500 Million WhatsApp users data leak: ವರದಿಯೊಂದರ ಪ್ರಕಾರ, ಸುಮಾರು 500 ಮಿಲಿಯನ್ WhatsApp ಬಳಕೆದಾರರ ಫೋನ್ ಸಂಖ್ಯೆಯ ಡೇಟಾಬೇಸ್ ಅನ್ನು ಆನ್ಲೈನ್ನಲ್ಲಿ ಮಾರಾಟಕ್ಕೆ ಇರಿಸಲಾಗಿದೆ. ಇದು ಅತಿದೊಡ್ಡ ಡೇಟಾ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಈಜಿಪ್ಟ್ನಿಂದ 4.5 ಕೋಟಿ ಜನರ ಡೇಟಾ ಸೋರಿಕೆಯಾಗಿದೆ ಮತ್ತು ರಷ್ಯಾದಿಂದ 1 ಕೋಟಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಸೋರಿಕೆಯಾಗಿದೆ ಎಂದು ಅಂದಾಜಿಲಾಗಿದೆ.
WhatsApp users Beware: ನೀವೂ ಕೂಡ ವಾಟ್ಸಾಪ್ ಬಳಕೆದಾರರಾಗಿದ್ದರೆ, ಈ ಸುದ್ದಿ ನಿಮಗೆ ಆಘಾತವನ್ನುಂಟು ಮಾಡಬಹುದು. ಸುಮಾರು 500 ಮಿಲಿಯನ್ ವಾಟ್ಸಾಪ್ ಬಳಕೆದಾರರ ಫೋನ್ ನಂಬರ್ ಸೋರಿಕೆಯಾಗಿದೆ ಎಂದು ವರದಿಯೊಂದರಲ್ಲಿ ತಿಳಿಸಲಾಗಿದೆ.
ವೆಬ್ಸೈಟ್ಗಳು ನಮಗೆ ಹಲವು ರೀತಿಯಲ್ಲಿ ಸಹಾಯಕವಾಗಿದೆ, ಆದರೂ, ಇಂಟರ್ನೆಟ್ ಮೂಲಕ ವಿವಿಧ ಹಗರಣಗಳು ನಡೆಯುತ್ತವೆ. ವಾಟ್ಸಾಪ್ ಒಂದು ಜನಪ್ರಿಯ ಅಪ್ಲಿಕೇಶನ್ ಆಗಿದ್ದು, ಲಕ್ಷಾಂತರ ಜನರು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ಅಲ್ಲದೆ, ವಾಟ್ಸಾಪ್ನಲ್ಲಿಯೂ ಸಹ ಹ್ಯಾಕರ್ಗಳು ತಮ್ಮ ಕೈಚಳ ತೋರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.