Facebook Protect: ಭಾರತ ಸೇರಿದಂತೆ ಇತರ ದೇಶಗಳಿಗೆ ಸಿಗಲಿದೆ ಫೇಸ್ ಬುಕ್ ಪ್ರೊಟೆಕ್ಟ್, ಏನಿದು ಮತ್ತು ಯಾವ ಖಾತೆಗಳಿಗೆ ಈ ಸುರಕ್ಷತೆ ಸಿಗಲಿದೆ

Facebook Security: ಇದುವರೆಗೆ 1.5 ಮಿಲಿಯನ್‌ಗಿಂತಲೂ ಹೆಚ್ಚು ಹೈ ರಿಸ್ಕ್ ಫೇಸ್‌ಬುಕ್ ಖಾತೆಗಳು ಈ ಸೌಲಭ್ಯದ ಪ್ರಯೋಜನ ಪಡೆಯುತ್ತಿವೆ. ಅವುಗಳಲ್ಲಿ ಸುಮಾರು 9,50,000 ಖಾತೆಗಳು 2FAಗೆ ಎನ್ರೋಲ್ ಮಾಡಲಾಗಿದೆ.

Written by - Nitin Tabib | Last Updated : Dec 4, 2021, 01:08 PM IST
  • ಹೈರಿಸ್ಕ್ ಖಾತೆಗಳಿಗೆ ಫೇಸ್ ಬುಕ್ ಹೆಚ್ಚಿನ ಭದ್ರತೆ.
  • ಭಾರತ ಸೇರಿದಂತೆ ಹಲವು ದೇಶಗಳಲ್ಲಿ Facebook Protect ಜಾರಿ.
  • ಈಗಾಗಲೇ ವಿಶ್ವದ ಸುಮಾರು 1.5 ಮಿಲಿಯನ್ ಗೂ ಅಧಿಕ ಹೈರಿಸ್ಕ್ ಖಾತೆಗಳಿಗೆ ಈ ಸೌಲಭ್ಯ ಒದಗಿಸಲಾಗಿದೆ.
Facebook Protect: ಭಾರತ ಸೇರಿದಂತೆ ಇತರ ದೇಶಗಳಿಗೆ ಸಿಗಲಿದೆ ಫೇಸ್ ಬುಕ್ ಪ್ರೊಟೆಕ್ಟ್, ಏನಿದು ಮತ್ತು ಯಾವ ಖಾತೆಗಳಿಗೆ ಈ ಸುರಕ್ಷತೆ ಸಿಗಲಿದೆ title=
Facebook Protect Feature (File Photo)

Facebook Protect Feature: ಹೆಚ್ಚಿನ ಅಪಾಯದ ಖಾತೆಗಳ ಸುರಕ್ಷತೆಯನ್ನು ಹೆಚ್ಚಿಸಲು, ಫೇಸ್‌ಬುಕ್ Facebook Protect ಎಂಬ ಹೊಸ ಪ್ರೋಗ್ರಾಂ ಅನ್ನು ಜಾರಿಗೆ  ತಂದಿದೆ.  ಹೀಗಾಗಿ ಇದೀಗ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಇದು ಚಾಲನೆಗೊಳ್ಳಲಿದೆ. ಇದನ್ನು ಮೊದಲು 2018 ರಲ್ಲಿ US ನಲ್ಲಿ ಪರೀಕ್ಷಿಸಗಿತ್ತು  ಮತ್ತು US 2020ರ ಚುನಾವಣೆಗಳಲ್ಲಿ ವ್ಯಾಪಕವಾಗಿ ಇದನ್ನು ವಿಸ್ತರಿಸಲಾಯಿತು. ವರ್ಷದ ಅಂತ್ಯದ ವೇಳೆಗೆ ಸುಮಾರು 50 ದೇಶಗಳಲ್ಲಿ ಇದನ್ನು ಕಾರ್ಯಗತಗೊಳಿಸಲು ಕಂಪನಿಯು ಯೋಜಿಸಿದೆ.

ಫೇಸ್‌ಬುಕ್‌ನ ಸೆಕ್ಯುರಿಟಿ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ಅವರ ಪ್ರಕಾರ, "ಫೇಸ್‌ಬುಕ್ ಪ್ರೊಟೆಕ್ಟ್ ಎನ್ನುವುದು ಹ್ಯಾಕರ್‌ಗಳು ಅಥವಾ ಇತರ ಬೆದರಿಕೆಗಳಿಗೆ ಗುರಿಯಾಗುವ ಜನರಿಗೆ ಭದ್ರತಾ ಕಾರ್ಯಕ್ರಮವಾಗಿದೆ. ಇವುಗಳಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು, ಪತ್ರಕರ್ತರು, ಕಾರ್ಯಕರ್ತರು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿರುವ ಜನರು ಇದರಲ್ಲಿ ಶಾಮೀಲಾಗಿದ್ದಾರೆ. ಸರ್ಕಾರ ಮತ್ತು ಕಂಪನಿಗಳಿಗೆ ಉತ್ತರಿಸುವ ಹೊಣೆಗಾರಿಕೆ ಇವರ ಮೇಲಿರುತ್ತದೆ" ಎಂದಿದ್ದಾರೆ.

