ChatGPT ದುರ್ಬಳಕೆ: ಆರೋಪಿ ಜೈಲಿಗೆ!

Fake News: ತಂತ್ರಜ್ಞಾನ ಬೆಳೆದಂತೆ ಕೆಲಸಗಳು ಸುಲಭವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಚಾಟ್ ಜಿಪಿಟಿ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ, ಇಲ್ಲೋರ್ವ ವ್ಯಕ್ತಿ ಚಾಟ್ ಜಿಪಿಟಿಯನ್ನು ದುರ್ಬಳಕೆ ಮಾಡಿಕೊಂಡ ಹಿನ್ನಲೆಯಲ್ಲಿ ಆತನನ್ನು ಬಂಧಿಸಲಾಗಿದೆ. 

Written by - Yashaswini V | Last Updated : May 9, 2023, 03:24 PM IST
  • ಚಾಟ್‌ಜಿಪಿಟಿ ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ರೈಲು ಅಪಘಾತದ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಲಾಗಿದೆ.
  • ಈ ಸುಳ್ಳು ಸುದ್ದಿಯಲ್ಲಿ ರೈಲು ಅಪಘಾತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿದೆ.
  • ಚೀನೀ ಪ್ಲಾಟ್‌ಫಾರ್ಮ್ ಬೈಜಿಯಾಹಾವೊದಲ್ಲಿ 20 ಕ್ಕೂ ಹೆಚ್ಚು ಖಾತೆಗಳಿಂದ ಈ ನಕಲಿ ಸುದ್ದಿಯನ್ನು ಪೋಸ್ಟ್ ಮಾಡಲಾಗಿದೆ.
ChatGPT ದುರ್ಬಳಕೆ: ಆರೋಪಿ ಜೈಲಿಗೆ!  title=

ChatGPT Scam: ಚಾಟ್‌ಜಿಪಿಟಿ ತಂತ್ರಜ್ಞಾನವನ್ನು ಬಳಸಿ ರೈಲು ಅಪಘಾತದ ಬಗ್ಗೆ ಸುಳ್ಳು ಸುದ್ದಿ ಸೃಷ್ಟಿಸಿ ಆನ್‌ಲೈನ್‌ನಲ್ಲಿ  ಈ ನಕಲಿ ಸುದ್ದಿಯನ್ನೇ ಹಬ್ಬಿಸಿದ್ದ ವ್ಯಕ್ತಿಯೋರ್ವ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ.  ಚೀನಾದ ವ್ಯಕ್ತಿಯೊಬ್ಬ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದು 'ಹಾಂಗ್' ಎಂಬ ಅಡ್ಡಹೆಸರಿನ ಶಂಕಿತನನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಸುಳ್ಳು ಮಾಹಿತಿ ಸೃಷ್ಟಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಗಮನಾರ್ಹವಾಗಿ, ಚೀನಾದಲ್ಲಿ ಚಾಟ್ ಜಿಟಿಪಿ ತಂತ್ರಜ್ಞಾನ ದುರ್ಬಳಕೆಯ ಮೊದಲ ಬಂಧನ ಇದಾಗಿದೆ ಎಂದು ಹೇಳಲಾಗುತ್ತಿದೆ. 

ಚಾಟ್‌ಜಿಪಿಟಿ ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ರೈಲು ಅಪಘಾತದ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಲಾಗಿದೆ. ಈ ಸುಳ್ಳು ಸುದ್ದಿಯಲ್ಲಿ ರೈಲು ಅಪಘಾತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿದೆ. ಚೀನೀ ಪ್ಲಾಟ್‌ಫಾರ್ಮ್ ಬೈಜಿಯಾಹಾವೊದಲ್ಲಿ 20 ಕ್ಕೂ ಹೆಚ್ಚು ಖಾತೆಗಳಿಂದ ಈ ನಕಲಿ ಸುದ್ದಿಯನ್ನು ಪೋಸ್ಟ್ ಮಾಡಲಾಗಿದೆ. ಇದು ಅಧಿಕಾರಿಗಳ ಗಮನಕ್ಕೆ ಬರುವಷ್ಟರಲ್ಲಿ 15,000 ಕ್ಕೂ ಹೆಚ್ಚು ಬಾರಿ ಇದನ್ನು ಕ್ಲಿಕ್ ಮಾಡಲಾಗಿದೆ. ಎಂದು ಕಾಂಗ್ಟಾಂಗ್ ಕೌಂಟಿಯ ಸೈಬರ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ- ಈ ಅಗ್ಗದ ಫ್ಯಾನ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್ಗೆ ಅಳವಡಿಸಿ ತಂಪಾದ ಗಾಳಿ ಪಡೆಯಿರಿ

ಚಾಟ್ ಜಿಟಿಪಿ ದುರ್ಬಳಕೆ: ಆರೋಪಿ ಜೈಲಿಗೆ! 
ಪೋಸ್ಟ್‌ನ ಜಾಲ ಪತ್ತೆ ಹಚ್ಚಲು ಕಾರ್ಯನಿರತರಾದ ಪೊಲೀಸರಿಗೆ ಹಾಂಗ್ ಒಡೆತನದ ಕಂಪನಿಯಿಂದ ಈ ರೀತಿಯ ನಕಲಿ ಸುದ್ದಿ ಹರಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿಖರ ಮಾಹಿತಿ ಮೇರೆಗೆ ಪೊಲೀಸರು  'ಹಾಂಗ್' ಎಂಬ ಅಡ್ಡಹೆಸರಿನ ಶಂಕಿತ ವ್ಯಕ್ತಿ ಹಾಗೂ ಆತನ ಬಳಿ ಇದ್ದ ಕಂಪ್ಯೂಟರ್ ಅನ್ನು ವಶಕ್ಕೆ ಪಡೆದಿದ್ದಾರೆ. 

