ಹಬ್ಬಗಳ ಸೀಸನ್ ಆರಂಭಗೊಂಡಿದೆ. ಈ ಸೀಸನ್ ನಲ್ಲಿ ಒಂದು ವೇಳೆ ನೀವು ಚಿನ್ನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಕಳೆದ ಕೆಲ ದಿನಗಳಿಂದ ಗಗನಮುಖಿಯಾಗಿದ್ದ ಚಿನ್ನದ ಬೆಲೆಯಲ್ಲಿ 6000 ರೂ. ಇಳಿಕೆಯಾಗಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ದೇಸಿ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ರೂ.1500 ಇಳಿಕೆ ಕಂಡುಬಂದಿದೆ.
ಈ ವರ್ಷದ ಆರಂಭದಲ್ಲಿ, ಚಿನ್ನವು ಹತ್ತು ಗ್ರಾಂಗೆ 39 ಸಾವಿರ ರೂ., ಇತ್ತು. ಇದುವರೆಗೆ ಹತ್ತು ಗ್ರಾಂಗೆ 49500 ರೂ. ತಲುಪಿದ್ದು ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇಕಡಾ 25 ರಷ್ಟು ಏರಿಕೆಯಾಗಿದೆ.
ಡಾಲರ್ ಎದುರು ಸುಧಾರಣೆಗೊಂಡ ರೂಪಾಯಿ ಮೌಲ್ಯದ ಹಿನ್ನೆಲೆ ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10ಗ್ರಾಮ್ ಗೆ ರೂ.182 ಕುಸಿತ ಕಂಡು ರೂ.41,019 ಕ್ಕೆ ಬಂದು ತಲುಪಿದೆ. HDFC ಸೆಕ್ಯೂರಿಟಿಸ್ ಪ್ರಕಾರ ಮಂಗಳವಾರ ಚಿನ್ನದ ಬೆಲೆ ಪ್ರತಿ 10ಗ್ರಾಮ್ ಗೆ ರೂ.41,201 ಕ್ಕೆ ಬಂದು ತಲುಪಿತ್ತು.
ಚಿನ್ನ ಪ್ರವೃತ್ತಿ (Gold Rates today) ಕುಸಿಯುತ್ತಲೇ ಇದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನವು ಹತ್ತು ಗ್ರಾಂಗೆ 600 ರೂ. ಇಳಿದು 41,070 ರೂ.ಗೆ ತಲುಪಿದೆ. ಅಂದರೆ, ಈ ಸಮಯದಲ್ಲಿ ಚಿನ್ನವನ್ನು ಖರೀದಿಸುವುದರಿಂದ ಪ್ರಯೋಜನವಾಗುತ್ತದೆ.
ಕಳೆದ ಕೆಲ ದಿನಗಳಿಂದ ಗಗನಮುಖಿಯಾಗಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು ಕೊನೆಗೂ ಇಳಿಕೆಯತ್ತ ಮುಖಮಾಡಿವೆ. ಮಂಗಳವಾರ ದೆಹಲಿ ಮಾರುಕಟ್ಟೆಯಲ್ಲಿ ಪ್ರತಿ 10ಗ್ರಾಮ್ ಚಿನ್ನದ ಬೆಲೆಯಲ್ಲಿ ರೂ. 170 ಕಡಿಮೆಯಾಗಿ 41,800ಕ್ಕೆ ಬಂದು ತಲುಪಿದೆ. ಇದೇ ವೇಳೆ ಪ್ರತಿ ಕೆ.ಜಿ ಬೆಳ್ಳಿ ಬೆಲೆಯೂ ಕೂಡ ರೂ.700ರವರೆಗೆ ಕಡಿಮೆಯಾಗಿದೆ.
ಹೊಸಕೋಟೆ ಟೋಲ್ ಬಳಿ ಶುಕ್ರವಾರ ರಾತ್ರಿ 8.20ರ ಸಮಯದಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆಯಲ್ಲಿ ಬೆಂಗಳೂರು-ವಿಜಯವಾಡ ಮಾರ್ಗದ ಕೆಎ 57 ಎಫ್ 2844 ಬಸ್ನಲ್ಲಿ ಬೆಳ್ಳಿ ಸಾಮಗ್ರಿ ಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿದೆ.
ಈ ದಿನಗಳಲ್ಲಿ ಚಿನ್ನ-ಬೆಳ್ಳಿ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಿದಂತೆ ಅದರ ದರದಲ್ಲೂ ಸಹ ಏರಿಕೆ ಕಂಡುಬಂದಿದೆ. ಬುಧವಾರ ಚಿನ್ನದ ಬೆಲೆಯು 150ರೂ. ಹೆಚ್ಚಾಗಿದ್ದು ಪ್ರತಿ 10 ಗ್ರಾಂ ಚಿನ್ನದ ಬೆಲೆ 31,500ರೂ.ಗೆ ಬಂದು ತಲುಪಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.