Whatsapp- ವಾಟ್ಸಾಪ್‌ನಲ್ಲಿ ಮಿಸ್ ಆಗಿಯೂ ಈ 3 ಫೋಟೋ, ವಿಡಿಯೋಗಳನ್ನೂ ಶೇರ್ ಮಾಡಬೇಡಿ

Whatsapp: ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್ ಆಪ್ ಆಗಿದೆ. ನಮ್ಮಲ್ಲಿ ಅನೇಕ ಮಂದಿ ವಾಟ್ಸಾಪ್‌ನಲ್ಲಿನ ಪಾಲಿಸಿಯನ್ನು ಓದದೆಯೇ ಅದನ್ನು ಬಳಸುತ್ತಾರೆ. ಆದರೆ, ವಾಟ್ಸಾಪ್‌ನ ಈ ಪಾಲಿಸಿ ನಿಯಮಗಳನ್ನು ನಿರ್ಲಕ್ಷಿಸಿದರೆ ನೀವು ಜೈಲು ಪಾಲಾಗಬಹುದು ಎಂದು ನಿಮಗೆ ತಿಳಿದಿದೆಯೇ? ವಾಟ್ಸಾಪ್‌ನ ಪಾಲಿಸಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Jun 29, 2022, 09:53 AM IST
  • ವಾಟ್ಸಾಪ್‌ನಲ್ಲಿ ಕೆಲವು ರೀತಿಯ ಸಂದೇಶ, ಫೋಟೋ, ವಿಡಿಯೋಗಳನ್ನು ಕಳುಹಿಸುವುದನ್ನು ನಿಷೇಧಿಸಲಾಗಿದೆ.
  • ಇಂತಹ ಸಂದರ್ಭದಲ್ಲಿ ವಾಟ್ಸಾಪ್‌ ನಿಮ್ಮ ಖಾತೆಯನ್ನು ನಿಷೇಧಿಸಬಹುದು
  • ಈ ರೀತಿ ಮಾಡಿದರೆ ಜೈಲು ಪಾಲಾಗಬಹುದು
Whatsapp- ವಾಟ್ಸಾಪ್‌ನಲ್ಲಿ ಮಿಸ್ ಆಗಿಯೂ ಈ 3 ಫೋಟೋ, ವಿಡಿಯೋಗಳನ್ನೂ ಶೇರ್ ಮಾಡಬೇಡಿ  title=
Whatsapp Policy

ವಾಟ್ಸಾಪ್‌ನ ಪಾಲಿಸಿ ನಿಯಮ: ಅತಿ ಹೆಚ್ಚು ಜನರು ಬಳಸುವ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್. ಈ ಸಾಮಾಜಿಕ ಸಂದೇಶ ಅಪ್ಲಿಕೇಶನ್ ಜನರ ಸಾಮಾನ್ಯ ಅಗತ್ಯವಾಗಿದೆ. ಇದನ್ನು ಚಾಟ್, ಆಡಿಯೋ ಮತ್ತು ವೀಡಿಯೊ ಕರೆಗಳಿಗೆ ಬಳಸಲಾಗುತ್ತದೆ. ಆದರೆ ಅನೇಕ ಜನರು ವಾಟ್ಸಾಪ್‌ನ ಪಾಲಿಸಿ ನಿಯಮಗಳನ್ನು ಓದದೆ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಆದರೆ, ವಾಟ್ಸಾಪ್‌ನ ಈ ಪಾಲಿಸಿ ನಿಯಮಗಳನ್ನು ನಿರ್ಲಕ್ಷಿಸಿದರೆ ನೀವು ಜೈಲು ಪಾಲಾಗಬಹುದು ಎಂದು ನಿಮಗೆ ತಿಳಿದಿದೆಯೇ? ವಾಟ್ಸಾಪ್‌ನ ಪಾಲಿಸಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು. ನಿರಂತರವಾಗಿ ವಾಟ್ಸಾಪ್‌ನ ಪಾಲಿಸಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬಹುದು. ಹಾಗಾಗಿ, ವಾಟ್ಸಾಪ್‌ನಲ್ಲಿ ಯಾವುದೇ ಸಂದೇಶಗಳನ್ನೂ ಫಾರ್ವರ್ಡ್ ಮಾಡುವ ಮೊದಲು ಹಾಗೂ ಫೋಟೋ, ವಿಡಿಯೋಗಳನ್ನು ಸೆಂಡ್ ಮಾಡುವ ಮೊದಲು ಬಹಳ ಎಚ್ಚರದಿಂದಿರುವುದು ಅಗತ್ಯ. 

