ಜೈಸಲ್ಮೇರ್‌ನಲ್ಲಿ ವಿವಾಹದ ನಂತರ ಮೊದಲ ಬಾರಿಗೆ ಬಿಟೌನ್ ಸ್ಟಾರ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸಾರ್ವಜನಿಕ ಕಾಣಿಸಿಕೊಂಡಿದ್ದಾರೆ. ಕಿಯಾರಾ ಸಿದ್ಧಾರ್ಥ್ ಜೊತೆ ಕ್ಯಾಮೆರಾಗೆ ಪೋಸ್ ನೀಡುತ್ತಿರುವಾಗ ಸಿಂಧೂರ್ ಮತ್ತು ಮಂಗಳಸೂತ್ರವನ್ನು ತೋರಿಸುತ್ತಿರುವುದು ಕಂಡುಬಂದಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಇಬ್ಬರು ಹನಿಮೂನ್‌ಗೆ ಹೊರಟಿದ್ದೀರಾ ಅಂತ ನೆಟ್ಟಿಗರು ಫೋಟೋಸ್‌ಗೆ ಕಾಮೆಂಟ್ ಮಾಡಿದ್ದಾರೆ.