ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಚಿನ್ನ ಖರೀದಿದಾರರಲ್ಲಿ ಸಂಭ್ರಮ

ಡಾಲರ್ ಎದುರು ಸುಧಾರಣೆಗೊಂಡ ರೂಪಾಯಿ ಮೌಲ್ಯದ ಹಿನ್ನೆಲೆ ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10ಗ್ರಾಮ್ ಗೆ ರೂ.182 ಕುಸಿತ ಕಂಡು ರೂ.41,019 ಕ್ಕೆ ಬಂದು ತಲುಪಿದೆ. HDFC ಸೆಕ್ಯೂರಿಟಿಸ್ ಪ್ರಕಾರ ಮಂಗಳವಾರ ಚಿನ್ನದ ಬೆಲೆ ಪ್ರತಿ 10ಗ್ರಾಮ್ ಗೆ ರೂ.41,201 ಕ್ಕೆ ಬಂದು ತಲುಪಿತ್ತು.

Last Updated : Jan 29, 2020, 07:44 PM IST
ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಚಿನ್ನ ಖರೀದಿದಾರರಲ್ಲಿ ಸಂಭ್ರಮ title=

ನವದೆಹಲಿ:ಡಾಲರ್ ಎದುರು ಸುಧಾರಣೆಗೊಂಡ ರೂಪಾಯಿ ಮೌಲ್ಯದ ಹಿನ್ನೆಲೆ ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10ಗ್ರಾಮ್ ಗೆ ರೂ.182 ಕುಸಿತ ಕಂಡು ರೂ.41,019 ಕ್ಕೆ ಬಂದು ತಲುಪಿದೆ. HDFC ಸೆಕ್ಯೂರಿಟಿಸ್ ಪ್ರಕಾರ ಮಂಗಳವಾರ ಚಿನ್ನದ ಬೆಲೆ ಪ್ರತಿ 10ಗ್ರಾಮ್ ಗೆ ರೂ.41,201 ಕ್ಕೆ ಬಂದು ತಲುಪಿತ್ತು. ಬುಧವಾರ ದೆಹಲಿ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಕೂಡ ರೂ.1,083 ನಷ್ಟು ಇಳಿಕೆಯಾಗಿ ಪ್ರತಿ ಕೆ.ಜಿ ಬೆಳ್ಳಿಯ ದರ ರೂ.46,610 ಕ್ಕೆ ತಲುಪಿದೆ. ಇದಕ್ಕೂ ಮೊದಲು ಮಂಗಳವಾರ ಪ್ರತಿ ಕೆ.ಜಿ ಬೆಳ್ಳಿಯ ದರ ರೂ.47,693 ರಷ್ಟಿತ್ತು.

ಈ ಕುರಿತು ಮಾಹಿತಿ ನೀಡಿರುವ HDFC ಸೆಕ್ಯೂರಿಟಿಸ್ ಹಿರಿಯ ಅನಾಲಿಸ್ಟ್ ತಪನ್ ಪಟೇಲ್, "ಚಿನ್ನದ ಬೆಲೆಯಲ್ಲಿ ನಿನ್ನೆ ಉಂಟಾದ ಇಳಿಕೆ ಹಾಗೂ ರೂಪಾಯಿ ಮೌಲ್ಯ ಬಲವರ್ಧನೆಯ ಹಿನ್ನೆಲೆ ದೆಹಲಿ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ.182ರಷ್ಟು ಕುಸಿದಿದೆ. ಬುಧವಾರ ಕೂಡ ಡಾಲರ್ ಎದುರು ರೂಪಾಯಿ ಮೌಲ್ಯ 0.12ಪೈಸೆಗಳಷ್ಟು ಏರಿಕೆ ಕಂಡಿದೆ" ಎಂದಿದ್ದಾರೆ.

ದಿನದ ವಹಿವಾಟಿನಲ್ಲಿ ದೇಶೀಯ ಷೇರು ಮಾರುಕಟ್ಟೆಯಲ್ಲಿನ ಉಂಟಾದ ಏರಿಕೆಯ ಕಾರಣ, ರೂಪಾಯಿ ಮೌಲ್ಯ ಯುಎಸ್ ಕರೆನ್ಸಿಯ ವಿರುದ್ಧ 10 ಪೈಸೆಗಳಷ್ಟು ಏರಿಕೆ ಕಂಡು 71.21 ಕ್ಕೆ ತಲುಪಿದೆ ಎಂದು ಅವರು ಹೇಳಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕೂಡ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದ್ದು ಪ್ರತಿ ಔನ್ಸ್ ಚಿನ್ನದ ಬೆಲೆ 1,568 ಡಾಲರ್ ಗೆ ಬಂದು ತಲುಪಿದೆ. ಇತ್ತ ಬೆಳ್ಳಿ ಬೆಲೆ ಕೂಡ ಪ್ರತಿ ಔನ್ಸ್ ಗೆ 17.47 ಡಾಲರ್ ಗೆ ತಲುಪಿದೆ.

Trending News