Tata Tiago EV & Tigor EV Discount Offers : ಟಾಟಾ ಮೋಟಾರ್ಸ್ ತನ್ನ Tiago EV ಮತ್ತು Tigor EV ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ.Tiago EVಯ MY2023 ಸ್ಟಾಕ್ ಮತ್ತು ಇತ್ತೀಚಿನ MY2024 ಮಾಡೆಲ್ ಎರಡರ ಮೇಲೂ ರಿಯಾಯಿತಿ ನೀಡುತ್ತಿದೆ. ಆಫರ್ಗಳು ಈ ತಿಂಗಳು ಅಂದರೆ ಜನವರಿಗೆ ಮಾತ್ರ ಅನ್ವಯವಾಗುತ್ತದೆ. ಇದು ವಿತರಕರ ದಾಸ್ತಾನು ಮಟ್ಟವನ್ನು ಅವಲಂಬಿಸಿರುತ್ತದೆ. ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು 'ಗ್ರೀನ್ ಬೋನಸ್' ಸೇರಿದಂತೆ ಆಫರ್ ನೀಡಲಾಗುತ್ತದೆ.
ಗ್ರಾಹಕರು MY2024 Tiago EVಯಲ್ಲಿ 35,000 ರೂ.ವರೆಗೆ ಒಟ್ಟು ರಿಯಾಯಿತಿಗಳನ್ನು ಪಡೆಯಬಹುದು. ಇದು 15,000 ರೂ. ವಿನಿಮಯ ಬೋನಸ್ ಮತ್ತು 20,000 ರೂ. ಗ್ರೀನ್ ಬೋನಸ್ ಅನ್ನು ಒಳಗೊಂಡಿರುತ್ತದೆ. ಈ ಆಫರ್ ಎಲ್ಲಾ ರೂಪಾಂತರಗಳಿಗೆ ಅನ್ವಯವಾಗುತ್ತದೆ. ಹೆಚ್ಚುವರಿಯಾಗಿ, ಹಳೆಯ Tiago EV ಮಾದರಿಯಲ್ಲಿ (2023) 80,000 ರೂ.ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಲ್ಲಿ 15,000 ರೂ. ವಿನಿಮಯ ಬೋನಸ್ ಮತ್ತು 65,000 ರೂ. ವರೆಗಿನ ಗ್ರೀನ್ ಬೋನಸ್ ಒಳಗೊಂಡಿರುತ್ತದೆ.
ಇದನ್ನೂ ಓದಿ : Smartphone ಚಾರ್ಜ್ ಆಗುತ್ತಿಲ್ಲ ಎಂದಾದರೆ ಮನೆಯಲ್ಲಿಯೇ ಈ ರೀತಿ ಸರಿಮಾಡಿಕೊಳ್ಳಿ
ಮಾರುಕಟ್ಟೆಯಲ್ಲಿ MG ಕಾಮೆಟ್, ಸಿಟ್ರೊಯೆನ್ EC3 ಮತ್ತು ಟಾಟಾ ಪಂಚ್ EV ಗಳಿಗೆ ಚ್ಯಾಲೆಂಜ್ ಮಾಡುವ Tiago EV ಬೆಲೆಯು 8.69 ಲಕ್ಷದಿಂದ 12.04 ಲಕ್ಷದವರೆಗೆ ಇರುತ್ತದೆ. Tiago EV ಮಧ್ಯಮ ಶ್ರೇಣಿ ಮತ್ತು ದೀರ್ಘ ಶ್ರೇಣಿಯ ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. 19.2kWh ಬ್ಯಾಟರಿಯೊಂದಿಗೆ ಇದರ ಮಧ್ಯಮ ಶ್ರೇಣಿಯ ರೂಪಾಂತರವು 250 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. 24kWh ಬ್ಯಾಟರಿಯೊಂದಿಗೆ ದೀರ್ಘ ಶ್ರೇಣಿಯ ರೂಪಾಂತರವು 315 ಕಿಮೀ ವರೆಗೆ ವ್ಯಾಪ್ತಿಯನ್ನು ನೀಡುತ್ತದೆ.
ಇದರ ಹೊರತಾಗಿ, ಟಾಟಾ ಮೋಟಾರ್ಸ್ ತನ್ನ Tiago EVಗೆ ಕಾಂಪ್ಯಾಕ್ಟ್ ಸೆಡಾನ್ ಪರ್ಯಾಯವಾದ Tigor EV ಮೇಲೆ ಉತ್ತಮ ರಿಯಾಯಿತಿಯನ್ನು ನೀಡುತ್ತಿದೆ. ಗ್ರಾಹಕರು 1.05 ಲಕ್ಷದವರೆಗಿನ ಒಟ್ಟು ರಿಯಾಯಿತಿಯನ್ನು ಆನಂದಿಸಬಹುದು. ಇದರಲ್ಲಿ 75,000 ಫ್ಲಾಟ್ ಕ್ಯಾಶ್ ಡಿಸ್ಕೌಂಟ್ ಮತ್ತು 30,000 ರೂ. ಎಕ್ಸ್ಚೇಂಜ್ ಬೋನಸ್ ಇರುತ್ತದೆ. ಈ ರಿಯಾಯಿತಿಯು ಈ ತಿಂಗಳ ಅಂತ್ಯದವರೆಗೆ ಅನ್ವಯವಾಗುತ್ತದೆ. MY2023 ಅಥವಾ ಹಳೆಯ ಮಾದರಿಗಳಿಗೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ ಎನ್ನುವುದು ನೆನಪಿರಲಿ.
ಇದನ್ನೂ ಓದಿ : ಅಯೋಧ್ಯೆಯ ಸರಯು ನದಿಯಲ್ಲಿ ಸಂಚರಿಸಲಿದೆ ಭಾರತದ ಮೊದಲ ಸೌರಶಕ್ತಿ ಚಾಲಿತ ದೋಣಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.