕ್ಸ್ನ ಕೆಲವು ಹೊಸ ರೋಗಲಕ್ಷಣಗಳ ಬಗ್ಗೆ ಹೇಳಲಾಗಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
Monkeypox Virus Rare Case: ಜಗತ್ತಿನಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕ್ರಮೇಣ ಈ ರೋಗವು 90 ಕ್ಕೂ ಹೆಚ್ಚು ದೇಶಗಳಿಗೆ ಹರಡಿತು. ಪ್ರತಿದಿನ ಇದರ ಬಗ್ಗೆ ಹೊಸ ಹೊಸ ಮಾಹಿತಿಗಳು ಪ್ರಕಟವಾಗುತ್ತಿವೆ, ಹೊಸ ಲಕ್ಷಣಗಳು ಕಂಡು ಬರುತ್ತಿವೆ.
ಕೋವಿಡ್ -19 ಸಾಂಕ್ರಾಮಿಕದ ಮೂರನೇ ಅಲೆಯು ಹೆಚ್ಚಿನ ರಾಷ್ಟ್ರಗಳಲ್ಲಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿಯೇ ಈಗ ಹೊಸದಾಗಿ ಹೊರಮ್ಮಿರುವ ಮಂಗನ ಕಾಯಿಲೆ 23 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕಳೆದ ಹತ್ತು ದಿನಗಳಲ್ಲಿ 12 ದೇಶಗಳಿಂದ 92 ವ್ಯಾಪಕ ಸಾಂಕ್ರಾಮಿಕವಲ್ಲದ ಮಂಕಿಪೋಕ್ಸ್ ಪ್ರಕರಣಗಳು ವರದಿಯಾಗಿದ್ದು, ಇದು ಹೆಚ್ಚುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
Monkeypox Community Spread - ಕರೋನಾ ನಂತರ, ಮಂಕಿಪಾಕ್ಸ್ ವೈರಸ್ ವಿಶ್ವಾದ್ಯಂತ ನಿಧಾನವಾಗಿ ತನ್ನ ಪಾದಗಳನ್ನು ಚಾಚತೊಡಗಿದೆ. ಬ್ರಿಟನ್ನಲ್ಲಿ, ಈ ರೋಗವು ಈಗ ಸಮುದಾಯ ಹರಡುವಿಕೆ ಹಂತಕ್ಕೆ ಹೋಗಿದೆ. ಯುಕೆ ಸರ್ಕಾರ ಪರಿಸ್ಥಿತಿಯ ಮೇಲೆ ತೀವ್ರ ನಿಗಾವಹಿಸಿದೆ.
Monkeypox Virus Alert: ಮಂಕಿ ಪಾಕ್ಸ್ ಕಾಯಿಲೆ ಹಲವು ದೇಶಗಳಲ್ಲಿ ತನ್ನ ಪಾದ ಚಾಚುತ್ತಿದೆ. ಭಾರತದಲ್ಲಿ ಇದುವರೆಗೆ ಈ ಕಾಯಿಲೆಯ ಯಾವುದೇ ಪ್ರಕರಣ ಕಂಡುಬಂದಿಲ್ಲವಾದರೂ ಕೂಡ, ಕೇಂದ್ರ ಸರ್ಕಾರ ಸಂಪೂರ್ಣ ಕಟ್ಟೆಚ್ಚರವಹಿಸಿದೆ.
2018ರಲ್ಲಿ ಇಂಗ್ಲೆಂಡಿನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣವು ವರದಿಯಾಗಿತ್ತು. ಆ ಸಮಯದಿಂದ ಇಲ್ಲಿವರೆಗೆ ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.