ಸೈಬರ್ ದಾಳಿಯಿಂದ ರಕ್ಷಿಸುತ್ತದೆ
ಫೇಸ್‌ಬುಕ್ ಪ್ರೊಟೆಕ್ಟ್‌ನ ಭಾಗವಾಗಿ, ಈ ಗುಂಪುಗಳಿಗೆ ಸೇರುವ ಬಳಕೆದಾರರು ಶೀಘ್ರದಲ್ಲೇ 'ಫೇಸ್‌ಬುಕ್ ಪ್ರೊಟೆಕ್ಟ್' ಆಯ್ಕೆಯನ್ನು ಸಕ್ರಿಯಗೊಳಿಸಲು ಫೇಸ್‌ಬುಕ್‌ಗೆ (Facebook Feature) ಆಯ್ಕೆಯನ್ನು ಕೇಳಲಿದೆ. ಸೈಬರ್ ದಾಳಿಯಿಂದ ತಮ್ಮ ಖಾತೆಗಳನ್ನು ರಕ್ಷಿಸಲು ಈ ಪ್ರೋಗ್ರಾಂ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಬಳಕೆದಾರರು ತಮ್ಮ ಖಾತೆಗಳಿಗೆ ಎರಡು ಅಂಶ ದೃಢೀಕರಣವನ್ನು (2FA) ಸಕ್ರಿಯಗೊಳಿಸುವ ಅವಶ್ಯಕತೆ ಇದೆ. 2FA ನಂತರ, ಖಾತೆಗೆ ಲಾಗಿನ್ ಮಾಡಲು SMS ಅಥವಾ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಮೂಲಕ OTP ಅಗತ್ಯವಿರುತ್ತದೆ. ಫೇಸ್‌ಬುಕ್ ಪ್ರೊಟೆಕ್ಟ್ ಅವರ ಖಾತೆಗಳನ್ನು ಹೆಚ್ಚುವರಿ ಭದ್ರತೆಗಾಗಿ ಮೇಲ್ವಿಚಾರಣೆ ಮಾಡಲಿದೆ. 

ಇದನ್ನೂ ಓದಿ-Jio ಬಳಕೆದಾರರಿಗೆ Good News! ಈ ಪ್ರೀಪೇಡ್ ಪ್ಲಾನ್ ಗಳ ಮೇಲೆ ಸಿಗುತ್ತಿದೆ ಶೇ.20 ರಷ್ಟು ರಿಯಾಯಿತಿ

Facebook Protect ಕೇವಲ ಒಂದು ಖಾತೆಗಾಗಿ 2FA ಅನ್ನು ಆನ್ ಮಾಡುವುದಕ್ಕಿಂತ ಹೆಚ್ಚು. ನಥಾನಿಯಲ್ ಗ್ಲೀಚರ್ ಪ್ರಕಾರ, "ಈ ಖಾತೆಗಳನ್ನು ರಕ್ಷಿಸಲು ನಾವು ಬ್ಯಾಕೆಂಡ್‌ನಲ್ಲಿ ಹೆಚ್ಚು ಸ್ವಯಂಚಾಲಿತ ಭದ್ರತೆಯನ್ನು ನೀಡುತ್ತೇವೆ. ಇದು ನಮ್ಮ ಸಿಸ್ಟಮ್‌ಗಳು ಮತ್ತು ತಂಡಗಳು ನಡೆಸುವ ಹೆಚ್ಚುವರಿ ಪತ್ತೆ ಕಾರ್ಯವಿಧಾನವಾಗಿದೆ. ಈ ಪ್ರೋಗ್ರಾಂನಿಂದ ಖಾತೆಗಳನ್ನು ನಮ್ಮ ಸಿಸ್ಟಮ್‌ಗಳಲ್ಲಿ ಫ್ಲ್ಯಾಗ್ ಮಾಡಲಾಗುತ್ತದೆ. ಇದರಿಂದ ನಮ್ಮ ತನಿಖಾಧಿಕಾರಿಗಳು ಅವುಗಳ ಪರಿಶೀಲನೆ ನಡೆಸಲಿದ್ದಾರೆ" ಎಂದಿದ್ದಾರೆ. 

ಇದನ್ನೂ ಓದಿ-Airtel ಬಳಕೆದಾರರಿಗೆ ಬಿಗ್ ಶಾಕ್ : ಭರ್ಜರಿ ಪ್ಲಾನ್ ಗಳನ್ನ ಬಂದ್ ಮಾಡಿದ ಕಂಪನಿ

ಇದುವರೆಗೆ ಸುಮಾರು 1.5 ಮಿಲಿಯನ್‌ಗಿಂತಲೂ ಹೆಚ್ಚು ಹೈರಿಸ್ಕ್ ಫೇಸ್‌ಬುಕ್ ಖಾತೆಗಳು ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುತ್ತಿವೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಅವುಗಳಲ್ಲಿ ಸುಮಾರು 9,50,000 ಖಾತೆಗಳು 2FA ಗೆ ದಾಖಲಾಗಿವೆ ಎಂದು ಗ್ಲಿಚರ್ ಹೇಳಿದ್ದಾರೆ.

ಇದನ್ನೂ ಓದಿ-Jio ಬಳಕೆದಾರರಿಗೆ ಬಿಗ್ ಶಾಕ್ : ಮತ್ತೆ ರಿಚಾರ್ಜ್ ಪ್ಲಾನ್‌ಗಳ ಬೆಲೆ ಹೆಚ್ಚಿಸಿದ ಕಂಪನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News