ಅಮೆರಿಕದ ಲಸಿಕೆ ಕಂಪನಿ ನೊವಾವಾಕ್ಸ್ ಅಭಿವೃದ್ಧಿಪಡಿಸಿದ ಕೊವೊವಾಕ್ಸ್ ಲಸಿಕೆ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಭಾರತದಲ್ಲಿ ಬಳಸಲು ಅವಕಾಶ ನೀಡಬಹುದು ಎನ್ನಲಾಗಿದೆ.ಆ ಮೂಲಕ ಇದು ಈಗ ಭಾರತದಲ್ಲಿ ಅನುಮೋದನೆ ಪಡೆಯಲಿರುವ ಐದನೇ ಲಸಿಕೆಯಾಗಲಿದೆ.
New Corona Vaccine: ಈ ಕುರಿತು ಹೇಳಿಕೆ ನೀಡಿರುವ ಕರೋನಾ ಲಸಿಕೆ ತಯಾರಕ ಕಂಪನಿ ನೊವಾವಾಕ್ಸ್ (Novavax), ಕರೋನದ ವಿರುದ್ಧ ಹೋರಾಡುವಲ್ಲಿ ತನ್ನ ಲಸಿಕೆ ಶೇಕಡಾ 90 ರಷ್ಟು ಪರಿಣಾಮಕಾರಿಯಾಗಿದೆ (Novavax Covid-19 Vaccine Efficacy) ಎಂದು ಹೇಳಿದೆ. ಯುಎಸ್ ಮತ್ತು ಮೆಕ್ಸಿಕೊದಲ್ಲಿ ನಡೆಸಿದ ದೊಡ್ಡ ಮತ್ತು ಅಂತಿಮ ಹಂತದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.