Russia-Ukraine Crisis - ರಷ್ಯಾ-ಉಕ್ರೇನ್ (Russia-Ukraine War) ಯುದ್ಧದ ಮಧ್ಯೆ, ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳ ಬಗ್ಗೆ ಅಮೆರಿಕ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ಭಾರತ ಮತ್ತು ರಷ್ಯಾ ನಡುವಿನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.
Russia-Ukraine Tension - ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ರಷ್ಯಾವನ್ನು ಖಂಡಿಸುವ ನಿರ್ಣಯವನ್ನು ಬೆಂಬಲಿಸದ ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ರಷ್ಯಾ ಧನ್ಯವಾದ ಹೇಳಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಾಜಧಾನಿ ಕೀವ್ ತೊರೆದಿದ್ದಾರೆ ಎಂಬ ವದಂತಿಗಳು ಹೊರಬಿದ್ದಿವೆ. ಇದಾದ ನಂತರ ಸ್ವತಃ ಅಧ್ಯಕ್ಷ ಝೆಲೆನ್ಸ್ಕಿ ತಮ್ಮ ದೇಶದಲ್ಲೇ ಸಿಲುಕಿಕೊಂಡಿರುವ ಬಗ್ಗೆ ವಿಡಿಯೋ ಬಿಡುಗಡೆ ಮಾಡಿ ತಿಳಿಸಿದ್ದಾರೆ. ಅವರು ಕೀವ್ನಲ್ಲಿ ನಿಂತು ಉಕ್ರೇನ್ ಜನರನ್ನು ರಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ.
ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್ ಗೆ ಕಳಿಸ್ತಿದ್ದಾರೆ. ಅಲ್ಲಿಂದ ವಿದ್ಯಾರ್ಥಿಗಳನ್ನು ಉಕ್ರೇನಿನ ಪಶ್ಚಿಮ ಭಾಗದಲ್ಲಿರುವವ ರಸ್ತೆ ಮಾರ್ಗದ ಮೂಲಕ ಸ್ಥಳಾಂತರ ಮಾಡಬಹುದೆಂಬ ಚಿಂತನೆ ನಡೀತಿದೆ.
ಉಕ್ರೇನ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ದೆಹಲಿಯ ಉಕ್ರೇನ್ ರಾಯಭಾರ ಕಚೇರಿಯ ಮೊರೆ ಹೋಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆಗಳು ನಡೆಯುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.