Flipkart Sale ನಲ್ಲಿ ಈ ಫೋನ್ ಗಳ ಮೇಲೆ ಸಿಗಲಿದೆ ಮೂರು ಸಾವಿರ ರೂಪಾಯಿಗಳ ರಿಯಾಯಿತಿ

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ ಸೇಲ್  ನಡೆಯುತ್ತಿದೆ. ಇಂದು ಸೇಲ್ ನ ಮೂರನೇ ದಿನ. ಈ ಸೇಲ್ ನಲ್ಲಿ ಅನೇಕ ಫೋನ್‌ಗಳ ಮೇಲೆ ಉತ್ತಮ ರಿಯಾಯಿತಿ ಸಿಗುತ್ತಿವೆ. ಆದರೆ ಅತ್ಯಂತ ಜನಪ್ರಿಯ ಡೀಲ್  ಪೊಕೊ ಎಂ 3 ನಲ್ಲಿ ಸಿಗುತ್ತಿದೆ.

Written by - Ranjitha R K | Last Updated : Jul 12, 2021, 04:19 PM IST
  • ಇಂದು ಫ್ಲಿಪ್‌ಕಾರ್ಟ್‌ನ ಎಲೆಕ್ಟ್ರಾನಿಕ್ ಸೇಲ್ ನ ಮೂರನೇ ದಿನ.
  • ಪೊಕೊ ಎಂ 3 ನಲ್ಲಿ ಉತ್ತಮ ರಿಯಾಯಿತಿ ಸಿಗುತ್ತಿದೆ
  • 6000mah ಬ್ಯಾಟರಿಯೊಂದಿಗೆ ಅದ್ಭುತ ಕ್ಯಾಮೆರಾ ಹೊಂದಿರುವ ಫೋನ್.
Flipkart Sale ನಲ್ಲಿ ಈ ಫೋನ್ ಗಳ ಮೇಲೆ ಸಿಗಲಿದೆ ಮೂರು ಸಾವಿರ ರೂಪಾಯಿಗಳ ರಿಯಾಯಿತಿ  title=
ಪೊಕೊ ಎಂ 3 ನಲ್ಲಿ ಉತ್ತಮ ರಿಯಾಯಿತಿ ಸಿಗುತ್ತಿದೆ (photo zee news)

ನವ ದೆಹಲಿ :  ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ ಸೇಲ್ (Flipkart Electronic Sale)  ನಡೆಯುತ್ತಿದೆ. ಇಂದು ಸೇಲ್ ನ ಮೂರನೇ ದಿನ. ಈ ಸೇಲ್ ನಲ್ಲಿ ಅನೇಕ ಫೋನ್‌ಗಳ ಮೇಲೆ ಉತ್ತಮ ರಿಯಾಯಿತಿ ಸಿಗುತ್ತಿವೆ. ಆದರೆ ಅತ್ಯಂತ ಜನಪ್ರಿಯ ಡೀಲ್  ಪೊಕೊ ಎಂ 3 ನಲ್ಲಿ (POCO M3) ಸಿಗುತ್ತಿದೆ. ಈ ಫೋನ್ ಅನ್ನು ರಿಯಾಯಿತಿ  ದರದಲ್ಲಿ ಖರೀದಿಸಬಹುದು. ಈ ಫೋನ್ ನ ಬೆಲೆ 12,999 ರೂ. ಗಳಾಗಿವೆ. ಆದರೆ ಈ ಸೇಲ್ ನಲ್ಲಿ ಫೋನ್ ಮೇಲೆ 2 ಸಾವಿರ ರೂಪಾಯಿಗಳ ರಿಯಾಯಿತಿ ಸಿಗಲಿದೆ.  ಈ  ಫೋನ್‌ನ ಮೂಲ ರೂಪಾಂತರ 10,999 ರೂಗಳಿಗೆ ಸಿಗಲಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ನ (Axis bank credit card) ಮೂಲಕ ಖರೀದಿಸಿದರೆ, 10 ಪ್ರತಿಶತ ರಿಯಾಯಿತಿ ಕೂಡಾ ಸಿಗುತ್ತದೆ. 

