ಇಷ್ಟೊಂದು ಅಗ್ಗದ ಬೆಲೆಯಲ್ಲಿ ಸಿಗುತ್ತೆ ಈ ಸ್ಪೆಷಲ್ AC: ಇದನ್ನು ಬೆಡ್ ಬಳಿಯೇ ಇಡಬಹುದು!

ಇದೀಗ ನಾವು ನಿಮಗೊಂದು ವಿಶೇಷ ಎಸಿಯ ಬಗ್ಗೆ ಹೇಳಲಿದ್ದೇವೆ. ಈ ಎಸಿಯನ್ನು ಹಾಸಿಗೆಯ ಪಕ್ಕದಲ್ಲಿಯೇ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ, ಆನ್ ಮಾಡಿದ ಚಿಟಿಕೆಯಲ್ಲಿ ರೂಮ್ ನ್ನು ತಂಪಾಗಿಸುತ್ತದೆ.

Written by - Bhavishya Shetty | Last Updated : Aug 16, 2022, 10:35 AM IST
    • ಎಸಿಯನ್ನು ಹಾಸಿಗೆಯ ಪಕ್ಕದಲ್ಲಿಯೇ ಇಟ್ಟುಕೊಳ್ಳಬಹುದು
    • ಈ ಎಸಿಯನ್ನು ನೀವು Alibaba.com ನಲ್ಲಿ ಖರೀದಿಸಬಹುದು
    • ಎಸಿಯನ್ನು ಪೈಪ್ ಮೂಲಕ ಹಾಸಿಗೆಗೆ ಜೋಡಿಸಲಾಗುತ್ತದೆ
ಇಷ್ಟೊಂದು ಅಗ್ಗದ ಬೆಲೆಯಲ್ಲಿ ಸಿಗುತ್ತೆ ಈ ಸ್ಪೆಷಲ್ AC: ಇದನ್ನು ಬೆಡ್ ಬಳಿಯೇ ಇಡಬಹುದು!  title=
Cooling Bed

ಪೋರ್ಟಬಲ್ ಮ್ಯಾಟ್ರೆಸ್ ಎಸಿ: ಅಲ್ಲಲ್ಲಿ ಮಳೆ ಸುರಿಯುತ್ತಿರಬಹುದು. ಆದರೆ ತೇವಾಂಶ ಮತ್ತು ಶಾಖ ಮಾತ್ರ ಮಾನವನನ್ನು ಬೆಂಬಿಡದೆ ಕಾಡುತ್ತಿದೆ. ಇದರಿಂದ ಪರಿಹಾರ ಪಡೆಯಲು ಎಸಿ ಅತ್ಯುತ್ತಮ ಆಯ್ಕೆಯಾಗಿದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಎಸಿಗಳು ಲಭ್ಯವಿವೆ. ಕೆಲವು ಎಸಿಗಳನ್ನು ಗೋಡೆಯ ಮೇಲೊಎ ಫಿಕ್ಸ್ ಮಾಡಿದರೆ, ಇನ್ನೂ ಕಿಟಕಿಗಳಲ್ಲಿ ಅಳವಡಿಸಲಾಗುತ್ತದೆ.  ಈ ಎರಡೂ ಎಸಿಗಳು ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುತ್ತವೆ. 

ಇದನ್ನೂ ಓದಿ: POCO: ಸೊಗಸಾದ ನೋಟದೊಂದಿಗೆ ಇದುವರೆಗೆ ಅಗ್ಗದ 5G ಸ್ಮಾರ್ಟ್‌ಫೋನ್ ಬಿಡುಗಡೆ

ಇದೀಗ ನಾವು ನಿಮಗೊಂದು ವಿಶೇಷ ಎಸಿಯ ಬಗ್ಗೆ ಹೇಳಲಿದ್ದೇವೆ. ಈ ಎಸಿಯನ್ನು ಹಾಸಿಗೆಯ ಪಕ್ಕದಲ್ಲಿಯೇ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ, ಆನ್ ಮಾಡಿದ ಚಿಟಿಕೆಯಲ್ಲಿ ರೂಮ್ ನ್ನು ತಂಪಾಗಿಸುತ್ತದೆ. ನೀವು ಹಾಸಿಗೆಯ ಮೇಲೆ ಕುಳಿತ ತಕ್ಷಣ, ನಿಮಗೆ ಅದ್ಭುತವಾದ ತಂಪು ಆಳಿ ಲಭಿಸುತ್ತದೆ. ನಿಮ್ಮಲ್ಲಿ ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ ಇಂತಹ ವಿಶೇಷ ಎಸಿ ಬಗ್ಗೆ  ತಿಳಿಸಲಿದ್ದೇವೆ.

ಈ ಎಸಿಯನ್ನು ನೀವು  Alibaba.com ನಲ್ಲಿ 15 ರಿಂದ 16 ಸಾವಿರ ರೂಪಾಯಿ ನೀಡಿ ಖರೀದಿಸಬಹುದು. ಈ ಎಸಿ ಒಂದಲ್ಲ, ಎರಡೂ ಘಟಕಗಳಿಂದ ಮಾಡಲ್ಪಟ್ಟಿದೆ. ಇದು ಎರಡೂ ಘಟಕಗಳನ್ನು ಸಂಯೋಜಿಸುವ ಮೂಲಕ AC ಅನ್ನು ಪೂರ್ಣಗೊಳಿಸಲಾಗುತ್ತದೆ. 

ಇದನ್ನೂ ಓದಿ: ಎಗ್ಗಿಲ್ಲದೆ ಸಾಗಿದೆ ಗಾಂಜಾ ಜಾಕಲೇಟ್ ಮಾರಾಟ : ಪಾನ್ ಬೀಡಾ ಅಂಗಡಿಯಲ್ಲಿ 46 ಕೆ .ಜಿ ಗಾಂಜಾ ಜಾಕಲೇಟ್

ಏರ್ ಕಂಡಿಷನರ್ ಹಾಸಿಗೆ ಬಳಿಯೇ ಇಡಬಹುದು. ಇದರಲ್ಲಿ ಎಸಿಯನ್ನು ಪೈಪ್ ಮೂಲಕ ಹಾಸಿಗೆಗೆ ಜೋಡಿಸಲಾಗುತ್ತದೆ. ಎಸಿಯನ್ನು ಪೈಪ್‌ಗೆ ಜೋಡಿಸಿದ ತಕ್ಷಣ ಹಾಸಿಗೆಗೆ ತಂಪಾದ ಗಾಳಿಯನ್ನು ನೀಡುತ್ತದೆ. ಗಾಳಿಯು ಪೈಪ್ ಮೂಲಕ ಹಾಸಿಗೆಯನ್ನು ಪ್ರವೇಶಿಸುತ್ತದೆ. ಬಳಿಕ ಕುಳಿತುಕೊಳ್ಳುವ ಅಥವಾ ಮಲಗಿರುವ ವ್ಯಕ್ತಿಯು ಅದ್ಭುತವಾದ ತಂಪಾದ ಗಾಳಿಯನ್ನು ಪಡೆಯಲು ಸಾಧ್ಯವಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News