Anil Deshmukh Corruption Case - ಮಹಾರಾಷ್ಟ್ರ (Maharashtra) ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ (Anil Deshmukh) ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (Enforcement Directorate) ಅವರ 4.20 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Sharad Pawar On Param Bir Singh Letter Controversy - ವಿವಾದ ಎಳೆದುಕೊಂಡಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ (Anil Deshmukh) ಅವರನ್ನು ರಕ್ಷಿಸಲು ಇದೀಗ ಶರದ್ ಪವಾರ್ ಅಖಾಡಾಗೆ ಇಳಿದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಕುರ್ಚಿಯಿಂದ ಕೆಳಗಿಳಿದ ಬಳಿಕ ಪರಮಬೀರ್ ಸಿಂಗ್ ಏಕೆ ಆರೋಪ ಮಾಡುತ್ತಿದ್ದಾರೆ ಮತ್ತು ಈ ಮೊದಲು ಯಾಕೆ ಅವರು ಈ ವಿಷಯವನ್ನು ಮಾತನಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
Param Bir Sing Letter To CM Latest News - ಶಿವಸೇನಾ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಇಂದು ಬೆಳ್ಳಂಬೆಳಗ್ಗೆ ಶಾಯರಿ ಹೇಳುವ ಮಾದರಿಯಲ್ಲಿ ಟ್ವೀಟ್ ವೊಂದನ್ನು ಮಾಡಿದ್ದಾರೆ. ಅವರ ಈ ಟ್ವೀಟ್ ಗೆ ಉತ್ತರ ನೀಡಿರುವ NCP ವಕ್ತಾರ ಕ್ಲಾಯಿಡ್ ಕಾಸ್ಟ್ರೋ, 'ಹಮ್ ಸಾಥ್ ಚಲೇ, ಕಾರವಾಂ ಬನತಾ ಗಯಾ, ಮುಷ್ಕಿಲೆ ಆತೀ ರಹೀ, ಸಾಥ್ ಚಲತೆ ರಹೇ ಹಮ್... (ನಾವು ಒಂದಾಗಿ ಸಾಗಿದೇವು, ತಂಡ ನಿರ್ಮಾಣಗೊಂಡಿತು, ಕಠಿಣ ಪ್ರಸಂಗಗಳು ಎದುರಾದವು, ನಾವು ಒಂದಾಗಿ ಸಾಗೋಣ)' ಎಂದು ಹೇಳಿದ್ದಾರೆ.
ಮುಂಬೈ ಪೊಲೀಸರು ಗುರುವಾರ (ಅಕ್ಟೋಬರ್ 7) ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ತಿರುಚುವ ದಂಧೆಯನ್ನು ಭೇದಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಟಿಆರ್ಪಿಯನ್ನು ಲೆಕ್ಕಹಾಕುವ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಗೆ ಸಂಬಂಧಿಸಿದ ಏಜೆನ್ಸಿಯಾದ ಹನ್ಸಾ ಸುತ್ತಲೂ ಈ ಪ್ರಕರಣ ತೀವ್ರಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.