6000mah ಬ್ಯಾಟರಿ :
 ಪೊಕೊ (POCO) ಫೋನ್ (6 GB RAM ಮತ್ತು 64 GB, 128 GB ಸ್ಟೋರೇಜ್) ಎರಡು ರೂಪಾಂತರಗಳಲ್ಲಿ ಬರುತ್ತದೆ. ಬೇಸ್ ರೂಪಾಂತರದ ಬೆಲೆ 10,999 ರೂ., ಟಾಪ್ ವೇರಿಯಂಟ್ ಬೆಲೆ 11,999 ರೂ. ಈ ಫೋನ್ ಗೆ Flipkart Electronic Sale ನಲ್ಲಿ ಸಾಕಷ್ಟು ಬೇಡಿಕೆ ಇದೆ. ಅಗ್ಗದ ದರದಲ್ಲಿ, ಸಿಗುವ ಈ ಫೋನ್ ನಲ್ಲಿ ಟ್ರಿಪಲ್ ಕ್ಯಾಮೆರಾ ಜೊತೆಗೆ 6 ಸಾವಿರ ಎಮ್ಎಹೆಚ್ ಬ್ಯಾಟರಿಯನ್ನು ನೀಡಲಾಗುತ್ತಿದೆ. 

ಇದನ್ನೂ ಓದಿ : Nokia New Smartphone: ಪವರ್ಫುಲ್ ಬ್ಯಾಟರಿ ಹೊಂದಿದ Nokia ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ, ಇಲ್ಲಿದೆ ಬೆಲೆ ಮತ್ತು ವೈಶಿಷ್ಟ್ಯ

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ರಿಯಾಯಿತಿಗಳು ಲಭ್ಯವಿದೆ :
ಈ ಫೋನ್ ಅನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ (Debit card) ಮೂಲಕ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ನೊಂದಿಗೆ (Axis bank credit card) ಫೋನ್ ಖರೀದಿಸಿದರೆ  10% ರಿಯಾಯಿತಿ  ಮತ್ತು ಆಕ್ಸಿಸ್ ಬ್ಯಾಂಕಿನ ಡೆಬಿಟ್ ಕಾರ್ಡ್‌ ಮೂಲಕ  ಫೋನ್ ಖರೀದಿಸಿದರೆ 500 ರೂ.ಗಳ ರಿಯಾಯಿತಿ ಸಿಗಲಿದೆ. 

ಫೋನ್‌ನ ವಿಶೇಷತೆ ಏನು? :
ಪೊಕೊ ಎಂ 3 ಫೋನ್   6.53 ರ ಐಪಿಎಸ್ ಎಲ್ಸಿಡಿ ಸ್ಕ್ರೀನ್ ನೊಂದಿಗೆ ಬರುತ್ತಿದೆ. ಈ ಫೋನ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಬರುತ್ತದೆ. ಅಲ್ಲದೆ,Qualcomm Snapdragon 662 ಚಿಪ್ಸೆಟ್ ಅನ್ನು ಹೊಂದಿದೆ. ಆಂಡ್ರಾಯ್ಡ್ 11 ಆಧಾರಿತ ಪೊಕೊ ಎಂ 3 ಇತ್ತೀಚಿನ ಎಂಐಯುಐನಲ್ಲಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ : Wi-Fi Password ಮರೆತಿರುವಿರಾ? ಈ ಸಿಂಪಲ್ ಟಿಪ್ಸ್ ಬಳಸಿ ವೈ-ಫೈ ಪಾಸ್‌ವರ್ಡ್ ಅನ್ನು ಮರುಪಡೆಯಿರಿ
 

ಕ್ಯಾಮೆರಾ :
ಟ್ರಿಪಲ್ ರಿಯರ್ ಕ್ಯಾಮೆರಾವನ್ನು (camera) ಫೋನ್‌ನಲ್ಲಿ ನೀಡಲಾಗಿದೆ. ಪ್ರಿಮೆರಿ  ಕ್ಯಾಮೆರಾ 48 ಮೆಗಾಪಿಕ್ಸೆಲ್‌ಗಳಾಗಿದ್ದು, ಎರಡು ಕ್ಯಾಮೆರಾಗಳು 2-2 ಮೆಗಾಪಿಕ್ಸೆಲ್‌ಗಳಾಗಿವೆ.  8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಿದೆ. ಈ ಫೋನ್ 18W ಫಾಸ್ಟ್ ಚಾರ್ಜಿಂಗ್ನೊಂದಿಗೆ ಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News