ಈ ಎಸಿ ಅಳವಡಿಸಿದರೆ ತಗಲುವ ವಿದ್ಯುತ್ ವೆಚ್ಚ ಕೇವಲ 3 ಬಲ್ಬ್ ಗಳಿಗೆ ಸಮ..!

ಹಾಸಿಗೆಯ ಜಾಗವನ್ನು ಮಾತ್ರ ತಂಪಾಗಿರಿಸುವ  ಎಸಿ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಎಸಿ ಇತರ ಹವಾನಿಯಂತ್ರಣಗಳಿಗೆ ಹೋಲಿಸಿದರೆ 60 ರಿಂದ 65 ಪ್ರತಿಶತದಷ್ಟು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ. 

Written by - Ranjitha R K | Last Updated : May 26, 2022, 09:34 AM IST
  • ಕಡಿಮೆ ವಿದ್ಯುತ್ ಬಳಸಿ ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುತ್ತದೆ
  • 3 ಬಲ್ಬ್‌ ಬಳಕೆಗೆ ಸಮಾನವಾಗಿ ಬರುತ್ತದೆ ವಿದ್ಯುತ್ ಬಿಲ್
  • ಮಾರುಕಟ್ಟೆಯಲ್ಲಿ ಲಭ್ಯವಿದೆ ಬೆಡ್ ಎಸಿ
ಈ ಎಸಿ ಅಳವಡಿಸಿದರೆ ತಗಲುವ ವಿದ್ಯುತ್ ವೆಚ್ಚ ಕೇವಲ 3 ಬಲ್ಬ್ ಗಳಿಗೆ ಸಮ..! title=
Bed AC (File photo)

ಬೆಂಗಳೂರು : ಬೇಸಿಗೆ ಹೆಚ್ಚಾಗುತ್ತಿದ್ದಂತೆಯೇ ಜನರು ಮನೆ ಅಥವಾ ಕಚೇರಿಯಲ್ಲಿ ಕೋಣೆಯನ್ನು ತಂಪಾಗಿಸಲು ಹವಾನಿಯಂತ್ರಣಗಳನ್ನು ಬಳಸುತ್ತಿದ್ದಾರೆ. ಆದರೆ ನಿರಂತರವಾಗಿ ಎಸಿ ಬಳಸುವುದರಿಂದ ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತದೆ. ಆದರೆ ಇದೀಗ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಹಾಸಿಗೆಯ ಜಾಗವನ್ನು ಮಾತ್ರ ತಂಪಾಗಿರಿಸುವ  ಎಸಿ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಎಸಿ ಇತರ ಹವಾನಿಯಂತ್ರಣಗಳಿಗೆ ಹೋಲಿಸಿದರೆ 60 ರಿಂದ 65 ಪ್ರತಿಶತದಷ್ಟು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ. 

ಕಡಿಮೆ ವಿದ್ಯುತ್ ಬಳಸಿ ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುತ್ತದೆ : 
Tupik Private Limited ಹೆಸರಿನ ಕಂಪನಿಯು ವಿಶಿಷ್ಟವಾದ ಏರ್ ಕಂಡಿಷನರ್ ಅನ್ನು ವಿನ್ಯಾಸಗೊಳಿಸಿದೆ. ಇದು ಹಾಸಿಗೆಯ ಪ್ರದೇಶವನ್ನು ಮಾತ್ರ ತಂಪಾಗಿಸುತ್ತದೆ. ಇದರ ವಿನ್ಯಾಸ ಕೂಡ ಟೆಂಟ್‌ನಂತಿದೆ. ಇದರಿಂದ ಬಳಕೆದಾರರು ಬಿಸಿಲಿನ ತಾಪದಿಂದ ಮುಕ್ತಿ ಪಡೆಯುವುದರ ಜೊತೆಗೆ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. ಈ ಎಸಿ ಪರಿಸರಕ್ಕೂ ಹಾನಿ ಮಾಡುವುದಿಲ್ಲ. ಈ ಎಸಿಯ ಬೆಲೆ ಸಿಂಗಲ್ ಬೆಡ್ ಗೆ 17,900 ಮತ್ತು ಡಬಲ್ ಬೆಡ್ ಗೆ 19,900 ರೂ.

ಇದನ್ನೂ ಓದಿ : 1000 ರೂ.ಗಿಂತ ಕಡಿಮೆ ಮೌಲ್ಯದ ವಾಟರ್‌ಪ್ರೂಫ್ ಇಯರ್‌ಬಡ್‌.. ನಿಮಿಷದಲ್ಲೇ ಚಾರ್ಜ್ ಆಗುತ್ತೆ!!

3 ಬಲ್ಬ್‌ ಬಳಕೆಗೆ ಸಮಾನವಾಗಿ ಬರುತ್ತದೆ ವಿದ್ಯುತ್ ಬಿಲ್  :
ಟುಪಿಕ್ ಬೆಡ್ ಎಸಿಗೆ ಸುಮಾರು 400W ಶಕ್ತಿಯ ಅಗತ್ಯವಿದೆ. ಅಂದರೆ, ಕೇವಲ ಮೂರು ಬಲ್ಬ್‌ಗಳನ್ನು ಬೆಳಗಿಸುವಷ್ಟು ವೆಚ್ಚ ಇಲ್ಲಿ ತಗಲುತ್ತದೆ. ಈ ಎಸಿಯನ್ನು ಸೌರಶಕ್ತಿಯಿಂದಲೂ ಚಲಾಯಿಸಬಹುದಾಗಿದೆ. ಎಸಿಯ ಗಾತ್ರವು 1 ಇಂಚು ಉದ್ದ ಮತ್ತು 18 ಇಂಚು ಅಗಲವಿದೆ. ಇದನ್ನು ಟೆಂಟಿನಲ್ಲಿ ಹಾಕಿ ಆ ಟೆಂಟ್ ಅನ್ನು ಹಾಸಿಗೆಗೆ ಅಳವಡಿಸಲಾಗುತ್ತದೆ. ಇದನ್ನು ಅಳವಡಿಸಿದ ತಕ್ಷಣ, ನಿಮಿಷಗಳಲ್ಲಿ ಹಾಸಿಗೆಯ ಪ್ರದೇಶವನ್ನು ತಂಪಾಗಿಸುತ್ತದೆ. 

ಇನ್ವರ್ಟರ್‌ನಲ್ಲಿಯೂ ಚಲಿಸುತ್ತದೆ :
ಈ ಎಸಿಯನ್ನು 5 ಆಂಪಿಯರ್ ಸಾಕೆಟ್ ಮೂಲಕ ಸುಲಭವಾಗಿ ನಿರ್ವಹಿಸಬಹುದಾಗಿದೆ. ವಿದ್ಯುತ್ ಕಡಿತದ ಸಂದರ್ಭದಲ್ಲಿ, ನೀವು 1KVA ಸಾಮರ್ಥ್ಯದ ಇನ್ವರ್ಟರ್ ಸಹಾಯದಿಂದ ಈ AC ಅನ್ನು ಸಹ ಚಲಾಯಿಸಬಹುದು.

ಇದನ್ನೂ ಓದಿ : Flipkart Electronics Sale: ಕೇವಲ 749 ರೂ.ಗೆ ಖರೀದಿಸಿ Redmi 5G ಸ್ಮಾರ್ಟ್‌ಫೋನ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News