Chandra Grahan 2022 : ಬ್ಲಡ್ ಮೂನ್‌ನ LIVE ರೋಮಾಂಚಕಾರಿ ನೋಟವನ್ನು ಇಲ್ಲಿ ವೀಕ್ಷಿಸಿ ..!

How to watch Blood Moon Live: ವರ್ಷದ ಮೊದಲ ಚಂದ್ರಗ್ರಹಣ ಪ್ರಾರಂಭವಾಗಿದೆ. ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ರಕ್ತದಂತೆ ಕೆಂಪಾಗಿ ಕಾಣಿಸಿಕೊಳ್ಳುತ್ತಾನೆ. ಹಾಗಾಗಿ ಅದನ್ನು ಬ್ಲಡ್ ಮೂನ್ ಎಂದು ಕರೆಯುತ್ತಾರೆ. ನಾಸಾದ ಲೈವ್ ಸ್ಟ್ರೀಮ್ ಮೂಲಕ ಭಾರತೀಯರು ಬ್ಲಡ್ ಮೂನ್ ನೋಡುವುದು ಸಾಧ್ಯವಾಗುತ್ತದೆ. 

Written by - Ranjitha R K | Last Updated : May 16, 2022, 09:50 AM IST
  • ವರ್ಷದ ಮೊದಲ ಚಂದ್ರಗ್ರಹಣವು ಬೆಳಿಗ್ಗೆ 07:57 ಕ್ಕೆ ಪ್ರಾರಂಭವಾಗಿದೆ
  • ಸುಮಾರು 5 ಗಂಟೆಗಳ ಕಾಲ ಚಂದ್ರಗ್ರಹಣವು ಇರುತ್ತದೆ.
  • ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಕೆಂಪು ಗೋಳದಂತೆ ಕಾಣಿಸುತ್ತಾನೆ.
Chandra Grahan 2022 :  ಬ್ಲಡ್ ಮೂನ್‌ನ LIVE ರೋಮಾಂಚಕಾರಿ ನೋಟವನ್ನು ಇಲ್ಲಿ ವೀಕ್ಷಿಸಿ ..!  title=
How to watch Blood Moon Live

How to watch Blood Moon Live: ವರ್ಷದ ಮೊದಲ ಚಂದ್ರಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 07:57 ಕ್ಕೆ ಪ್ರಾರಂಭವಾಗಿದೆ. ಮಧ್ಯಾಹ್ನ 12:20 ರವರೆಗೆ ಚಂದ್ರಗ್ರಹಣ ಮುಂದುವರೆಯಲಿದೆ. ಅಂದರೆ, ಸುಮಾರು 5 ಗಂಟೆಗಳ ಕಾಲ ಚಂದ್ರಗ್ರಹಣವು  ಇರುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ಹುಣ್ಣಿಮೆಯ ಚಂದ್ರನು ಕೆಂಪು ಗೋಳದಂತೆ ಕಾಣಿಸುತ್ತಾನೆ. ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಈ ಸಂಪೂರ್ಣ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸದಿದ್ದರೂ, ಭಾರತೀಯರು ಬ್ಲಡ್ ಮೂನ್ ವೀಕ್ಷಿಸುವುದು ಸಾಧ್ಯವಾಗುತ್ತದೆ. 

ಬ್ಲಡ್ ಮೂನ್  ನೇರ ಪ್ರಸಾರ ಮಾಡುತ್ತಿದೆ  ನಾಸಾ  :
ಬಾಹ್ಯಾಕಾಶ ಸಂಸ್ಥೆ ನಾಸಾ ವರ್ಷದ ಮೊದಲ ಚಂದ್ರಗ್ರಹಣವನ್ನು ನೇರ ಪ್ರಸಾರ ಮಾಡುತ್ತಿದೆ. ಈ ಲೈವ್ ಸ್ಟ್ರೀಮ್ ಮೂಲಕ, ಜನರು ಬ್ಲಡ್ ಮೂನ್‌ನ ಸುಂದರವಾದ ಮತ್ತು ರೋಮಾಂಚಕಾರಿ ದೃಶ್ಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ನಾಸಾ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ನಾಸಾದ ಸೈಟ್ ಮತ್ತು ಟ್ವಿಟರ್ ಮೂಲಕ ಜನರು ಬ್ಲಡ್ ಮೂನ್ ನೇರ ಪ್ರಸಾರವನ್ನು ವೀಕ್ಷಿಸಬಹುದು. 

 

ಇದನ್ನೂ ಓದಿ :  Chandra Grahan 2022 : ಚಂದ್ರಗ್ರಹಣ ಮುಗಿಯುತ್ತಿದ್ದಂತೆಯೇ ನಿಮ್ಮ ರಾಶಿಯ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿದರೆ ಆಗುವುದು ಲಾಭ

ಬ್ಲಡ್ ಮೂನ್ ಗೋಚರಿಸುವುದು ಯಾಕೆ ? 
ಚಂದ್ರಗ್ರಹಣದ ದಿನದಂದು ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಅದಕ್ಕಾಗಿಯೇ ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಚಂದ್ರಗ್ರಹಣದ ಸಮಯದಲ್ಲಿ ಚಂದ್ರನ ಬಣ್ಣ ಬದಲಾವಣೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಈ ಸಮಯದಲ್ಲಿ ಸೂರ್ಯನ ಬೆಳಕು ಭೂಮಿಯ ಮೂಲಕ ಹಾದು ಚಂದ್ರನ ಮೇಲೆ ಬೀಳುತ್ತದೆ. ಈ ನೆರಳಿನಿಂದಾಗಿ ಚಂದ್ರನ ಬಣ್ಣವು ಗ್ರಹಣದ ಸಮಯದಲ್ಲಿ ಕೆಂಪು, ತಾಮ್ರದಂತೆ ಕಾಣುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ಬ್ಲಡ್ ಮೂನ್ ನೋಡಲು ಬಯಸುವವರು ನಾಸಾದ ಸೈಟ್ ಅಥವಾ ಟ್ವಿಟರ್ ಖಾತೆಗೆ ಭೇಟಿ ನೀಡುವ ಮೂಲಕ ಅದರ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಇದನ್ನೂ ಓದಿ :  Chandra Grahan 2022: ಈ ರಾಶಿಯವರಿಗೆ ಅದೃಷ್ಟ, ವೃತ್ತಿ ಜೀವನದಲ್ಲಿ ಪ್ರಗತಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News