WhatsApp ಮೂಲಕ ಗೆಲ್ಲಬಹುದು ಬಿಯರ್ ಬಾಟಲಿಗಳನ್ನು..! ಹೇಗೆ ?

ಸಂದೇಶದ ಪ್ರಕಾರ, ಜನರಿಗೆ ಉಚಿತ ಬಿಯರ್ ಕ್ಯಾರೆಟ್ ಗೆಲ್ಲುವ ಅವಕಾಶವನ್ನು ನೀಡಲಾಗುತ್ತಿದೆ. ಹೈನೆಕೆನ್ 'ಬಿಯರ್ ಫಾದರ್ಸ್ ಡೇ ಸ್ಪರ್ಧೆ 2022 ರ ವಿಜೇತರಿಗೆ 5,000 ಕೂಲರ್ ಫುಲ್ ಬಿಯರ್' ನೀಡುವುದಾಗಿ ಹೇಳಲಾಗುತ್ತಿದೆ.   

Written by - Ranjitha R K | Last Updated : Jun 16, 2022, 01:09 PM IST
  • ಫಾದರ್ಸ್ ಡೇಗೆ ಸಿಗುತ್ತದೆಯಂತೆ ಉಚಿತ್ ಬಿಯರ್
  • ವಾಟ್ಸ್ ಅಪ್ ಮೂಲಕ ಗೆಲ್ಲಬಹುದಂತೆ ಬಿಯರ್
  • ವೈರಲ್ ಆಗುತ್ತಿದೆ ಹೀಗೊಂದು ಮೆಸೇಜ್
WhatsApp ಮೂಲಕ ಗೆಲ್ಲಬಹುದು ಬಿಯರ್ ಬಾಟಲಿಗಳನ್ನು..!  ಹೇಗೆ ? title=
Whatsapp scam (file photo)

ಬೆಂಗಳೂರು : ಲಕ್ಷಾಂತರ ಭಾರತೀಯರು WhatsApp ಅನ್ನು ಬಳಸುತ್ತಾರೆ. ಸಾಮಾಜಿಕ ಸಂದೇಶ ಪ್ಲಾಟ್‌ಫಾರ್ಮ್‌ಗಳಿಗೆ ಬಂದಾಗ ಇದು ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿದೆ. ಉತ್ತಮ ವೈಶಿಷ್ಟ್ಯಗಳ ಕಾರಣದಿಂದಾಗಿ, ಜನರು ಹೆಚ್ಚು WhatsApp ಅನ್ನು ಬಳಸುತ್ತಾರೆ. ಆದರೆ ಇದರಿಂದ ಅನೇಕ ಹಗರಣಗಳೂ ನಡೆಯುತ್ತವೆ. ಈಗ ಹೊಸ ಹಗರಣ  ಹೊರಬಿದ್ದಿದೆ. ವಿಶ್ವ ತಂದೆಯಂದಿರ ದಿನದ ಹೆಸರಿನಲ್ಲಿ ಕಳುಹಿಸುವ ಸಂದೇಶದ ಮೂಲಕ ವಾಟ್ಸಾಪ್ ಬಳಕೆದಾರರನ್ನು ಫಿಶಿಂಗ್ ಹಗರಣದಲ್ಲಿ ಸಿಲುಕಿಸಲಾಗುತ್ತಿದೆ. ಸಂದೇಶದ ಪ್ರಕಾರ, ಜನರಿಗೆ ಉಚಿತ ಬಿಯರ್ ಕ್ಯಾರೆಟ್ ಗೆಲ್ಲುವ ಅವಕಾಶವನ್ನು ನೀಡಲಾಗುತ್ತಿದೆ. ಹೈನೆಕೆನ್ 'ಬಿಯರ್ ಫಾದರ್ಸ್ ಡೇ ಸ್ಪರ್ಧೆ 2022 ರ ವಿಜೇತರಿಗೆ 5,000 ಕೂಲರ್ ಫುಲ್ ಬಿಯರ್' ನೀಡುವುದಾಗಿ ಹೇಳಲಾಗುತ್ತಿದೆ.  ಈ ರೀತಿಯ ಮೆಸೇಜ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿದೆಮೆಸೇಜ್ : 
ಸಂದೇಶದಲ್ಲಿ ಹೈನೆಕೆನ್ ಬಿಯರ್‌  ಅನ್ನು ತೋರಿಸುವ ಚಿತ್ರ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು ವೆಬ್‌ಸೈಟ್‌ಗೆ ಲಿಂಕ್ ಹಾಕಿರುವುದು ಕಾಣಿಸುತ್ತದೆ. ಲಿಂಕ್ ಅನ್ನು ಕ್ಲಿಕ್ ಮಾಡಿದ ಕೂಡಲೇ ವೈಯಕ್ತಿಕ ಮಾಹಿತಿ ಮತ್ತು ಖಾತೆಯ ವಿವರಗಳನ್ನು ಕದಿಯುವ ಅಪಾಯಕಾರಿ ಫಿಶಿಂಗ್ ಪುಟಕ್ಕೆ ಬಳಕೆದಾರರನ್ನು ಕರೆದೊಯ್ಯುತ್ತದೆ. ವಾಟ್ಸಾಪ್ ಫಿಶಿಂಗ್ ಹಗರಣವನ್ನು ಆನ್‌ಲೈನ್ ಥ್ರೆಟ್ಸ್‌ಅಲರ್ಟ್ಸ್, ಇಂಟರ್ನೆಟ್ ಸ್ಕ್ಯಾಮ್ ಟ್ರ್ಯಾಕಿಂಗ್ ವೆಬ್‌ಸೈಟ್ ವರದಿ ಮಾಡಿದೆ. ಯಾರು ಕೂಡ ಇಂತಹ ಬಲೆಗೆ ಬೀಳದಂತೆ ಎಚ್ಚರಿಕೆ ನೀಡಿದೆ. 

