ನವದೆಹಲಿ: Google Search Policy Update 2022 - ಗೂಗಲ್ ಪ್ಲಾಟ್ಫಾರ್ಮ್ ಹಾಗೂ ಸರ್ಚ್ ಇಂಜಿನ್ ಗೆ ಯಾವುದೇ ಪರಿಚಯದ ಅವಶ್ಯಕತೆ ಇಲ್ಲ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಗೂಗಲ್ ಇತ್ತೀಚೆಗಷ್ಟೇ ಹೊಸ ಘೋಷಣೆಯೊಂದನ್ನು ಮಾಡಿದೆ. ಈ ಹೊಸ ಬದಲಾವಣೆಯ ಮೂಲಕ ಬಳಕೆದಾರರು ಗೂಗಲ್ ಸರ್ಚ್ ರಿಸಲ್ಟ್ ನಿಂದ ತಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಲು ಮನವಿ ಮಾಡಬಹುದು. ಹಾಗಾದರೆ ಬನ್ನಿ ಗೂಗಲ್ ನ ಈ ನಿರ್ಧಾರದ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ.
ಹೊಸ ಘೋಷಣೆ ಮಾಡಿದ ಗೂಗಲ್
ಗೂಗಲ್ ತನ್ನ ನೀತಿಯಲ್ಲಿ ಒಂದು ಮಹತ್ವದ ಬದಲಾವಣೆ ಮಾಡಿದೆ. ಈ ಕುರಿತು ಘೋಷಣೆ ಮಾಡಿರುವ ಗೂಗಲ್, ಬಳಕೆದಾರರು ಇನ್ಮುಂದೆ ಗೂಗಲ್ ಗೆ ಮನವಿ ಮಾಡುವ ಮೂಲಕ ಸರ್ಚ್ ಇಂಜಿನ್ ನಿಂದ ತಮ್ಮ ವೈಯಕ್ತಿಕ ಮಾಹಿತಿಗಳಾದಂತಹ ಫೋನ್ ನಂಬರ್, ಇ-ಮೇಲ್ ಐಡಿ ಹಾಗೂ ವಿಳಾಸ ಇತ್ಯಾದಿಗಳನ್ನು ತೆಗೆಯಿಸಬಹುದು ಎಂದಿದೆ. ಈ ಬಗ್ಗೆ ಮಾತನಾಡಿರುವ ಸರ್ಚ್ ಇಂಜಿನ್ ವಿಂಗ್ ನ ಜಾಗತಿಕ ನೀತಿ ಮುಖ್ಯಸ್ಥ ಮಿಷೆಲ್ ಚಾಂಗ್, ಬದಲಾಗುತ್ತಿರುವ ಕಾಲ ಮತ್ತು ಇಂಟರ್ನೆಟ್ ನ ಉಪಯೋಗವನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ-Paytm ನಿಂದ ಬಂಬಾಟ್ ಕೊಡುಗೆ! ಈ ಚಿಕ್ಕ ಕೆಲಸ ಮಾಡಿ ಶೇ.100ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ
ಇನ್ಮುಂದೆ ಯಾರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಸಾಧ್ಯವಿಲ್ಲ
ಸೈಬರ್ ಸೆಕ್ಯೂರಿಟಿ ಈ ಬದಲಾವಣೆಯ ಹಿಂದಿನ ಒಂದು ಮುಖ್ಯ ಉದ್ದೇಶವಾಗಿದೆ. ಬಳಕೆದಾರರ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಈ ಹೊಸ ನೀತಿಯ ಉದ್ದೇಶ ಕೆಟ್ಟ ಜನರನ್ನು ಗುರುತಿಸುವುದು ಮತ್ತು ದುರುದ್ದೇಶಪೂರ್ವಕವಾಗಿ ಇತರರ ಮಾಹಿತಿಯನ್ನು ಕದಿಯುವವರನ್ನು ತಡೆಯುವುದಾಗಿದೆ. ಆದರೆ, ಈ ಮನವಿಯನ್ನು ಯಾರು ಮಾಡಿದ್ದಾರೆ ಮತ್ತು ಅವರಿಗೆ ತಮ್ಮ ವೈಯಕ್ತಿಕ ಮಾಹಿತಿ ತೆಗೆದುಹಾಕುವ ಅವಶ್ಯಕತೆ ಏನಿದೆ ಎಂಬುದನ್ನು ಮೊದಲು ಗೂಗಲ್ ಪರಿಶೀಲಿಸಿ, ನಂತರ ಅವರ ಮಾಹಿತಿಯನ್ನು ತನ್ನ ಸರ್ವರ್ ನಿಂದ ತೆಗೆದುಹಾಕಲಿದೆ ಎನ್ನಲಾಗಿದೆ.
ಇದನ್ನೂ ಓದಿ-Diabetes Treatment: ಡಯಾಬಿಟಿಸ್ ರೋಗಿಗಳ ಚಿಕಿತ್ಸೆ ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ, ಹೇಗೆ ತಿಳಿಯಲು ಸುದ್ದಿ ಓದಿ
ಈ ಮೊದಲು ಈ ನೀತಿ ಜಾರಿಯಲ್ಲಿತ್ತು
ಇದುವರೆಗೆ ಗೂಗಲ್ ತನ್ನ ಬಳಕೆದಾರರಿಗೆ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಅಥವಾ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಕ್ರೆಡೆನ್ಸಿಯಲ್ ಗಳ ಜೊತೆಗೆ ಸರ್ಚ್ ರಿಸಲ್ಟ್ ನಿಂದ ಅಗತ್ಯ ಹಾಗೂ ವೈಯಕ್ತಿಕ ಎಂದು ಗುರುತಿಸಲಾದ ಮಾಹಿತಿಯನ್ನು ತೆಗೆದುಹಾಕಲು ಅನುಮತಿ ನೀಡಿತ್ತು. ಅಕ್ಟೋಬರ್ 2021 ರಿಂದ ಗೂಗಲ್ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರ ಅಥವಾ ತಂದೆ-ತಾಯಿ/ಪೋಷಕರ ಸರ್ಚ್ ರಿಸಲ್ಟ್ ನಿಂದ ಫೋಟೋ ತೆಗೆದುಹಾಕುವ ವಿನಂತಿಯನ್ನು ಸ್ವೀಕರಿಸಲು ಆರಂಭಿಸಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.