ಭಾರತದಲ್ಲೂ ಲಸಿಕೆಗಳನ್ನು ಬಳಸಲು ಅವಕಾಶ ನೀಡುವಂತೆ ಫಿಜರ್ - ಬಯೋಎನ್ಟೆಕ್ ಸಂಸ್ಥೆಗಳು ಮನವಿ ಮಾಡಿಕೊಂಡಿವೆ. ಆದರೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮೊದಲಿಗೆ ಸೆರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ.
ಕರೋನವೈರಸ್ ಲಸಿಕೆಗಳ ಮೇಲೆ ವಾಗ್ದಾಳಿ ನಡೆಸಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರು ಫಿಜರ್-ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆ ಜನರನ್ನು ಮೊಸಳೆಗಳು ಅಥವಾ ಗಡ್ಡದ ಹೆಂಗಸರನ್ನಾಗಿ ಮಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಸೀರಮ್-ಆಕ್ಸ್ಫರ್ಡ್ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆ ಕೋವಿಶೀಲ್ಡ್ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು ಪ್ರಯೋಗಕ್ಕೂ ಒಳಪಟ್ಟಿದೆ. ಇದಕ್ಕೂ ಮೊದಲು ಅಮೆರಿಕದ ಕಂಪನಿ ಫಿಜರ್ ಭಾರತದಲ್ಲಿ ಕರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದೆ.
ಕೊರೊನಾ ವೈರಸ್ ವ್ಯಾಕ್ಸಿನ್ (Coronavaccine) ತಯಾರಿಕಾ ಕಂಪನಿ ಫೈಜರ್ (Pfizer) ಭಾರತದಲ್ಲಿ ತನ್ನ ವ್ಯಾಕ್ಸಿನ್ ಮಾರಾಟ ಮಾಡಲು ಬಯಸುತ್ತಿದೆ. ಅಷ್ಟೇ ಅಲ್ಲ ಭಾರತೀಯರ ಮೇಲೆ ವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ಕೂಡ ನಡೆಸಲು ಬಹಸುತ್ತಿದೆ. ಇದಕ್ಕಾಗಿ ಫೈಜರ್-ಬಯೋಂಟೆಕ್ (Pfizer-BioNTech) ಕಂಪನಿ ಭಾರತದಲ್ಲಿ ಜನರ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ಕೋರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.