ಹೋರಾಟ ಮತ್ತು ತೊಂದರೆಯನ್ನು ಪ್ರಚೋದಿಸುವ ಆರೋಪದಡಿ ಈ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇಂತಹ ಅಪರಾಧಕ್ಕೆ ಕನಿಷ್ಠ ಐದು ವರ್ಷಗಳಿಂದ ಗರಿಷ್ಠ ಹತ್ತು ವರ್ಷಗಳವರೆಗೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. 

ಮಾಹಿತಿಯ ಪ್ರಕಾರ, ಹಾಂಗ್ ಎಂಬ ಕಂಪನಿ ಬೈಜಿಯಾಹೋ ಎಂಬ ವೇದಿಕೆಯಲ್ಲಿ ನಕಲು ಪರಿಶೀಲನೆ ಕಾರ್ಯವನ್ನು ಬೈಪಾಸ್ ಮಾಡುವ ಮೂಲಕ ಹಲವಾರು ಖಾತೆಗಳಲ್ಲಿ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಿರುವ ಬಗ್ಗೆ ಸ್ವತಃ ಒಪ್ಪಿಕೊಂಡಿದೆ. ಹಿಂದಿನ ಟ್ರೆಂಡಿಂಗ್ ಸೋಶಿಯಲ್ ಸ್ಟೋರೀಸ್ ಅನ್ನು ಇನ್‌ಪುಟ್ ಮಾಡುವ ಮೂಲಕ ಚಾಟ್‌ಜಿಪಿಟಿ ಬಳಸಿ ವಿವಿಧ ಆವೃತ್ತಿಗಳಲ್ಲಿ ಈ ರೀತಿ ಸುಳ್ಳು ಸುದ್ದಿಯನ್ನು ಸೃಷ್ಟಿಸಲಾಗಿದೆ ಎಂದು ತನಿಖೆಯಿಂದ ಬಹಿರಂಗಗೊಂಡಿದೆ. 

ಇದನ್ನೂ ಓದಿ- WhatsApp New Scam: ವಾಟ್ಸಾಪ್ ನಲ್ಲಿ ಈ ಮೊಬೈಲ್ ನಂಬರ್‌ಗಳಿಂದ ಕರೆ ಬಂದರೆ ಹುಷಾರ್!

ವಾಸ್ತವವಾಗಿ, ಯಾವುದೇ ಚೀನೀ ಐಪಿ ವಿಳಾಸಗಳಿಗೆ ಚಾಟ್‌ಜಿಪಿಟಿ ನೇರವಾಗಿ ಲಭ್ಯವಿಲ್ಲ ವಾದರೂ ಚೀನೀ ಬಳಕೆದಾರರು ವಿ‌ಪಿ‌ಎನ್ ಸಂಪರ್ಕಗಳನ್ನು ಬಳಸಿ ಚಾಟ್‌ಜಿಪಿಟಿಯನ್ನು ಪ್ರವೇಶಿಸಬಹುದಾಗಿದೆ. ಮೈಕ್ರೋಸಾಫ್ಟ್ ಮತ್ತು ಗೂಗಲ್ ತಮ್ಮ ಆವಿಷ್ಕಾರಗಳನ್ನು ಘೋಷಿಸಿದ ನಂತರ ಚೈನೀಸ್ ಐಟಿ ಔಟ್‌ಲೆಟ್‌ಗಳು ತಮ್ಮದೇ ಆದ ಚಾಟ್‌ಜಿಪಿಟಿ ಆವೃತ್ತಿಯನ್ನು ಪ್ರಯೋಗಿಸುತ್ತಿವೆ ಎಂಬುದು ಗಮನಾರ್ಹವಾಗಿದೆ. 

ಚೀನಾದ ಕಾನೂನು ಜಾರಿ ಸಂಸ್ಥೆಗಳು ತಂತ್ರಜ್ಞಾನದ ಬಗ್ಗೆ ಸಂದೇಹ ವ್ಯಕ್ತಪಡಿಸಿವೆ ಮತ್ತು ಎಚ್ಚರಿಕೆ ನೀಡಿವೆ. ಫೆಬ್ರವರಿಯಲ್ಲಿ, ಬೀಜಿಂಗ್ ಪೊಲೀಸರು ಚಾಟ್‌ಜಿಪಿಟಿಯಿಂದ ಉತ್ಪತ್ತಿಯಾಗುವ ವದಂತಿಗಳ ಬಗ್ಗೆ ಹುಷಾರಾಗಿರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News