Mosquito Killer Lamp: ಬೇಸಿಗೆ ಬಂತೆಂದರೆ ಸೆಕೆ ಒಂದೆಡೆಯಾದರೆ ಈ ಸೊಳ್ಳೆಗಳ ಕಾಟ ಮತ್ತೊಂದೆಡೆ. ನೀವೂ ಕೂಡ ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದರೆ ಈ ಸಮಸ್ಯೆಗೆ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಇದಕ್ಕಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಪರಿಸರ ಸ್ನೇಹಿ ಸೊಳ್ಳೆ ಕಿಲ್ಲರ್ ಸಾಧನ.
Mosquito Killer Lmap : ಇದೀಗ ಮಾರುಕಟ್ಟೆಗೆ ಬಂದಿರುವ ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ ಸುಲಭವಾಗಿ ಸೊಳ್ಳೆಗಳನ್ನು ಕೊಂದು ಬಿಡುತ್ತವೆ. ಅಲ್ಲದೆ ಈ ಲ್ಯಾಂಪ್ ಅನ್ನು ಪರಿಸರ ಸ್ನೇಹಿ ಎಂದು ಕೂಡಾ ಹೇಳಲಾಗುತ್ತದೆ. ಅಂದರೆ ಇದನ್ನು ಬಳಸಿದರೆ ಯಾವುದೇ ರೀತಿಯಲ್ಲಿಯೂ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ.
ಈ ಲ್ಯಾಂಪ್ ನಿಂದ ಹೊರಸೂಸುವ ಬೆಳಕಿನ ಪರಿಣಾಮ ಸೊಳ್ಳೆಗಳು ಇದರತ್ತ ಆಕರ್ಷಿಸಲ್ಪಡುತ್ತವೆ. ಹೀಗೆ ಬೆಳಕಿನತ್ತ ಬರುವ ಸೊಳ್ಳೆಗಳು ಅಲ್ಲೇ ಸತ್ತು ಬೀಳುತ್ತವೆ. ಮನೆಯ ಯಾವ ಕೋಣೆಯಲ್ಲೇ ಇರಬಹುದು ಅಥವಾ ಕಚೇರಿಯಲ್ಲಿಯಲ್ಲಾದರೂ ಈ ಲ್ಯಾಂಪ್ ಅನ್ನು ಇರಿಸಬಹುದು.
ಈ ಬಲ್ಬ್ನಲ್ಲಿ ಬೆಳಕು ನೀಡುತ್ತದೆ. ಇದರಿಂದ ಹೊರ ಹೊಮ್ಮುವ ಬೆಳಕು ಸೊಳ್ಳೆಗಳನ್ನು ತನ್ನ ಕಡೆಗೆ ಆಕರ್ಷಿಸುತ್ತದೆ. ಹೀಗೆ ಒಮ್ಮೆ ಈ ಬೆಳಕಿನೆಡೆಗೆ ಸೊಳ್ಳೆ ಹೋಯಿತೆಂದರೆ ಅಲ್ಲೇ ಸತ್ತು ಬೀಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.