ನೀವೂ ಗೀಸರ್ ಆನ್ ಇಟ್ಟುಕೊಂಡೇ ಸ್ನಾನಕ್ಕಿಳಿಯುತ್ತೀರಾ ? ಇಂದೇ ಎಚ್ಚೆತ್ತುಕೊಳ್ಳಿ

Water Heater Safety Tips:ಗೀಸರ್ ಆನ್ ಮಾಡಿಟ್ಟುಕೊಂಡು ಸ್ನಾನಕ್ಕೆ ಇಳಿಯುವ ಅಭ್ಯಾಸ ಬಹಳ ಮಂದಿಗೆ ಇದೆ. ಆದರೆ ಹೀಗೆ ಮಾಡುವುದು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ ಎನ್ನುವ ಅರಿವು ನಿಮಗಿದೆಯೇ? 

Written by - Ranjitha R K | Last Updated : Nov 29, 2023, 01:03 PM IST
  • ಗೀಸರ್ ಆನ್ ಮಾಡಿ ಸ್ನಾನ ಮಾಡಿದರೆ ಎದುರಾಗುವುದು ಅನಾನುಕೂಲ
  • ಆಟೋ ಕಟ್ ಮೇಲೆ ವಿಶ್ವಾಸ ಬೇಡ
  • ಬಳಕೆಯ ನಂತರ ತಕ್ಷಣವೇ ಆಫ್ ಮಾಡಿ
ನೀವೂ ಗೀಸರ್ ಆನ್ ಇಟ್ಟುಕೊಂಡೇ ಸ್ನಾನಕ್ಕಿಳಿಯುತ್ತೀರಾ ? ಇಂದೇ ಎಚ್ಚೆತ್ತುಕೊಳ್ಳಿ  title=

Water Heater Safety Tips : ಚಳಿಗಾಲ  ಪ್ರಾರಂಭವಾಗಿದೆ. ಗೀಸರ್‌ಗಳ ಬಳಕೆ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ಭಾರತದ ಹಲವು ರಾಜ್ಯಗಳಲ್ಲಿ ಚಳಿ ನಿರಂತರವಾಗಿ ಹೆಚ್ಚುತ್ತಿದೆ. ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದು ಅನಾರೋಗ್ಯಕ್ಕೆ ಕಾರಣವಾಗಬಹುದು. ಇದನ್ನು ತಪ್ಪಿಸಲು ಗೀಸರ್ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಗೀಸರ್ ಆನ್ ಮಾಡಿಟ್ಟುಕೊಂಡು   ಸ್ನಾನಕ್ಕೆ ಇಳಿಯುವ ಅಭ್ಯಾಸ ಬಹಳ ಮಂದಿಗೆ ಇದೆ.  ಹೀಗೆ ಮಾಡುವ ನಿಮ್ಮ ಅಭ್ಯಾಸ ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ ಎನ್ನುವ ಅರಿವು ನಿಮಗಿದೆಯೇ? 

ಗೀಸರ್ ಆನ್ ಮಾಡಿ ಸ್ನಾನ ಮಾಡಿದರೆ  ಎದುರಾಗುವುದು ಅನಾನುಕೂಲ : 
ಗೀಸರ್ ಬಳಸುವಾಗ ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ಗೀಸರ್ ಎಲೆಕ್ಟ್ರಾನಿಕ್ ವಸ್ತುವಾಗಿದೆ. ನಿಮ್ಮ ಗೀಸರ್ ಆನ್ ಆಗಿದ್ದು ನೀವು ಸ್ನಾನ ಮಾಡುತ್ತಿದ್ದರೆ, ಹಠಾತ್ ಶಾರ್ಟ್ ಸರ್ಕ್ಯೂಟ್ ಆಗುವ ಅಪಾಯ ಕೂಡಾ ಇರುತ್ತದೆ. ಇದರಿಂದ ಪ್ರಾಣಕ್ಕೆ ಕುತ್ತು ತರಬಹುದು. ಆದ್ದರಿಂದ, ನೀವು ಗೀಸರ್  ಸ್ವಿಚ್ ಆನ್ ಮಾಡಿಕೊಂಡು ಸ್ನಾನ ಮಾಡುವುದು ಒಳ್ಳೆಯದು. 

ಇದನ್ನೂ ಓದಿ : OLA-ಅಥರ್‌ಗೆ ಕಠಿಣ ಸ್ಪರ್ಧೆ ನೀಡಲಿದೆ ಸಿಂಪಲ್ ಎನರ್ಜಿಯ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್: ಬೆಲೆಯೂ ಕಡಿಮೆ

ಆಟೋ ಕಟ್ ಮೇಲೆ ವಿಶ್ವಾಸ ಬೇಡ : 
ಕೆಲವೊಮ್ಮೆ ಸ್ವಿಚ್ ಆಫ್ ಆಗಿರುವಾಗಲೂ ವಿದ್ಯುತ್ ಶಾಕ್ ಆಗಬಹುದು.  ಏಕೆಂದರೆ ಕೆಲವು ಸಂದರ್ಭಗಳಲ್ಲಿ ಅರ್ಥ್ ಕರೆಂಟ್ ಕೂಡಾ ಹಾನಿ ಉಂಟು ಮಾಡುತ್ತದೆ. ಆದ್ದರಿಂದ, ನೀರು ಬಿಸಿಯಾದ ನಂತರ, ಗೀಜರ್ ಪ್ಲಗ್ ಅನ್ನು ಸಹ ತೆಗೆದುಹಾಕಬೇಕು. ಆಟೋ ಕಟ್ ಮೇಲೆ ವಿಶ್ವಾಸ ಇಡುವುದು ಕೂಡಾ ಸರಿಯಲ್ಲ.  

ಬಳಕೆಯ ನಂತರ ತಕ್ಷಣವೇ ಆಫ್ ಮಾಡಿ :
ಇಂದು ಅನೇಕ ಜನರು ಸಾಮಾನ್ಯವಾಗಿ ಗೀಸರ್ ಅನ್ನು ಹಾಗೆಯೇ ಬಿಡುತ್ತಾರೆ. ನಿಮ್ಮ ಈ ನಿರ್ಲಕ್ಷ್ಯ ದೊಡ್ಡ ತೊಂದರೆಗೆ ಸಿಲುಕಿಸಬಹುದು. ಆದ್ದರಿಂದ, ಗೀಸರ್ ಬಳಸಿದ ನಂತರ, ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಬೇಕು. ಗೀಸರ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಗೀಸರ್ ಸ್ಫೋಟದ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ.

ಇದನ್ನೂ ಓದಿ : ನಂಬಲಾರದಷ್ಟು ಕಡಿಮೆ ಬೆಲೆಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ ಖರೀದಿಸುವ ಸುವರ್ಣಾವಕಾಶ, ಕೊಡುಗೆ ಸೀಮಿತಾವಧಿಗಾಗಿ ಮಾತ್ರ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News