ಕನ್ನಡದ ಡಿಜಿಟಲ್ ಮಾಧ್ಯಮದಲ್ಲೇ ಸಂಚಲನ ಸೃಷ್ಟಿಸಿರುವ ಜೀ ಕನ್ನಡ ನ್ಯೂಸ್ ಇನ್ಮುಂದೆ ನಿಮ್ಮ ಮನೆಯ ಟಿವಿಗಳಲ್ಲಿ ಪ್ರಸಾರವಾಗುತ್ತಿದೆ. ಹಿರಿಯ ಮತ್ತು ಅನುಭವ ಪತ್ರಕರ್ತ ತಂಡದ ಅವಿರತ ಶ್ರಮದಿಂದ ಜೀ ಕನ್ನಡ ನ್ಯೂಸ್ ವಾಹಿನಿ ವೀಕ್ಷಕ ಪ್ರಭುಗಳ ಮನೆ ಬಾಗಿಲಿಗೆ ಬಂದಿದೆ. ಈ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಜೀ ಕನ್ನಡ ನ್ಯೂಸ್ ವಾಹಿನಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ವೀಕ್ಷಕರು ಮತ್ತು ರಾಯಚೂರು ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಸುಮಾರು 15 ತಿಂಗಳಗಳ ಕಾಲ ಡಿಜಿಟಲ್ ಮಾದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರು ಜೀ ಸದ್ಯ ಕೇಬಲ್ಗಳಲ್ಲಿ ಪ್ರಸಾರವಾಗುತ್ತಿರುವುದು ಸಂತಸದ ಸುದ್ದಿ ಎಂದು ಹಾರೈಸಿದರು.
Zee Kannada News Launch: ಜೀ ಮೀಡಿಯಾ ದೇಶದ ವಿವಿಧ ಭಾಷೆಗಳಲ್ಲಿ ಒಟ್ಟು 18ಕ್ಕೂ ಹೆಚ್ಚು ಸುದ್ದಿ ವಾಹಿನಿಗಳನ್ನು ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಜೀ ಡಿಜಿಟಲ್ ನ್ಯೂಸ್ ವಾಹಿನಿಗಳಾದ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡ ಆರಂಭವಾಗಿ ವರ್ಷ ಕಳೆದಿದೆ. ಒಂದೇ ವರ್ಷದಲ್ಲಿ ಜೀ ಕನ್ನಡ ನ್ಯೂಸ್ ಜನರ ಮನೆ ಮನದಲ್ಲೂ ಬೇರೂರಿದೆ. ಇಷ್ಟು ದಿನ ಡಿಜಿಟಲ್ ಮಾಧ್ಯಮದಲ್ಲಿದ್ದ ಜೀ ಕನ್ನಡ ನ್ಯೂಸ್ ಈಗ ಟಿವಿಯಲ್ಲೂ ಪ್ರಸಾರವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.