Jio ಬಳಕೆದಾರರಿಗೆ ಶಾಕ್ ..! ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ, ಫೋನ್ ಮಾಡಲು ಕೂಡಾ ಆಗುತ್ತಿಲ್ಲ, ಬಳಕೆದಾರರ ಆಕ್ರೋಶ

ಹ್ಯಾಶ್‌ಟ್ಯಾಗ್ ಜಿಯೋಡೌನ್ ಪ್ರಸ್ತುತ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಅನೇಕ ಬಳಕೆದಾರರು ತಮ್ಮ ಜಿಯೋ ಸಿಮ್ ಕಾರ್ಡ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

Written by - Ranjitha R K | Last Updated : Oct 6, 2021, 04:02 PM IST
  • ಜಿಯೋಡೌನ್ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್
  • ಜಿಯೋ ಸಿಮ್ ಕಾರ್ಡ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರ ದೂರು
  • ಕರೆ ಮಾಡುವುದು ಸಾಧ್ಯವಾಗುತ್ತಿಲ್ಲ ಬಳಕೆದಾರರಿಗೆ
Jio ಬಳಕೆದಾರರಿಗೆ ಶಾಕ್ ..! ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ, ಫೋನ್ ಮಾಡಲು ಕೂಡಾ ಆಗುತ್ತಿಲ್ಲ, ಬಳಕೆದಾರರ ಆಕ್ರೋಶ  title=
ಜಿಯೋಡೌನ್ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ (file photo)

ನವದೆಹಲಿ : Jio Network Down : ಕೆಲವು ದಿನಗಳ ಹಿಂದೆ ಫೇಸ್‌ಬುಕ್ ನೆಟ್ವರ್ಕ್ ಡೌನ್  ಟೈಮ್ ಎದುರಿಸಿದಾಗ, ಪ್ರಮುಖ ಸಾಮಾಜಿಕ ಮಾಧ್ಯಮ ಸೇವೆಗಳಾದ ಫೇಸ್‌ಬುಕ್ (Facebook) , ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ (Whatsapp) ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಈಗ ಜಿಯೋದಲ್ಲೂ ಅದೇ ರೀತಿಯ ಸಮಸ್ಯೆ ಎದುರಾಗಿದೆ. ರಿಲಯನ್ಸ್ ಜಿಯೋ (Relaince Jio) ತನ್ನ ನೆಟ್‌ವರ್ಕ್‌ನಲ್ಲಿ ಕೆಲವು ತೊಂದರೆಗಳನ್ನು ಎದುರಿಸುತ್ತಿದೆ. ಇದರಿಂದ ಆಕ್ರೋಶಗೊಂಡ ಜನರು ಈಗ JioDown  ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡುತ್ತಿದ್ದಾರೆ.

ಟ್ವಿಟರ್‌ನಲ್ಲಿ ಟಾಪ್ ಟ್ರೆಂಡಿಂಗ್ ಜಿಯೋಡೌನ್ :
ಹ್ಯಾಶ್‌ಟ್ಯಾಗ್ ಜಿಯೋಡೌನ್ (JioDown ) ಪ್ರಸ್ತುತ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಅನೇಕ ಬಳಕೆದಾರರು ತಮ್ಮ ಜಿಯೋ ಸಿಮ್ (Jio Sim)ಕಾರ್ಡ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಅನೇಕ ಬಳಕೆದಾರರಿಗೆ ಕರೆಗಳನ್ನು ಮಾಡಲು ಅಥವಾ ಇಂಟರ್ ನೆಟ್  ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ದೇಶಾದ್ಯಂತ ಜಿಯೋ ನೆಟ್‌ವರ್ಕ್‌ನಲ್ಲಿ  (Jio Network) ಸಮಸ್ಯೆ ಕಂಡುಬಂದಿದ್ದು, ಇದು ಬಳಕೆದಾರರನ್ನು ಕೆರಳಿಸಿದೆ. 