ವಾಟ್ಸಾಪ್‌ನ ನೀತಿಯ ಅಡಿಯಲ್ಲಿ, ಸಮಾಜಕ್ಕೆ ಹಾನಿಕಾರಕ ಅಥವಾ ಸಮಾಜವನ್ನು ವಿಭಜಿಸುವ ಯಾವುದೇ ಫೋಟೋ ಅಥವಾ ವೀಡಿಯೊವನ್ನು ನೀವು ಹಂಚಿಕೊಳ್ಳುವಂತಿಲ್ಲ. ಇದನ್ನು ಮಾಡುವುದರಿಂದ, ವಾಟ್ಸಾಪ್‌ ನಿಮ್ಮ ಖಾತೆಯನ್ನು ನಿಷೇಧಿಸಬಹುದು. ವಾಟ್ಸಾಪ್‌ ಪ್ರತಿ ತಿಂಗಳು ಅಂತಹ ಖಾತೆಗಳನ್ನು ನಿಷೇಧಿಸುತ್ತದೆ. ಕಳೆದ ಮೇ ತಿಂಗಳಲ್ಲಿ ಕಂಪನಿಯು 16 ಲಕ್ಷ ಖಾತೆಗಳನ್ನು ಬ್ಲಾಕ್ ಮಾಡಿದೆ. ಆದರೆ ತೆರವುಗೊಳಿಸಿದ ನಂತರ, ನಿಮ್ಮ ಖಾತೆಯನ್ನು ನೀವು ಮರುಪ್ರಾರಂಭಿಸಬಹುದು.

ಇದನ್ನೂ ಓದಿ- ನೋಕಿಯಾಗೆ ಟಕ್ಕರ್ ನೀಡಿದ ಕ್ಯೂಬಾಟ್ ಪಾಕೆಟ್ ಮಿನಿ- ಇದರ ಬೆಲೆ, ವೈಶಿಷ್ಟ್ಯ

ಈ ರೀತಿ ಮಾಡಿದರೆ ಜೈಲು ಪಾಲಾಗಬಹುದು:
ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರನ್ನು ಬಂಧಿಸುವ ಹಕ್ಕು ಪೊಲೀಸರಿಗೂ ಇದೆ. ಅಂಥವರನ್ನು ಜೈಲಿಗೆ ಕಳುಹಿಸುವ ಹಕ್ಕು ಪೊಲೀಸರಿಗೆ ಇದೆ. ವಾಟ್ಸಾಪ್‌ನ ನೀತಿಯ ಪ್ರಕಾರ, ಇದು ಅಪರಾಧ ವರ್ಗದ ಅಡಿಯಲ್ಲಿ ಬರುತ್ತದೆ. ಉದಾಹರಣೆಗೆ ದೆಹಲಿಯಲ್ಲಿ ನಡೆದ ಗಲಭೆಯನ್ನೇ ತೆಗೆದುಕೊಳ್ಳಿ... ಗಲಭೆಗೆ ಪ್ರಚೋದನೆ ನೀಡಲು ವಾಟ್ಸ್‌ಆ್ಯಪ್ ಬಳಸುತ್ತಿದ್ದ ಕಾರಣಕ್ಕಾಗಿ ಹಲವು ಮಂದಿಯನ್ನು ಅಲ್ಲಿ ಬಂಧಿಸಲಾಗಿತ್ತು. ಇದಕ್ಕಾಗಿ ವಿಶೇಷ ಗ್ರೂಪ್ ಮಾಡಿಕೊಂಡಿದ್ದರು.

ಇದನ್ನೂ ಓದಿ- ಫೋನ್ ನಂಬರ್‌ ಸೇವ್‌ ಮಾಡದೆ WhatsApp ಸಂದೇಶ ಕಳುಹಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಈ ರೀತಿಯ ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸಬೇಡಿ:
ಇದಲ್ಲದೆ ವಾಟ್ಸಾಪ್‌ನಲ್ಲಿ ಮಕ್ಕಳ ಪೋರ್ನ್, ಗಲಭೆಯ ಚಿತ್ರಗಳು ಮತ್ತು ಸಮಾಜವಿರೋಧಿ ವಿಷಯಗಳು ಸಂಪೂರ್ಣವಾಗಿ ಈ ವರ್ಗಕ್ಕೆ ಸೇರುತ್ತವೆ. ಇಂತಹ ಸಂದರ್ಭದಲ್ಲಿ ವಾಟ್ಸಾಪ್ ಗ್ರೂಪ್ ಅಡ್ಮಿನ್ ವಿರುದ್ಧವೂ ಕ್ರಮ ಕೈಗೊಳ್ಳಬಹುದು. ವದಂತಿಗಳನ್ನು ಹರಡುವುದು ಕೂಡ ಅಪರಾಧದ ವ್ಯಾಪ್ತಿಗೆ ಬರುತ್ತದೆ. ವಾಟ್ಸಾಪ್ ಬಹಳ ಸಮಯದಿಂದ ವಾಸ್ತವಾಂಶ ಪರಿಶೀಲನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ಬಳಕೆದಾರರ ತಪ್ಪು ಕಂಡು ಬಂದರೆ ವಾಟ್ಸಾಪ್ ಕ್ರಮ ತೆಗೆದುಕೊಳ್ಳುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News