ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ iPhone 12, iPhone 13 ಮೇಲೆ ಭರ್ಜರಿ ಆಫರ್‌ಗಳು

Amazon Great Freedom Sale: ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ 64ಜಿಬಿ ಸ್ಟೋರೇಜ್ ರೂಪಾಂತರದ ಐಫೋನ್‌ 12 ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಸುವರ್ಣಾವಕಾಶವಿದೆ. ಈ ಸೇಲ್‌ನಲ್ಲಿ ನೀವು Android ಫೋನ್‌ನ ಬೆಲೆಗೆ iPhone 12 ಅನ್ನು ಖರೀದಿಸಬಹುದು.

Written by - Yashaswini V | Last Updated : Aug 6, 2022, 03:14 PM IST
  • ಐಫೋನ್ 12 ಬೆಲೆ ಕಡಿಮೆಯಾಗಿದೆ.
  • ಈ ಸೇಲ್‌ನಲ್ಲಿ ನೀವು Android ಫೋನ್‌ನ ಬೆಲೆಗೆ iPhone 12 ಅನ್ನು ಖರೀದಿಸಬಹುದು.
  • ಏನಿದು ಆಫರ್ ತಿಳಿಯಿರಿ
ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ iPhone 12,  iPhone 13 ಮೇಲೆ ಭರ್ಜರಿ ಆಫರ್‌ಗಳು  title=
Amazon Great Freedom Sale

ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್: ಅಮೆಜಾನ್ ಮತ್ತೊಂದು ಸೇಲ್ ಈವೆಂಟ್ ಅನ್ನು ಪ್ರಾರಂಭಿಸಿದೆ. ಆಗಸ್ಟ್ 15 ರ ಮೊದಲು ಇ-ಕಾಮರ್ಸ್ ದೈತ್ಯ ತನ್ನ ವೇದಿಕೆಯಲ್ಲಿ ಗ್ರೇಟ್ ಫ್ರೀಡಮ್ ಸೇಲ್ ಅನ್ನು ಪ್ರಾರಂಭಿಸುತ್ತಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಮತ್ತು ಚಂದಾದಾರಿಕೆ ಇಲ್ಲದವರಿಗೆ ಇಂದಿನಿಂದ ಅಂದರೆ ಆಗಸ್ಟ್ 6 ರಿಂದ ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ ಆರಂಭವಾಗಿದೆ.  ಮಾರಾಟದ ಸಮಯದಲ್ಲಿ, ಐಫೋನ್ 12 ಸೇರಿದಂತೆ ಅನೇಕ ಐಫೋನ್‌ಗಳಲ್ಲಿ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ನೀವು ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಐಫೋನ್ 12 ಮತ್ತು ಐಫೋನ್ 13 ಎರಡೂ ಅಮೆಜಾನ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.  

ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ 64ಜಿಬಿ ಸ್ಟೋರೇಜ್ ರೂಪಾಂತರದ ಐಫೋನ್‌ 12 ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಸುವರ್ಣಾವಕಾಶವಿದೆ. ಈ ಸೇಲ್‌ನಲ್ಲಿ ನೀವು Android ಫೋನ್‌ನ ಬೆಲೆಗೆ iPhone 12 ಅನ್ನು ಖರೀದಿಸಬಹುದು.

ಇದನ್ನೂ ಓದಿ - Amazon Great Freedom Festival: ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಬೆಸ್ಟ್ ಡೀಲ್‌ಗಳು

64ಜಿಬಿ ಸ್ಟೋರೇಜ್ ಆಯ್ಕೆಯ iPhone 12 ಆರಂಭಿಕ ಬೆಲೆ 58,900 ರೂ.ಗೆ ಲಭ್ಯವಿದೆ. ಸ್ಮಾರ್ಟ್‌ಫೋನ್‌ನ ಬೆಲೆಯನ್ನು 2021 ರ ಅಂತ್ಯದ ವೇಳೆಗೆ ಅಧಿಕೃತವಾಗಿ ಕಡಿಮೆ ಮಾಡಲಾಗಿದೆ ಮತ್ತು ಇದರ ಬೆಲೆಯನ್ನು 65,990 ರೂ.ಗೆ ನಿಗದಿಗೊಳಿಸಲಾಗಿತ್ತು. ಅಂದರೆ ಗ್ರಾಹಕರಿಗೆ ಇದೀಗ  ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ ಐಫೋನ್ 12 ರೂ.7,090 ರಿಯಾಯಿತಿ ಸಿಗಲಿದೆ. ಐಫೋನ್ 12 ಹಳೆಯ ಸ್ಮಾರ್ಟ್‌ಫೋನ್ ಆಗಿದೆ, ಆದರೆ ಇದು ಇನ್ನೂ ಉತ್ತಮ ಕಾರ್ಯಕ್ಷಮತೆ ಮತ್ತು ಛಾಯಾಗ್ರಹಣದ ಅನುಭವವನ್ನು ನೀಡುತ್ತದೆ. 

ಇದನ್ನೂ ಓದಿ - ಸ್ಮಾರ್ಟ್‌ಫೋನ್ ಕ್ಲೀನ್ ಮಾಡುವಾಗ ಇರಲಿ ಎಚ್ಚರ, ಈ ತಪ್ಪುಗಳಾದರೆ ನಿಮಿಷಗಳಲ್ಲಿ ಹಾಳಾಗುತ್ತೆ ಫೋನ್

ಆದಾಗ್ಯೂ, ಸ್ವಲ್ಪ ಹೆಚ್ಚು ಹಣ ಹಾಕಿ ಫೋನ್ ಖರೀದಿಸಲು ಸಿದ್ದವಿದ್ದರೆ ನೀವು ಐಫೋನ್ 13 ಖರೀದಿಸಬಹುದು. ಹ್ಯಾಂಡ್‌ಸೆಟ್‌ನ ಆರಂಭಿಕ ಬೆಲೆ ರೂ 68,900 ಆಗಿದ್ದರೆ, ಸಾಧನದ ಮೂಲ ಚಿಲ್ಲರೆ ಬೆಲೆ ರೂ 79,900 ಆಗಿದೆ. ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ  ಖರೀದಿದಾರರು 11,000 ರೂ.ಗಳ ರಿಯಾಯಿತಿ ಪಡೆಯುತ್ತಿದ್ದಾರೆ. ನಿಮ್ಮ ಹಿಂದಿನ ಫೋನ್ ಅನ್ನು ಎಕ್ಸ್‌ಚೇಂಜ್ ಮಾಡುವುದರಿಂದ 13,150 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಇದು ಎರಡೂ ಐಫೋನ್‌ಗಳಿಗೆ ಅನ್ವಯಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News