ಸಾರಾ ಅಲ್ಲ.. ಈ ಖ್ಯಾತ ಸಿರೀಯಲ್ ನಟಿಯೊಂದಿಗೆ ಶುಭ್ಮನ್‌ ಗಿಲ್‌ ಡೇಟಿಂಗ್!‌ ಶೀಘ್ರದಲ್ಲೇ ಮದುವೆ?!

Shubman Gill Dating With TV Actress: ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಸದ್ಯ ನ್ಯೂಯಾರ್ಕ್ ನಲ್ಲಿದ್ದಾರೆ. ಟಿ-20 ವಿಶ್ವಕಪ್‌ಗೂ ಮುನ್ನ ಭಾರತ ಇಲ್ಲಿ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆಡಬೇಕಿದೆ. 

Written by - Savita M B | Last Updated : Jun 1, 2024, 10:54 AM IST
  • ಟಿ-20 ವಿಶ್ವಕಪ್‌ನ ಪ್ರಮುಖ ತಂಡದಲ್ಲಿ ಶುಭಮನ್ ಗಿಲ್ ಹೆಸರು ಇಲ್ಲ.
  • ಆದರೆ, ಶುಬ್ಮನ್ ಗಿಲ್ ಅವರನ್ನು ಮೀಸಲು ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ
ಸಾರಾ ಅಲ್ಲ.. ಈ ಖ್ಯಾತ ಸಿರೀಯಲ್ ನಟಿಯೊಂದಿಗೆ ಶುಭ್ಮನ್‌ ಗಿಲ್‌ ಡೇಟಿಂಗ್!‌ ಶೀಘ್ರದಲ್ಲೇ ಮದುವೆ?! title=

 Shubman Gill-Ridhima Pandit: ಟಿ-20 ವಿಶ್ವಕಪ್‌ನ ಪ್ರಮುಖ ತಂಡದಲ್ಲಿ ಶುಭಮನ್ ಗಿಲ್ ಹೆಸರು ಇಲ್ಲ. ಆದರೆ, ಶುಬ್ಮನ್ ಗಿಲ್ ಅವರನ್ನು ಮೀಸಲು ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ. ಟಿ20 ವಿಶ್ವಕಪ್ ವೇಳೆ ಯಾವುದೇ ಆಟಗಾರ ಗಾಯಗೊಂಡರೆ, ಶುಭಮನ್ ಗಿಲ್ ಆಡುವ ಅವಕಾಶ ಪಡೆಯಬಹುದು.

 ಟಿ-20 ವಿಶ್ವಕಪ್ ನಡುವೆ ಶುಭಮನ್ ಗಿಲ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬೀಳುತ್ತಿದೆ. ಗಿಲ್ ಶೀಘ್ರದಲ್ಲೇ ಕಿರುತೆರೆಯ ಸುಂದರಿ ರಿದ್ಧಿಮಾ ಪಂಡಿತ್ ಅವರನ್ನು ವರಿಸಲಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗುತ್ತಿದೆ. ಮದುವೆ ದಿನಾಂಕ ಕೂಡ ಬಹಿರಂಗವಾಗಿದ್ದು, ಡಿಸೆಂಬರ್‌ನಲ್ಲಿ ಶುಭ್‌ಮಾನ್ ಗಿಲ್ ಮತ್ತು ರಿದ್ಧಿಮಾ ಪಂಡಿತ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.. 

ಇದನ್ನೂ ಓದಿ-ಕೇವಲ ₹200ಕ್ಕೆ ಸ್ಟಂಟ್‌ ಮಾಡ್ತಾಯಿದ್ದ ದುನಿಯಾ ವಿಜಯ್‌ ಹೀರೋ ಆಗಿದ್ದು ಹೇಗೆ ಗೊತ್ತಾ..?

 ರಿದ್ಧಿಮಾ ಪಂಡಿತ್‌ಗಿಂತ ಮೊದಲು, ಶುಭ್‌ಮಾನ್ ಗಿಲ್ ಅವರ ಹೆಸರು ಬಾಲಿವುಡ್ ನಟಿ ಸಾರಾ ಅಲಿ ಖಾನ್‌ ಜೊತೆ ತಳುಕು ಹಾಕಿಕೊಂಡಿತ್ತು.. ರಿದ್ಧಿಮಾ ಪಂಡಿತ್ ಮತ್ತು ಶುಭ್‌ಮಾನ್ ಗಿಲ್ ಸ್ವಲ್ಪ ಸಮಯದಿಂದ ಡೇಟಿಂಗ್ ಮಾಡುತ್ತಿದ್ದು, ಇಬ್ಬರೂ ತಮ್ಮ ಸಂಬಂಧಕ್ಕೆ ಹೊಸ ಹೆಸರನ್ನು ನೀಡಿ ಜೀವನದಲ್ಲಿ ಒಟ್ಟಿಗೆ ಬದುಕಲು ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ..

ಇದನ್ನೂ ಓದಿ-Virat Kohli: ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮೊದಲ ಬಾರಿ ಡೇಟ್‌ ಮಾಡಿದ್ದು ಈ ಸ್ಟಾರ್ ನಟಿಯೊಂದಿಗೆ! ಯಾರು ಗೊತ್ತಾ?

ಆದರೆ ಈ ವಿಚಾರವಾಗಿ ಕಿರುತೆರೆ ರಿಧಿಮಾ ಪಂಡಿತ್ ಕೊನೆಗೂ ಮೌನ ಮುರಿದಿದ್ದಾರೆ. ತಾನು ಶುಭ್‌ಮನ್ ಗಿಲ್ ಅವರನ್ನು ಮದುವೆಯಾಗುತ್ತಿಲ್ಲ ಎಂದು ನಟಿ ಹೇಳಿದ್ದಾರೆ. ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದುನಟಿ ಸ್ಪಷ್ಟಪಡಿಸಿದ್ದಾರೆ. 

ವರದಿಯ ಪ್ರಕಾರ, ರಿಧಿಮಾ ಪಂಡಿತ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ವೀಡಿಯೊವೊಂದನ್ನು ಹಾಕಿದ್ದು, ಅದರಲ್ಲಿ ಅವರು ನನ್ನ ಮದುವೆಯ ಬಗ್ಗೆ ಕೇಳುವವವರಿಗೆ ನಾನು ಹೇಳುವುದು ಒಂದೇ ನನ್ನ ಜೀವನದಲ್ಲಿ ಈ ರೀತಿಯ ಮಹತ್ವದ ಘಟನೆ ನಡೆದರೆ ನಾನೇ ಮುಂದೆ ಬಂದು ಸುದ್ದಿ ಪ್ರಕಟಿಸುತ್ತೇನೆ, ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದಿದ್ದಾರೆ.. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News