Flipkart Big Saving Days Sale: ಟಿವಿ-ಫ್ರಿಜ್ ಮೇಲೆ ಸಿಗಲಿದೆ ಶೇ 75 ರಷ್ಟು ರಿಯಾಯಿತಿ

Flipkart Big Saving Days Sale ಮತ್ತೆ ಬಂದಿದೆ. ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಈ ಸೇಲ್ ನಲ್ಲಿ ಅನೇಕ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡಲಾಗುತ್ತಿದೆ  

Written by - Ranjitha R K | Last Updated : Mar 26, 2021, 12:00 PM IST
  • ಮತ್ತೆ ಬಂದಿದೆ Flipkart Big Saving Days Sale
  • ಮೊಬೈಲ್ ಫೋನ್, ಬಟ್ಟೆ, ಎಸಿ, ಟಿವಿ, ಫ್ರಿಜ್ ಮೇಲೆ ಭಾರೀ ರಿಯಾಯಿತಿ
  • ಎಸ್‌ಬಿಐ ಕಾರ್ಡ್‌ಯಿದ್ದರೆ ಸಿಗಲಿದೆ ಹೆಚ್ಚಿನ ರಿಯಾಯಿತಿ
Flipkart Big Saving Days Sale: ಟಿವಿ-ಫ್ರಿಜ್ ಮೇಲೆ ಸಿಗಲಿದೆ ಶೇ  75 ರಷ್ಟು ರಿಯಾಯಿತಿ title=
ಮತ್ತೆ ಬಂದಿದೆ Flipkart Big Saving Days Sale

ನವದೆಹಲಿ : Flipkart Big Saving Days Sale: ಹೋಳಿ ಹಬ್ಬ ಹತ್ತಿರವಾಗುತ್ತಿದೆ. ಹೋಳಿ ಹಬ್ಬದ ಸಲುವಾಗಿ , ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭಿಸಿದೆ. ಈ ಸೇಲ್  ಮಾರ್ಚ್ 24 ರಿಂದ ಆರಂಭವಾಗಿದೆ. ಈ ಸೇಲ್ ನಲ್ಲಿ ಮೊಬೈಲ್ ಫೋನ್, ಬಟ್ಟೆ, ಎಸಿ, ಟಿವಿ, ಫ್ರಿಜ್ ಮುಂತಾದ ವಸ್ತುಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿದೆ. 

Flipkart Big Saving Days Sale ಮತ್ತೆ ಬಂದಿದೆ. ಫ್ಲಿಪ್‌ಕಾರ್ಟ್‌ನ (flipkart) ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಈ ಸೇಲ್ ನಲ್ಲಿ ಅನೇಕ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಲ್ಲದೆ ಎಕ್ಸ್ ಚೇಂಜ್ ಆಫರ್ (exchange) ಅನ್ನು ಕೂಡಾ ನೀಡಲಾಗಿದೆ. ಇದಷ್ಟೇ ಅಲ್ಲದೆ, EMI ಮೂಲಕ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.   

ಇದನ್ನೂ ಓದಿ Google's Year In Search: ವಾರ್ಷಿಕ Search Report ಜಾರಿಗೊಳಿಸಿದ Google, WHF Jobs ಹಾಗೂ e-Coursesಗಳ ಅತಿ ಹೆಚ್ಚು ಹುಡುಕಾಟ

ಎಸ್‌ಬಿಐ ಕಾರ್ಡ್‌ಯಿದ್ದರೆ ಸಿಗಲಿದೆ ಹೆಚ್ಚಿನ ರಿಯಾಯಿತಿ : 
ಫ್ಲಿಪ್‌ಕಾರ್ಟ್‌ನ ಈ ಸೇಲ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಕಾರ್ಡ್ ಹೊಂದಿರುವವರಿಗೆ ಶೇಕಡಾ 10 ರಷ್ಟು ಇನ್ಸ್ಟಂಟ್  ರಿಯಾಯಿತಿ ನೀಡಲಾಗುತ್ತಿದೆ. ಕಾರ್ಡ್ ಹೊಂದಿರುವವರಿಗೆ EMI ಸೌಲಭ್ಯವನ್ನು ಕೂಡಾ ಒದಗಿಸಲಾಗಿದೆ. ಒಂದು ವೇಳೆ ಅತ್ಯಂತ ಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿಸಲು ಬಯಸುವುದಾದರೆ ಈ ಸೇಲ್ (Sale) ಒಳ್ಳೆಯ ಅವಕಾಶವಾಗಿದೆ. 

ಟಿವಿ-ಫ್ರಿಜ್ ಖರೀದಿಸಿದರೆ ಶೇ. 75 ರಷ್ಟು ರಿಯಾಯಿತಿ:

ಈ ಸೇಲ್ ನಲ್ಲಿ  ಟಿವಿ-ಫ್ರಿಜ್ ನಂತಹ ವಸ್ತುಗಳನ್ನು ಖರೀದಿಸಿದರೆ, 75 ಪ್ರತಿಶತದಷ್ಟು ರಿಯಾಯಿತಿ (Discount) ಪಡೆಯಬಹುದು. ಇದೇ ವೇಳೆ, ಸ್ಮಾರ್ಟ್ ಟಿವಿ  (smart Tv) ಖರೀದಿಯ ಮೇಲೆ ಶೇ 65ರಷ್ಟು ರಿಯಾಯಿತಿ ಸಿಗಬಹುದು. ಇನ್ನು ಎಸಿ ಖರೀದಿಸುವುದಾದರೆ 55 ಪ್ರತಿಶತದವರೆಗೆ ರಿಯಾಯಿತಿ ಸಿಗಲಿದೆ. 

ಇದನ್ನೂ ಓದಿ: Blood Groupಗೆ ಸಂಬಂಧಿಸಿದ ಈ ಸಂಶೋಧನಾ ವರದಿ ನಿಮಗೂ ತಿಳಿದಿರಲಿ

Iphone 11 64 GB ಮೇಲೆ ಬಂಪರ್ ರಿಯಾಯಿತಿ:

ಸುದ್ದಿಗಳ ಪ್ರಕಾರ,  Iphone 11 64 GB ವೆರಿಯೆಂಟ್ ಮೇಲೆ ಬಂಪರ್ ರಿಯಾಯಿತಿಯನ್ನು ನೀಡಲಾಗುತ್ತಿದೆ. 54,900 ರೂ. ಮಾರ್ಕೆಟ್ ರೇಟ್ ಇರುವ ಈ ಫೋನ್ ಕೇವಲ 46,999 ರೂ ಗಳಿಗೆ ಸಿಗಲಿದೆ. ಇನ್ನು  ಪೀಠೋಪಕರಣಗಳ ಖರೀದಿಯಲ್ಲೂ 80 ಪ್ರತಿಶತದಷ್ಟು ರಿಯಾಯಿತಿ ನೀಡಲಾಗುವುದು.

ಅಂದ ಹಾಗೆ ಈ ಸೇಲ್ ಇಂದೇ ಕೊನೆಯಾಗಲಿದೆ.  

ಇದನ್ನೂ ಓದಿ: WhatsApp Privacy Policy latest Update: WhatsApp ನೂತನ ಭದ್ರತಾ ನೀತಿಗೆ ತಡೆ ಬೀಳುವ ಸಾಧ್ಯತೆ, ನಡೆಯಲಿದೆ ವಿಸ್ತೃತ ತನಿಖೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News