ನೀರಜ್ ಚೋಪ್ರಾ ಭಾನುವಾರ ಬುಡಾಪೆಸ್ಟ್ನಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್ನಲ್ಲಿ ಚೋಪ್ರಾ ಅವರ ಎರಡನೇ ಪ್ರಯತ್ನದಲ್ಲಿ ಅವರು ಜಾವೆಲಿನ್ ಅನ್ನು 88.17 ಮೀಟರ್ಗಳ ದೂರಕ್ಕೆ ಎಸೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ನೀರಜ್ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲಿ 88.77 ಮೀಟರ್ಗಳಷ್ಟು ದೂರ ಜಾವೆಲಿನ್ ಎಸೆದು ಫೈನಲ್ ಪ್ರವೇಶಿಸಿದ್ದಾರೆ. ಇಲ್ಲಿಯವರೆಗೆ, ಈ ಚಾಂಪಿಯನ್ಶಿಪ್ನಲ್ಲಿ ಭಾರತ ಒಂದೂ ಚಿನ್ನದ ಪದಕವನ್ನು ಗೆದ್ದಿಲ್ಲ.
ನೀರಜ್ ಚೋಪ್ರಾ ಇತ್ತೀಚೆಗೆ ಒರೆಗಾನ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2022 ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಇದು ಭಾರತದ ಪಾಲಿಗೆ ಅವಿಸ್ಮರಣೀಯ ಸಂಗತಿಯಾಗಿದ್ದು, ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಬೆಳ್ಳಿ ಪದಕ ಬಂದಿದೆ.
ಇನ್ನು ಪುರುಷರ ಜಾವೆಲಿನ್ ಎಸೆತದ ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ ಇನ್ನೊಬ್ಬ ಭಾರತೀಯ ಆಟಗಾರನಾದ ರೋಹಿತ್ ಯಾದವ್, 80.42 ಮೀ ದೂರಕ್ಕೆ ಜಾವೆಲಿನ್ನನ್ನು ಎಸೆದು ಫೈನಲ್ ಪ್ರವೇಶಿಸಿದ್ದಾರೆ. ಎರಡನೇ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದ ಯಾದವ್ ಫೈನಲ್ಗೆ ಆಯ್ಕೆಯಾದ ಕೊನೆಯ 12 ಮಂದಿಯಲ್ಲಿ ಒಬ್ಬರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.