ನಕಲಿ mobile appಗಳಿಂದ ನಿಮ್ಮ ಬ್ಯಾಂಕ್ ಖಾತೆಗೆ ಆಪತ್ತು..! ಇವುಗಳನ್ನು ತಕ್ಷಣ ಗುರುತಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ, ನಕಲಿ ಬ್ಯಾಂಕಿಂಗ್ ಆಪ್‌ಗಳು ಕೂಡ ವಂಚನೆಯ ವಿಧಾನವಾಗಿ ಮಾರ್ಪಟ್ಟಿವೆ. ವಿಶೇಷವೆಂದರೆ, ಈ ಆಪ್‌ಗಳನ್ನು ಬಳಸುವ ಜನರು ಕೂಡ ಅವುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.

Written by - Ranjitha R K | Last Updated : Oct 6, 2021, 06:26 PM IST
  • ನಕಲಿ ಆಪ್‌ಗಳಿಂದಾಗಿ ಆನ್‌ಲೈನ್ ಬ್ಯಾಂಕಿಂಗ್ ವಂಚನೆ
  • ನಕಲಿ ಆಪ್‌ಗಳನ್ನು ಗುರುತಿಸುವುದು ಬಹಳ ಮುಖ್ಯ
  • ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ
ನಕಲಿ mobile appಗಳಿಂದ ನಿಮ್ಮ ಬ್ಯಾಂಕ್ ಖಾತೆಗೆ  ಆಪತ್ತು..! ಇವುಗಳನ್ನು ತಕ್ಷಣ ಗುರುತಿಸಿಕೊಳ್ಳಿ   title=
ನಕಲಿ ಆಪ್‌ಗಳಿಂದಾಗಿ ಆನ್‌ಲೈನ್ ಬ್ಯಾಂಕಿಂಗ್ ವಂಚನೆ (file photo)

ನವದೆಹಲಿ : ಜನರು ಬ್ಯಾಂಕುಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸಗಳನ್ನು ಮೊಬೈಲ್‌ನೊಂದಿಗೆ ಮನೆಯಲ್ಲಿಯೇ ಮಾಡುತ್ತಾರೆ. ಹೀಗೆ ಮಾಡುವುದರಿಂದ ಬ್ಯಾಂಕಿಗೆ ಹೋಗುವ ಸಮಯವನ್ನು ಉಳಿಸುತ್ತದೆ. ಎಲ್ಲಾ ಕೆಲಸಗಳು ಕೂಡಾ ಬೇಗನೇ  ಮುಗಿಯುತ್ತವೆ. ಆನ್‌ಲೈನ್ ಬ್ಯಾಂಕಿಂಗ್ (Online banking) ಸೌಲಭ್ಯಗಳು ಕೂಡ ಹೆಚ್ಚುತ್ತಿವೆ. ಇದರೊಂದಿಗೆ ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಜನರು ಬೀಳುತ್ತಿರುವ್ ಅಪಾಯ ಕೂಡಾ ಹೆಚ್ಚಾಗಿದೆ.  

ನಕಲಿ ಆಪ್‌ಗಳನ್ನು ಹೀಗೆ ಗುರುತಿಸಿ :
ಇತ್ತೀಚಿನ ದಿನಗಳಲ್ಲಿ, ನಕಲಿ ಬ್ಯಾಂಕಿಂಗ್ ಆಪ್‌ಗಳು (fake banking app) ಕೂಡ ವಂಚನೆಯ ವಿಧಾನವಾಗಿ ಮಾರ್ಪಟ್ಟಿವೆ. ವಿಶೇಷವೆಂದರೆ, ಈ ಆಪ್‌ಗಳನ್ನು ಬಳಸುವ ಜನರು ಕೂಡ ಅವುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಈ ನಕಲಿ ಬ್ಯಾಂಕಿಂಗ್ ಆಪ್‌ಗಳು ನೈಜ ಬ್ಯಾಂಕಿಂಗ್ ಆಪ್‌ಗಳಂತೆ ಕಾಣುತ್ತವೆ.  ಹೀಗಾಗಿ ಜನ ಸುಲಭವಾಗಿ ಮೋಸ ಹೋಗುತ್ತಾರೆ. ಪರಿಣಾಮವಾಗಿ ಸೈಬರ್ ಕ್ರಿಮಿನಲ್‌ಗಳು (Cyber criminal) ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುತ್ತಾರೆ. ಅದಕ್ಕಾಗಿಯೇ ನಕಲಿ ಅಪ್ಲಿಕೇಶನ್‌ಗಳನ್ನು ಗುರುತಿಸುವುದು ಬಹಳ ಮುಖ್ಯ., ಇದರಿಂದ ನೀವು ವಂಚನೆಯನ್ನು ತಪ್ಪಿಸಬಹುದು.