ಇದನ್ನೂ ಓದಿ : ಸ್ಟ್ರಾಂಗ್ ಬ್ಯಾಟರಿ ಮತ್ತು ದೊಡ್ಡ ಸ್ಕ್ರೀನ್ ನೊಂದಿಗೆ 4 ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ Oppo, ಬೆಲೆ ಮತ್ತು ಇತರ ಫೀಚರ್ ಗಳನ್ನು ತಿಳಿಯಿರಿ

ಎಲ್ಲಾ ಜಿಯೋ ಬಳಕೆದಾರರು ಈ ಸಮಸ್ಯೆಯನ್ನುಎದುರಿಸುತ್ತಿಲ್ಲ. ಜಿಯೋನ ಸಂಪೂರ್ಣ ನೆಟ್‌ವರ್ಕ್ ಅನೇಕರ ಫೋನ್‌ಗಳಲ್ಲಿ ಬರುತ್ತಿದ್ದು, ಅವರಿಗೆ ಇಂಟರ್ನೆಟ್ ಬಳಸುವುದು ಸಾಧ್ಯವಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ,  ಜಿಯೋ ಕೆಟ್ಟ ನೆಟ್‌ವರ್ಕ್ ಬಗ್ಗೆ,  2,000 ಕ್ಕೂ ಹೆಚ್ಚು ಬಳಕೆದಾರರು ದೂರು ನೀಡಿದ್ದಾರೆ. 

ಇಲ್ಲಿಯವರೆಗೆ, ಈ ವಿಷಯದ ಬಗ್ಗೆ ಜಿಯೋದಿಂದ (Jio) ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಕೆಲವು ಸ್ಥಳಗಳಲ್ಲಿ ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತಿರುವುದನ್ನು ಪರಿಗಣಿಸಿ, ಜಿಯೋ ನೆಟ್‌ವರ್ಕ್‌ನ ಸಮಸ್ಯೆ ದೇಶದ ಕೆಲವು ವಲಯಗಳಿಗೆ ಸೀಮಿತವಾಗಿರಬಹುದು ಎನ್ನಲಾಗಿದೆ. ಆದರೆ, ಜಿಯೋ ಕಡೆಯಿಂದ ಇದುವರೆಗೂ ಯಾವುದೇ ಹೇಳಿಕೆ ಬಂದಿಲ್ಲ. 

ಇದನ್ನೂ ಓದಿ : Whatsappನಲ್ಲಿ ಈಗ ಕೇವಲ ಒಂದು ಕ್ಲಿಕ್ ಮೂಲಕ ನಡೆದು ಹೋಗುತ್ತದೆ ಪೇಮೆಂಟ್

ಸಿಮ್ ಕೆಲಸ ಮಾಡದಿದ್ದರೆ ಏನು ಮಾಡಬೇಕು?
ನೀವು ಜಿಯೋ ಸಿಮ್ (Jio Sim) ಹೊಂದಿದ್ದರೆ ಮತ್ತು ನಿಮಗೆ ಇಂಟರ್ನೆಟ್ ಬಳಸಲು ಅಥವಾ ಕರೆ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಮಾಡಿ. ಇದು ಅತ್ಯಂತ ನಿಖರವಾದ ಪರಿಹಾರವಲ್ಲದಿದ್ದರೂ, ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ. ಇದರಿಂದ  ನಿಮ್ಮ ಸಮಸ್ಯೆ ಪರಿಹಾರವಾಗದಿದ್ದರೆ, ವೈಫೈ ನೆಟ್ ವರ್ಕ್ ನಿಂದ ಅಥವಾ ಇತರ ನೆಟ್ ವರ್ಕ್  ಪೂರೈಕೆದಾರರಿಂದ ಇಂಟರ್ನೆಟ್ ಆಕ್ಸೆಸ್ (Internet access) ಪಡೆದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News