ಕೇವಲ ಬೆಂಗಳೂರು ನೆರೆಹೊರೆಯ ಪ್ರದೇಶಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೂಪಿಸಿರುವ ಉಪನಗರ ರೈಲು ಯೋಜನೆಯನ್ನು ಸುತ್ತಲಿನ ದೂರದ ನಗರಗಳಿಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಯೋಜನೆಯನ್ನು ಪರಿಷ್ಕರಿಸಿ, ಹೊಸದಾಗಿ ಪ್ರಸ್ತಾವನೆ ಸಲ್ಲಿಸಬೇಕು. ಹೀಗಾದರೆ ಮಾತ್ರ ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಬೃಹತ್ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಮಂಗಳವಾರ ಸೂಚಿಸಿದ್ದಾರೆ.
ಬೆಂಗಳೂರು ಉಪನಗರ ರೈಲು ಯೋಜನೆ. ಯೋಜನೆಗಾಗಿ 764 ಮರಗಳಿಗೆ ಕೊಡಲಿ. 764 ಮರಗಳನ್ನ ಕಡಿಯಲು ಬಿಬಿಎಂಪಿ ಅನುಮತಿ. ಮೊದಲ ಹಂತದ 2 ಕಾರಿಡಾರ್ ಕಾಮಗಾರಿ ಆರಂಭ. ಬೈಯಪ್ಪನಹಳ್ಳಿ ಹಾಗೂ ಚಿಕ್ಕಬಾಣಾವರ ಮಧ್ಯೆ ನಿರ್ಮಾಣ. 1500 ಮರ ಕಡಿಯಲು ಅನುಮತಿ ಕೋರಿ ಪತ್ರ. ಬಿಬಿಎಂಪಿಗೆ ಕೆಆರ್ ಐಡಿಇ ಪತ್ರ ಮೂಲಕ ಮನವಿ. ಸದ್ಯ ಬಿಬಿಎಂಪಿ 764 ಮರ ಕಡಿಯಲು ಅನುಮತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.