ಇದನ್ನೂ ಓದಿ : Jio ಬಳಕೆದಾರರಿಗೆ ಶಾಕ್ ..! ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ, ಫೋನ್ ಮಾಡಲು ಕೂಡಾ ಆಗುತ್ತಿಲ್ಲ, ಬಳಕೆದಾರರ ಆಕ್ರೋಶ

ನಕಲಿ ಅಪ್ಲಿಕೇಶನ್‌ಗಳನ್ನು ಹೇಗೆ ಬಳಸಲಾಗುತ್ತದೆ?
ಸೈಬರ್ ಅಪರಾಧಿಗಳು ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳ (Bank app) ಮೂಲಕ ಜನರ ಕಾಂಫಿಡೆನ್ಶಿಯಲ್ ಡೇಟಾ ಅಥವಾ ಆನ್‌ಲೈನ್ ಬ್ಯಾಂಕಿಂಗ್ ಐಡಿ-ಪಾಸ್‌ವರ್ಡ್ ಇತ್ಯಾದಿಗಳ ಮೇಲೆ  ಮೇಲೆ ಕಣ್ಣಿಡುತ್ತಾರೆ. ನಂತರ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ (Bank account) ಎಲ್ಲಾ ಹಣವನ್ನು ಖಾಲಿ ಮಾಡಿಬಿಡುತ್ತಾರೆ. 

ಆಪ್ ಎಲ್ಲಿಂದ ಡೌನ್ಲೋಡ್ ಮಾಡುತ್ತೀರಿ ಎನ್ನುವುದು ಮುಖ್ಯ : 
ಥರ್ಡ್ ಪಾರ್ಟಿ ಸೈಟ್ ನಿಂದ ಮೊಬೈಲ್ ನಲ್ಲಿ ಯಾವುದೇ ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಡಿ. ಫೋನ್‌ನಲ್ಲಿರುವ ಪ್ಲೇ ಸ್ಟೋರ್ (Play store) ಅಥವಾ ಆಪ್ ಸ್ಟೋರ್‌ನಿಂದ ಪರಿಶೀಲಿಸಿದ ಆಪ್‌ಗಳನ್ನು ಇರಿಸಿಕೊಳ್ಳಿ. ಇದರಿಂದ ವಂಚನೆಯ ಅಪಾಯಗಳನ್ನು ತಪ್ಪಿಸಬಹುದು. 

ಇದನ್ನೂ ಓದಿ : Amazon Flipkart Sale: ಮೂರೇ ದಿನದಲ್ಲಿ ಮಾರಾಟವಾಯ್ತು 1 ಲಕ್ಷಕ್ಕೂ ಹೆಚ್ಚು Xiaomi Smart TV

ಈ ವಿಷಯಗಳನ್ನು ತಿಳಿದುಕೊಳ್ಳಿ :
ನಕಲಿ ಆಪ್ ನಿಮ್ಮ ಮೊಬೈಲ್ ಫೋನ್ ಬ್ಯಾಟರಿಯನ್ನು ಬೇಗನೆ ಖಾಲಿ ಮಾಡಬಹುದು. ನಿಮ್ಮ ಮೊಬೈಲ್ ಫೋನ್ ಹೊಸದಾಗಿದ್ದರೂ,  ಚಾರ್ಜ್ ಪದೇ ಪದೇ ಖಾಲಿಯಾಗುತ್ತಿದ್ದರೆ, ಎಚ್ಚರದಿಂದಿರಿ. ಇದು ಮೊಬೈಲ್ ನಲ್ಲಿರುವ ಮಾಲ್ ವೇರ್ ಅಥವಾ ವೈರಸ್ ನ ಸಂಕೇತವಾಗಿರಬಹುದು.

ಡೌನ್‌ಲೋಡ್ ಮಾಡುವಾಗ ಈ ವಿಷಯವನ್ನು ಪರಿಶೀಲಿಸಿ:
ಯಾವುದೇ ಆಪ್ ಡೌನ್‌ಲೋಡ್ ಮಾಡುವಾಗ, ಅದರ ಹೆಸರಿನ ಕಾಗುಣಿತಕ್ಕೆ ಗಮನ ಕೊಡಿ. ಅದರಲ್ಲಿ ಏನಾದರೂ ತಪ್ಪಾಗಿದ್ದರೆ, ಅದನ್ನು ಡೌನ್‌ಲೋಡ್ ಮಾಡಬೇಡಿ. ಆಪ್ ಹೆಸರಿನಲ್ಲಿ ಯಾವುದಾದರೂ ಒಂದು ಪದ ತಪ್ಪಾಗಿದ್ದರೂ, ಅದು ನಕಲಿ ಆಪ್ ಎಂಬುದನ್ನು ಅರ್ಥಮಾಡಿಕೊಳ್ಳಿ. ಈ ಆಪ್ ನಿಂದ ನೀವು ಮೋಸ ಹೋಗಬಹುದು. ಅಂದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು.

ಅಪ್ಲಿಕೇಶನ್ ಅನ್ನು ಎಷ್ಟು ಬಾರಿ ಡೌನ್‌ಲೋಡ್ ಮಾಡಲಾಗಿದೆ :
ಅಪ್ಲಿಕೇಶನ್ ಡೌನ್‌ಲೋಡ್ (App download) ಮಾಡುವಾಗ, ಆ ಆಪ್ ಅನ್ನು ಎಷ್ಟು ಬಾರಿ ಡೌನ್‌ಲೋಡ್ ಮಾಡಲಾಗಿದೆ ಎಂಬುದನ್ನು ಸಹ ನೋಡಿಕೊಳ್ಳಿ. ಒಂದೇ ಹೆಸರಿನ ಹಲವು ಆಪ್‌ಗಳನ್ನು ನೋಡಿದರೆ, ಅದರ ಡೌನ್‌ಲೋಡ್‌ಗಳನ್ನು ನೋಡಿದರೆ, ಅಸಲಿ ಮತ್ತು ನಕಲಿ app ಗಳನ್ನು  ಸುಲಭವಾಗಿ ಗುರುತಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News