Google Search History ಡಿಲೀಟ್ ಮಾಡಲು ನ್ಯೂ ಫೀಚರ್: ಬಳಸುವುದು ಹೇಗೆ ?

ಸರ್ಚ್ ಹಿಸ್ಟರಿಗಳನ್ನು ಸುಲಭವಾಗಿ ಡಿಲೀಟ್ ಮಾಡಲು ಗೂಗಲ್ ಇದೀಗ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು 15 ನಿಮಿಷಗಳಲ್ಲಿ ಗೂಗಲ್ ನಲ್ಲಿ ಜಾಲಾಡಿದ ಮಾಹಿತಿಗಳನ್ನು ಸುಲಭವಾಗಿ ಡಿಲೀಟ್ ಮಾಡಬಹುದು. ಈ ಆಯ್ಕೆಯನ್ನು 'ಡಿಲೀಟ್ ಲಾಸ್ಟ್ 15 ಮಿನಿಟ್"(Delete Last 15 Minutes) ಎಂದೇ ಕರೆಯಲಾಗಿದೆ.

Last Updated : May 22, 2021, 12:02 PM IST
  • ಸರ್ಚ್ ಹಿಸ್ಟರಿ ಸುಲಭವಾಗಿ ಡಿಲೀಟ್ ಮಾಡಲು ಗೂಗಲ್ ಇದೀಗ ಹೊಸ ಫೀಚರ್
  • ಬಳಕೆದಾರರು 15 ನಿಮಿಷಗಳಲ್ಲಿ ಗೂಗಲ್ ನಲ್ಲಿ ಸುಲಭವಾಗಿ ಡಿಲೀಟ್ ಮಾಡಬಹುದು
  • ಈ ಆಯ್ಕೆಯನ್ನು ಡಿಲೀಟ್ ಲಾಸ್ಟ್ 15 ಮಿನಿಟ್
Google Search History ಡಿಲೀಟ್ ಮಾಡಲು ನ್ಯೂ ಫೀಚರ್: ಬಳಸುವುದು ಹೇಗೆ ? title=

ನವದೆಹಲಿ : ಸರ್ಚ್ ಹಿಸ್ಟರಿಗಳನ್ನು ಸುಲಭವಾಗಿ ಡಿಲೀಟ್ ಮಾಡಲು ಗೂಗಲ್ ಇದೀಗ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು 15 ನಿಮಿಷಗಳಲ್ಲಿ ಗೂಗಲ್ ನಲ್ಲಿ ಜಾಲಾಡಿದ ಮಾಹಿತಿಗಳನ್ನು ಸುಲಭವಾಗಿ ಡಿಲೀಟ್ ಮಾಡಬಹುದು. ಈ ಆಯ್ಕೆಯನ್ನು 'ಡಿಲೀಟ್ ಲಾಸ್ಟ್ 15 ಮಿನಿಟ್"(Delete Last 15 Minutes) ಎಂದೇ ಕರೆಯಲಾಗಿದೆ.

ಗೂಗಲ್ ಸಂಸ್ಥೆ(Google Institute) ಹೇಳುವಂತೆ ಕಳೆದ ಹಲವು ವರ್ಷಗಳಿಂದ ಬಳಕೆದಾರರು ಈ ಫೀಚರ್ ಗೆ ಬೇಡಿಕೆಯಿರಿಸಿದ್ದರು. ಆದರೆ ಕ್ಲಿಯರ್ ಹಿಸ್ಟರಿ ಆಯ್ಕೆ ಮಾತ್ರ ಇಲ್ಲಿಯವರೆಗೂ ಚಾಲ್ತಿಯಲ್ಲಿತ್ತು. ಇನ್ನು ಮುಂದೆ " ಡಿಲೀಟ್ ಲಾಸ್ಟ್ 15 ಮಿನಿಟ್" ಆಯ್ಕೆಯೂ ಲಭ್ಯವಾಗಲಿದೆ" ಎಂದಿದೆ.

ಇದನ್ನೂ ಓದಿ : ಸ್ಮಾರ್ಟ್ ಫೋನಿನಲ್ಲಿ Instagram Reels ಡೌನ್ ಲೋಡ್ ಮಾಡುವ ಸರಳ ವಿಧಾನ ತಿಳಿಯಿರಿ

ಹೊಸ ಆಯ್ಕೆಯ ಮೂಲಕ ಗೂಗಲ್(Google) ಬಳಕೆದಾರರು ತಮ್ಮ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ : face book ಡಾಟಾ ಲೀಕ್ ಆಗುವುದನ್ನು ತಡೆಯಲು ಈ setting ಇಟ್ಟುಕೊಳ್ಳಿ..

ಈ ನ್ಯೂ ಫೀಚರ್ ಬಳಸುವುದು ಹೇಗೆ ?

ಗೂಗಲ್ ಅಪ್ಲಿಕೇಶನ್(Google Application) ತೆರೆದು ಅದರಲ್ಲಿರುವ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡಿದಾಕ್ಷಣ ಸೆಟ್ಟಿಂಗ್ ಮೆನು ಕಾಣಿಸಿಕೊಳ್ಳುತ್ತದೆ. Setting ನಲ್ಲಿ ಡಿಲೀಟ್ ಲಾಸ್ಟ್ 15 ಮಿನಿಟ್ ಎಂಬ ಆಯ್ಕೆ ಗೋಚರಿಸುತ್ತದೆ. ಅದನ್ನು ಟ್ಯಾಪ್ ಮಾಡಿದಾಕ್ಷಣ ಸರ್ಚ್ ಹಿಸ್ಟರಿಗಳು ಡಿಲೀಟ್ ಆಗುತ್ತವೆ.

ಇದನ್ನೂ ಓದಿ : Xiaomi Mi 10i 5G: 108MP ಕ್ಯಾಮೆರಾ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ

ಇದು ಮಾತ್ರವಲ್ಲದೆ ಗೂಗಲ್(Google) 'ಕಳೆದ ಒಂದು ಗಂಟೆ' ಮತ್ತು 'ಕಳೆದ ಒಂದು ದಿನ'ದ ಸರ್ಚ್ ಹಿಸ್ಟರಿ ಡಿಲೀಟ್(Search History) ಮಾಡುವ ಆಯ್ಕೆಯನ್ನು ಕಲ್ಪಿಸಿದೆ. ಆದರೆ ಇದು ಪ್ರಸ್ತುತ ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ.

ಇದನ್ನೂ ಓದಿ : WhatsApp New Feature: WhatsAppನಲ್ಲಿ ಬಂತು ಮತ್ತೊಂದು ಹೊಸ ವೈಶಿಷ್ಟ್ಯ, ಇಲ್ಲಿದೆ ಡೀಟೇಲ್ಸ್

Google Search History Clear ಮಾಡುವುದು ಹೇಗೆ ?

Google Chrome ನಲ್ಲಿ "More" ಎಂಬ ಆಯ್ಕೆಯು ಕಾಣಿಸುತ್ತದೆ. ಇದರಲ್ಲಿ History ಎಂಬ ಫೀಚರ್ ಇದ್ದು, ಇದರ ಮೂಲಕ ಸುಲಭವಾಗಿ 'Clear Browsing Data' ಮಾಡಬಹುದು.

ಇದನ್ನೂ ಓದಿ : Airtel ನೀಡುತ್ತಿದೆ ಭರ್ಜರಿ ಆಫರ್; ಫ್ರೀ ರೀಚಾರ್ಜ್ ನೊಂದಿಗೆ ಸಿಗಲಿದೆ double benefit

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News