ನಡೆದಾಡುವ ದೇವರು, ಅಂಧ ಆನಾಥರ ಆಶ್ರಯದಾತ, ಗಾನ ಗಂಧರ್ವ, ಪದ್ಮಭೂಷಣ ಎಂದೇ ಜನ ಮಾನಸದಲ್ಲಿ ಅಜರಾಮರವಾಗಿರುವ ಪುಟ್ಟರಾಜ ಗವಾಯಿಗಳು ಇಂದು ಬದುಕಿದ್ದರೆ ಅವರಿಗೆ 108 ವರ್ಷಗಳು ತುಂಬಿರುತ್ತಿತ್ತು.
ಪುಟ್ಟರಾಜ ಗವಾಯಿಗಳು ಅವಿಭಜಿತ ಧಾರವಾಡ ಜಿಲ್ಲೆಯ (ಈಗ ಹಾವೇರಿ ಜಿಲ್ಲೆಯ) ಹಾವೇರಿ ತಾಲ್ಲೂಕಿನ ದೇವಗಿರಿಯಲ್ಲಿ ಬಡ ಕನ್ನಡ ಲಿಂಗಾಯತ ಕುಟುಂಬದಲ್ಲಿ ಮಾರ್ಚ್ 3,1911 ರಲ್ಲಿ ಜನಿಸಿದರು.ಅವರ ಪೋಷಕರು ರೇವಯ್ಯ ವೆಂಕಟಪುರಮಠ ಮತ್ತು ಸಿದ್ದಮ್ಮ.ಅವರು 6 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು.ಅವರು 10 ತಿಂಗಳ ಮಗುವಾಗಿದ್ದಾಗ ತನ್ನ ಹೆತ್ತವರನ್ನು ಕಳೆದುಕೊಂಡರು,ನಂತರ ಅವರ ತಾಯಿಯ ಚಿಕ್ಕಪ್ಪ ಚಂದ್ರಶೇಖರಯ್ಯ ಅವರ ಆಶ್ರಯದಲ್ಲಿ ಬೆಳೆದರು.
ಚಿತ್ರಕೃಪೆ: Facebook
ಗಾನಯೋಗಿ ಪಂಡಿತ್ ಪುಟ್ಟರಾಜ್ ಗವಾಯಿಗಳು ಅಂದ ಅನಾಥರಿಗೆ ಬೆಳಕಾದವರು ಸಂಗೀತದ ಮೂಲಕ ಅವರೆಲ್ಲರಿಗೂ ಮಾರ್ಗವನ್ನು ತೊರಿಸಿದವರು ಇಂತಹ ಮಹಾನ್ ಗುರುಗಳು ಇಂದಿಗೆ ತೀರಿಕೊಂಡು 11 ವರ್ಷಗಳಾಗುತ್ತಾ ಬಂತು, ಆದರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಇಂದಿಗೂ ಕೂಡ ವೀರೇಶ್ವರ ಪುಣ್ಯಾಶ್ರಮ ಅಂದ ಅನಾಥರ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.