Smartphone Tips And Tricks : ಸ್ಮಾರ್ಟ್‌ಫೋನ್ ಇಲ್ಲದೆ ಒಂದು ಕ್ಷಣವನ್ನು ಊಹಿಸುವುದು ಕೂಡಾ ಸಾಧ್ಯವಿಲ್ಲ. ಏನೇ ಕೆಲಸ ಮಾಡಬೇಕಾದರೂ ಸ್ಮಾರ್ಟ್ ಫೋನ್ ಇರಲೇ ಬೇಕು. ಒಂದು ಹೊತ್ತು ಊಟ ಇಲ್ಲದೆ ಇರಬಹುದು ಆದರೆ ಅರೆ ಕ್ಷಣ ಫೋನ್ ಇಲ್ಲದೆ ಇರುವುದು ಸಾಧ್ಯವಿಲ್ಲ ಎನ್ನುವಂತಾಗಿದೆ ನಮ್ಮ ಬದುಕು. ಸ್ವಲ್ಪ ಬಿಡುವು ಸಿಕ್ಕರೂ ಸಾಕು ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಆಡುತ್ತಾ ಇರುತ್ತದೆ. ಕೆಲವರಿಗೆ ನಿದ್ದೆ ಬರುವವರೆಗೂ ಫೋನ್ ನಲ್ಲಿ ವಿಡಿಯೋಗಳನ್ನು ನೋಡುವ ಅಭ್ಯಾಸವಿರುತ್ತದೆ.ಹೀಗೆ ಮೊಬೈಲ್ ನೋಡುತ್ತಲೇ ನಿದ್ದೆಗೆ ಜಾರುವವರೂ ಇದ್ದಾರೆ. ಇನ್ನು ಕೆಲವರು ಮೊಬೈಲ್ ನೋಡುತ್ತಾ ನೋಡುತ್ತಾ ನಿದ್ದೆ ಬಂತು ಎನ್ನುವ ಕಾರಣಕ್ಕೆ ಪಕ್ಕದಲ್ಲೇ ಮೊಬೈಲ್ ಇಟ್ಟು ಮಲಗಿ ಬಿಡುತ್ತಾರೆ. ಆದರೆ ಹೀಗೆ ಮಾದುವ್ದೂ ಬಹಳ ದೊಡ್ಡ ತಪ್ಪು. ಇದು ನಮ್ಮ ಪ್ರಾಣಕ್ಕೆ ಮುಳುವಾಗಬಹುದು.
ಮಲಗುವಾಗ ಮೊಬೈಲ್ ಹತ್ತಿರ ಇಟ್ಟುಕೊಳ್ಳಬೇಡಿ :
ಹೆಚ್ಚಿನ ಜನರು ತಮ್ಮ ಮೊಬೈಲ್ ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ. ಮೊಬೈಲ್ ತಾಪಮಾನವು ಬಹಳ ಹೆಚ್ಚಿರುತ್ತದೆ. ಇದರಿಂದ ನಿಮ್ಮ ಫೋನ್ ಸ್ಫೋಟಗೊಳ್ಳುವ ಅಪಾಯ ಇರುತ್ತದೆ. ದಿಂಬಿನ ಬಳಿ ನಿಮ್ಮ ಫೋನ್ ಇಟ್ಟು ಮಲಗುವುದರಿಂದ ನಿಮಗೂ ಅಪಾಯ ಎದುರಾಗಬಹುದು.
ಇದನ್ನೂ ಓದಿ : ಭಾರತದಲ್ಲಿ 76 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸಾಪ್: ಕಾರಣ ಏನ್ ಗೊತ್ತಾ?
ಶರ್ಟ್ ಜೇಬಿನಲ್ಲಿ ಮೊಬೈಲ್ ಇಡಬೇಡಿ :
ಇತ್ತೀಚಿಣ ದಿನಗಳಲ್ಲಿ ಶರ್ಟ್ ಜೇಬಿನಲ್ಲಿ ಇಟ್ಟಿದ್ದ ಫೋನ್‌ಗಳು ಸ್ಫೋಟಗೊಂಡ ಅನೇಕ ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ. ಅಂಗಿಯ ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಳ್ಳುವ ಅಭ್ಯಾಸ ನಿಮಗೂ ಇದ್ದರೆ,ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಅಂಗಿಯ ಜೇಬಿನಲ್ಲಿ ಹೆಚ್ಚು ಹೊತ್ತು ಮೊಬೈಲ್ ಇಡಬಾರದು. ಇದು ಸ್ಫೋಟದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್ ಮಾಡಬೇಡಿ :
ರಾತ್ರಿಯಿಡೀ ಮೊಬೈಲ್ ಅನ್ನು ಚಾರ್ಜ್‌ನಲ್ಲಿ ಇಡುವ ಅಭ್ಯಾಸ ಕೂಡಾ ಸರಿಯಲ್ಲ. ಇದು ಮೊಬೈಲ್‌ನ ಬ್ಯಾಟರಿಯನ್ನು ಹಾಳುಮಾಡುತ್ತದೆ.ಅಲ್ಲದೆ, ರಾತ್ರಿಯಿಡೀ ಚಾರ್ಜ್ ಗೆ ಹಾಕಿರುವ ಕಾರಣ ಮೊಬೈಲ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನೂ ಓದಿ : IMD Forecast: ಈ ಬಾರಿ ಭಾರತದಲ್ಲಿ ದೀರ್ಘಾವಧಿವರೆಗೆ ಉಷ್ಣ ತರಂಗಗಳು ಏಳಲಿವೆ! ಈ ತಿಂಗಳಿನಲ್ಲಿ ಅತಿ ಹೆಚ್ಚು ಬಿಸಿಲು ಇರಲಿದೆ
ಸ್ಥಳೀಯ ಚಾರ್ಜರ್‌ಗಳು ಮತ್ತು ಬ್ಯಾಟರಿಗಳನ್ನು ಬಳಸಬೇಡಿ :
ಮೊಬೈಲ್ ಚಾರ್ಜ್‌ಗಾಗಿ ಲೋಕಲ್ ಚಾರ್ಜರ್ ಅನ್ನು ಬಳಸಬಾರದು. ಯಾವಾಗಲೂ ಮೊಬೈಲ್‌ನ ಒರಿಜಿನಲ್ ಚಾರ್ಜರ್ ಅನ್ನೇ ಬಳಸಬೇಕು. ಹಾಗಾಗಿ ಮೊಬೈಲ್ ಫೋನ್‌ನ ಬ್ಯಾಟರಿ ಹಾಳಾಗಿದ್ದರೆ, ಲೋಕಲ್ ಬ್ಯಾಟರಿ ಬಳಸದೆ ಒರಿಜಿನಲ್ ಕಂಪನಿಯ ಬ್ಯಾಟರಿಯನ್ನೇ ಬಳಸಿ.ಲೋಕಲ್ ಬ್ಯಾಟರಿ ಮೊಬೈಲ್ ಬ್ಲಾಸ್ಟ್‌ಗೆ ಕಾರಣವಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