ಅಗ್ಗದ ದರದಲ್ಲಿ iPhone 15 ಖರೀದಿಸಲು ಇಲ್ಲಿದೆ ಬಂಪರ್ ಆಫರ್, ಇಂದೇ ಕೊನೆ ದಿನ

Flipkart Mega Savings Days Sale: ನೀವು ಹೊಸ ಐಫೋನ್ 15 ಖರೀದಿಸಲು ಯೋಚಿಸುತ್ತಿದ್ದರೆ ಬಂಪರ್ ರಿಯಾಯಿತಿಯೊಂದಿಗೆ ಐಫೋನ್ ಖರೀದಿಸುವ ಅವಕಾಶವಿದೆ. ಏನಿದೆ ಕೊಡುಗೆಗಳು ಎಂದು ತಿಳಿಯಿರಿ. 

Written by - Yashaswini V | Last Updated : Apr 15, 2024, 12:49 PM IST
  • ಫ್ಲಿಪ್‌ಕಾರ್ಟ್ ಮೆಗಾ ಸೇವಿಂಗ್ ಡೇಸ್ ಸೇಲ್
  • ಈ ಸೇಲ್ ಇಂದು (ಏಪ್ರಿಲ್ 15) ಕೊನೆಗೊಳ್ಳಲಿದೆ
  • ಈ ಸೇಲ್ ನಲ್ಲಿ ಫ್ಲಿಪ್‌ಕಾರ್ಟ್ ಮೊಬೈಲ್ ಫೋನ್‌ಗಳು, ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತಿದೆ.
ಅಗ್ಗದ ದರದಲ್ಲಿ iPhone 15 ಖರೀದಿಸಲು ಇಲ್ಲಿದೆ ಬಂಪರ್ ಆಫರ್, ಇಂದೇ ಕೊನೆ ದಿನ   title=

Flipkart Mega Savings Days Sale:  ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಮೆಗಾ ಸೇವಿಂಗ್ ಡೇಸ್ ಧಮಾಕಾ ಸೇಲ್ ನಡೆಯುತ್ತಿದೆ. ಈ ಸೇಲ್ ಇಂದು (ಏಪ್ರಿಲ್ 15) ಕೊನೆಗೊಳ್ಳಲಿದೆ.  ಈ ಸೇಲ್ ನಲ್ಲಿ ಫ್ಲಿಪ್‌ಕಾರ್ಟ್ ಮೊಬೈಲ್ ಫೋನ್‌ಗಳು, ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತಿದೆ. ಅದರಲ್ಲೂ ನೀವು ಹೊಸ ಐಫೋನ್ 15 ಖರೀದಿಸಲು ಯೋಚಿಸುತ್ತಿದ್ದರೆ ಬಂಪರ್ ರಿಯಾಯಿತಿಯೊಂದಿಗೆ ಐಫೋನ್ ಖರೀದಿಸುವ ಅವಕಾಶವಿದೆ. ಏನಿದೆ ಆಫರ್ ಎಂದು ತಿಳಿಯಿರಿ. 

ಫ್ಲಿಪ್‌ಕಾರ್ಟ್ ಮೆಗಾ ಸೇವಿಂಗ್ ಡೇಸ್ ಸೇಲ್ ನಲ್ಲಿ ಐಫೋನ್ 15 ಆಫರ್: 
ಮಾರುಕಟ್ಟೆಯಲ್ಲಿ iPhone 15 ಬೆಲೆ ₹ 79,900. ಆದರೆ, ಈಗ  ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಕೇವಲ ₹ 65,999 ಗೆ  ಈ ಫೋನ್ ಖರೀದಿಸಬಹುದು.   ಅರ್ಥಾತ್,    ಫ್ಲಿಪ್‌ಕಾರ್ಟ್‌ನ ಮೆಗಾ ಸೇವಿಂಗ್ ಡೇಸ್ ಧಮಾಕಾ ಸೇಲ್ (Flipkart Mega Saving Days sale) ನಲ್ಲಿ ಬರೋಬ್ಬರಿ ₹ 13,000 ರಿಯಾಯಿತಿ ಲಭ್ಯವಿದೆ.  ಇದಲ್ಲದೆ ಈ ಮಾರಾಟದಲ್ಲಿ ವಿನಿಮಯ ಮಾಡಿಕೊಳ್ಳುವ ಮೂಲಕ  ₹ 50,000 ವರೆಗೆ ರಿಯಾಯಿತಿ ಪಡೆಯಬಹುದು. 

ಇದನ್ನೂ ಓದಿ- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಚಿಹ್ನೆಗಳು ಕಂಡುಬಂದರೆ ಫೋನ್ ಹ್ಯಾಕ್ ಆಗಿದೆ ಅಂತ ಅರ್ಥ..! 

ಹೌದು, ನಿಮ್ಮ ಬಳಿ iPhone 14 Pro Max  ಇದ್ದರೆ ನೀವು ಈ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಇಷ್ಟು ದೊಡ್ಡ ರಿಯಾಯಿತಿಯನ್ನು ಪಡೆಯಬಹುದಾಗಿದೆ. 

ಇನ್ನಿತರ ಎಕ್ಸ್‌ಚೇಂಜ್ ಆಫರ್: 
iPhone 14 Pro Max ಹೊರತಾಗಿ, ನೀವು iPhone 13 ಫೋನ್ ಎಕ್ಸ್‌ಚೇಂಜ್ ನಲ್ಲಿ 26 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಇದೇ ವೇಳೆ iPhone 14 ವಿನಿಮಯ ಮಾಡಿಕೊಳ್ಳುವ ಮೂಲಕ 29 ಸಾವಿರ ರೂಪಾಯಿಗಳವರೆಗೆ ಡಿಸ್ಕೌಂಟ್ ಲಭ್ಯವಿದೆ. 

ಇದನ್ನೂ ಓದಿ- Portable AC: ಬೇಸಿಗೆಯಲ್ಲಿ ಪೋರ್ಟಬಲ್ ಎಸಿ ಖರೀದಿಸುವ ಮೊದಲು ಈ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ

iPhone 15 ವಿಶೇಷಣಗಳು: 
ಐಫೋನ್ 15 6.7-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ, ಈ ಫೋನ್ ಇತ್ತೀಚಿನ A16 ಬಯೋನಿಕ್ ಚಿಪ್‌ನೊಂದಿಗೆ ಲಭ್ಯವಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಇದು ಅತ್ಯಂತ ವೇಗದ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News