ಇದನ್ನೂ ಓದಿ : ಫೋನ್ ರೀಚಾರ್ಜ್ ಮಾಡಿದರೆ ಸಿಗುತ್ತದೆ 2400 ರೂ ಕ್ಯಾಶ್ ಬ್ಯಾಕ್ ..! ಏನಿದು ಆಫರ್ ?

ಕಂಪನಿ ಏನು ಹೇಳಿದೆ?
ಈ ಸ್ಪರ್ಧೆಯು ಟ್ವಿಟರ್‌ನ ಹಗರಣ ಎಂದು ಹೈನೆಕೆನ್ ಹೇಳಿಕೆಯಲ್ಲಿ ಹೇಳಿದ್ದಾರೆ.  ಈ ಹಗರಣವನ್ನು ಬೆಳಕಿಗೆತಂದಿರುವುದಕ್ಕಾಗಿ ಧನ್ಯವಾದಗಳು. ಯಾರು ಕೂಡಾ ಈ  ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಯಾವುದೇ ಸಂದೇಶಗಳನ್ನು ಫಾರ್ವರ್ಡ್ ಮಾಡಬೇಡಿ ಎಂದು ಮನವಿ ಮಾಡಿದೆ. 

ಲಿಂಕ್ ಅನ್ನು ಕ್ಲಿಕ್ ಮಾಡುವ ಬಳಕೆದಾರರಿಗೆ ಸ್ಪರ್ಧೆಯನ್ನು 20 ಕಾಂಟಾಕ್ಟ್ ಗಳೊಂದಿಗೆ ಶೇರ್ ಮಾಡುವಂತೆ ಹೇಳಲಾಗುತ್ತದೆ.  ಹಾಗಾಗಿ ಯಾವುದೇ ನಮ್ಬರಿನಿನದ ಇಂಥಹ ಸಂದೇಶ ಬಂದರೆ ಅದನ್ನು ಓಪನ್ ಮಾಡಳು ಹೋಗಬೇಡಿ. ಹೈನೆಕೆನ್ ಅವರ ಹೆಸರನ್ನು ಈ ರೀತಿ ಬಳಸಿರುವುದು ಇದೇ ಮೊದಲಲ್ಲ. ಈ ಹಿಂದೆ 2018ರಲ್ಲಿ ಹಾಗೂ 2020ರಲ್ಲಿ ಇದೇ ರೀತಿಯ ಸಂದೇಶವನ್ನು WhatsApp ನಲ್ಲಿ ವ್ಯಾಪಕವಾಗಿ  ಶೇರ್ ಮಾಡಲಾಗಿತ್ತು. ವಾಟ್ಸಾಪ್ ಮಾತ್ರವಲ್ಲದೆ, ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕವೂ ಈ ವಂಚನೆ ಸಂದೇಶಗಳು ವೈರಲ್ ಆಗಿವೆ.

ಇದನ್ನೂ ಓದಿ : ಹುಡುಗಿಯರು ಒಬ್ಬರೇ ಇರುವಾಗ Googleನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವ ವಿಷಯಗಳಿವು ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News