Shocking News: ಭಾರತೀಯರೇ ಎಚ್ಚರ! ಎಚ್ಚರ! ನಿಮ್ಮ ಸ್ಮಾರ್ಟ್ಫೋನ್ ನಲ್ಲಿರುವ ಕೆಲವು ಅಪ್ಲಿಕೇಶನ್ಗಳ ಸಹಾಯದಿಂದ ಪಾಕಿಸ್ತಾನಿಗಳು ನಿಮ್ಮನ್ನು ಟಾರ್ಗೆಟ್ ಮಾಡುತ್ತಿರಬಹುದು ಎಂಬ ಶಾಕಿಂಗ್ ಸುದ್ದಿ ಲಭ್ಯವಾಗಿದೆ. ಸೈಬರ್ ಸೆಕ್ಯುರಿಟಿ ಕಂಪನಿ ಸೆಂಟಿನೆಲ್ಒನ್ನ ವರದಿಯ ಪ್ರಕಾರ, ಮೂರು ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಪಾಕಿಸ್ತಾನಿ ಹ್ಯಾಕರ್ಗಳು ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಯೂಟ್ಯೂಬ್ ನ ಕಾಪಿ ಆಪ್ ಬಳಸಿ ಪಾಕಿಸ್ತಾನಿ ಹ್ಯಾಕರ್ಗಳು ಭಾರತೀಯರ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳನ್ನು ಭೇದಿಸಲು ಮತ್ತು ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆತಂಕಕಾರಿ ವಿಷಯವೆಂದರೆ, ಈ ಅಪ್ಲಿಕೇಶನ್ಗಳನ್ನು ಕ್ಯಾಪ್ರಾರಾಟ್ ಟೂಲ್ನೊಂದಿಗೆ ಬಳಸಲಾಗುತ್ತಿದ್ದು ಇವು ಆಂಡ್ರಾಯ್ಡ್ ಸಾಧನದ ಸಾಧನದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸಬಹುದಾದ ಸೂಕ್ಷ್ಮ ಸಾಧನವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಫೋನ್ನಲ್ಲಿ ಪದೇ ಪದೇ ನೆಟ್ವರ್ಕ್ ಸಮಸ್ಯೆ ಕಾಡುತ್ತಿದೆಯೇ? ಇಲ್ಲಿದೆ ಸುಲಭ ಪರಿಹಾರ
ಪಾಕಿಸ್ತಾನಿ ಹ್ಯಾಕರ್ಗಳು ಬಳಸುತ್ತಿರುವ ಆ ಮೂರು ಅಪ್ಲಿಕೇಶನ್ಗಳು ಯಾವುವು?
- com.Base..media.service
- com.moves.media.tubes
- com.videos.watches.share
ಈ ಅಪ್ಲಿಕೇಶನ್ಗಳು ಭಾರತೀಯರನ್ನು ಯಾವ ರೀತಿ ಗುರುಯಾಗಿಸುತ್ತಿವೆ?
* ಈ ಅಪ್ಲಿಕೇಶನ್ ಮೂಲಕ, ಮೊಬೈಲ್ನ ಮೈಕ್ರೊಫೋನ್ ಜೊತೆಗೆ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳನ್ನು ರೆಕಾರ್ಡ್ ಮಾಡಬಹುದು.
* ಈ ಅಪ್ಲಿಕೇಶನ್ ಎಸ್ಎಮ್ಎಸ್ ಮತ್ತು ಮಲ್ಟಿಮೀಡಿಯಾ ಸಂದೇಶಗಳು, ಕರೆ ದಾಖಲೆಗಳು ಮತ್ತು ಇತರ ಸಂದೇಶ ವಿಷಯವನ್ನು ಸಂಗ್ರಹಿಸುತ್ತದೆ.
* ಈ ಆಪ್ ಮೂಲಕ ವ್ಯವಹಾರದಿಂದ ಕಳುಹಿಸಲಾದ ಸಂದೇಶಗಳು ಮತ್ತು ಒಳಬರುವ ಕರೆಗಳನ್ನು ಟ್ರ್ಯಾಕ್ ಮಾಡಬಹುದು.
* ಅಪ್ಲಿಕೇಶನ್ ಸ್ವತಃ ಕರೆಗಳನ್ನು ಮಾಡಬಹುದು ಮತ್ತು ಸ್ಕ್ರೀನ್ಶಾಟ್ಗಳನ್ನು ತೆಗೆದುಕೊಳ್ಳಬಹುದು.
* ಈ ಅಪ್ಲಿಕೇಶನ್ ಮೂಲಕ, ಜಿಪಿಎಸ್ ಮತ್ತು ನೆಟ್ವರ್ಕ್ ಸೆಟ್ಟಿಂಗ್ಗಳನ್ನು ತಿದ್ದಿ ಬರೆಯಬಹುದು ಮತ್ತು ಅದು ಫೋನ್ನ ಫೈಲ್ಗಳನ್ನು ಮಾರ್ಪಡಿಸಬಹುದು.
ಇದನ್ನೂ ಓದಿ- ಮಿಕ್ಸರ್ ಗ್ರೈಂಡರ್ನಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಗ್ರೈಂಡ್ ಮಾಡಲೇಬಾರದು
ಇಂತಹ ಅಪ್ಲಿಕೇಶನ್ಗಳಿಂದ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಏನು ಮಾಡಬೇಕು?
ನೀವು ಇಂತಹ ಅಪ್ಲಿಕೇಶನ್ಗಳಿಂದ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಬಯಸಿದರೆ ಯಾವುದೇ ಸುರಕ್ಷಿತವಲ್ಲದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವುದನ್ನು ತಪ್ಪಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.