ನವದೆಹಲಿ: ತರಕಾರಿಗಳಿಗೆ ಕನಿಷ್ಠ ಬೆಲೆಯನ್ನು ನಿಗದಿಪಡಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದಾರೆ.
ಕನಿಷ್ಠ ಬೆಲೆ ತರಕಾರಿ ಉತ್ಪಾದನಾ ವೆಚ್ಚಕ್ಕಿಂತ ಶೇಕಡಾ 20 ರಷ್ಟು ಹೆಚ್ಚಾಗುತ್ತದೆ. ಮಾರುಕಟ್ಟೆ ಬೆಲೆ ಕನಿಷ್ಠ ಬೆಲೆಗಿಂತ ಕಡಿಮೆಯಾದರೂ, ಉತ್ಪನ್ನಗಳನ್ನು ರೈತರಿಂದ ಕನಿಷ್ಠ ಬೆಲೆಗೆ ಪಡೆಯಲಾಗುತ್ತದೆ.ನವಂಬರ್ 1 ರ ಕೇರಳ ರಾಜ್ಯೋತ್ಸವ ದಿನಕ್ಕೂ ಮೊದಲು 16 ಬಗೆಯ ತರಕಾರಿಗಳಿಗೆ ಕನಿಷ್ಠ ಬೆಲೆಯನ್ನು ನಿಗದಿಪಡಿಸುವ ಯೋಜನೆಗೆ ಚಾಲನೆ ನೀಡುವ ವಿಚಾರವಾಗಿ ಪ್ರಸ್ತಾಪಿಸಿದರು.
ಕೇರಳ ಪ್ರವಾಹ: ಎಲ್ಲಾ ಮಲಯಾಳಿಗಳು ಒಂದು ತಿಂಗಳ ವೇತನ ನೀಡಿ- ಕೇರಳ ಸಿಎಂ
'ರಾಜ್ಯದಲ್ಲಿ ಉತ್ಪಾದನೆಯಾಗುವ ತರಕಾರಿಗಳಿಗೆ ಕನಿಷ್ಠ ಬೆಲೆಯನ್ನು ನಿಗದಿಪಡಿಸುವುದು ಇದೇ ಮೊದಲು. ಇದು ರೈತರಿಗೆ ಪರಿಹಾರ ಮತ್ತು ಬೆಂಬಲವನ್ನು ನೀಡಲಿದೆ. ಉತ್ಪನ್ನಗಳನ್ನು ಶ್ರೇಣೀಕರಿಸಲಾಗುವುದು ಮತ್ತು ಕನಿಷ್ಠ ಬೆಲೆಯನ್ನು ಗುಣಮಟ್ಟದ ಮೇಲೆ ನಿಗದಿಪಡಿಸಲಾಗುತ್ತದೆ. ಹದಿನಾರು ಬಗೆಯ ತರಕಾರಿಗಳನ್ನು ಮೊದಲ ಹಂತದಲ್ಲಿ ಒಳಗೊಂಡಿರುತ್ತದೆ ಮತ್ತು ಕನಿಷ್ಠ ಬೆಲೆಯನ್ನು ನಿಯಮಿತವಾಗಿ ಪರಿಷ್ಕರಿಸುವ ಅವಕಾಶವಿದೆ "ಎಂದು ವಿಜಯನ್ ಹೇಳಿದರು.
ದೇಶದ ಮೊದಲ ರೋಬೋಟ್ ಪೊಲೀಸ್ ಉದ್ಘಾಟಿಸಿದ ಕೇರಳ ಸಿಎಂ
ಈ ಯೋಜನೆಯಲ್ಲಿ ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲಿದ್ದು, ಅವು ತರಕಾರಿಗಳ ಖರೀದಿ ಮತ್ತು ವಿತರಣೆಯನ್ನು ಸಮನ್ವಯಗೊಳಿಸಲಿವೆ ಎಂದು ಅವರು ಹೇಳಿದರು.
'ಕನಿಷ್ಠ ಬೆಲೆಯ ಲಾಭವನ್ನು ಪಡೆಯಲು ಬೆಳೆಗಳನ್ನು ವಿಮೆ ಮಾಡಿದ ನಂತರ ರೈತರು ಕೃಷಿ ಇಲಾಖೆಯ ನೋಂದಣಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು ಮತ್ತು ಉತ್ಪನ್ನಗಳನ್ನು ಸಾಗಿಸಲು ಶೈತ್ಯೀಕರಿಸಿದ ವಾಹನಗಳಂತಹ ಸಂಪೂರ್ಣ ಪೂರೈಕೆ ಸರಪಳಿ ಪ್ರಕ್ರಿಯೆಯನ್ನು ಸ್ಥಾಪಿಸಲು ಈ ಯೋಜನೆಯು ಉದ್ದೇಶಿಸಿದೆ" ಎಂದು ವಿಜಯನ್ ಹೇಳಿದರು.
ಕೇರಳವು ತನ್ನ ತರಕಾರಿ ಅಗತ್ಯತೆಗಳಿಗಾಗಿ ನೆರೆಯ ರಾಜ್ಯಗಳ ಮೇಲೆ ಮಾತ್ರ ಅವಲಂಬಿತವಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ರಾಜ್ಯದ ಉತ್ಪಾದನೆಯು 14.72 ಲಕ್ಷ ಮೆಟ್ರಿಕ್ ಟನ್‌ಗಳಿಗೆ ದ್ವಿಗುಣಗೊಂಡಿದೆ.ಈ ಹೊಸ ವೈಶಿಷ್ಟ್ಯದೊಂದಿಗೆ, ಈ ವರ್ಷ ತರಕಾರಿಗಳು ಮತ್ತು ಟ್ಯೂಬರ್ ಬೆಳೆಗಳಿಗೆ ಹೆಚ್ಚುವರಿಯಾಗಿ ಒಂದು ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.