ಅಗ್ಗದ ಬೆಲೆಗೆ ಮಾರುಕಟ್ಟೆಗೆ ಕಾಲಿಡುತ್ತಿದೆ ಹೋಂಡಾ ಆಕ್ಟಿವಾ 7ಜಿ

Honda Activa 7G Launch Updates:ಹೋಂಡಾದ ಹೊಸ ಸ್ಕೂಟರ್ ಅದು ಹೋಂಡಾ ಆಕ್ಟಿವಾ 7 ಜಿ ಆಗಿರಬಹುದು ಎನ್ನಲಾಗಿದೆ. ವರದಿಗಳ ಪ್ರಕಾರ, ಆಕ್ಟಿವಾ 7G ಎಲೆಕ್ಟ್ರಿಕ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರಲಿದೆ.

Written by - Ranjitha R K | Last Updated : Jan 16, 2023, 11:55 AM IST
  • ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಹೋಂಡಾ ಆಕ್ಟಿವಾ
  • ಹೋಂಡಾ ಹೊಸ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
  • ಆಕ್ಟಿವಾ 7G ಎಲೆಕ್ಟ್ರಿಕ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರಲಿದೆ.
ಅಗ್ಗದ ಬೆಲೆಗೆ ಮಾರುಕಟ್ಟೆಗೆ ಕಾಲಿಡುತ್ತಿದೆ ಹೋಂಡಾ ಆಕ್ಟಿವಾ   7ಜಿ title=

Honda Activa 7G Launch Updates : ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಹೋಂಡಾ ಆಕ್ಟಿವಾ ಆಗಿದೆ. ಅನೇಕ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿವೆ. ಆದರೆ ಮಾರಾಟದ ವಿಷಯದಲ್ಲಿ ಆಕ್ಟಿವಾ ಮುಂದೆ ನಿಲ್ಲಲು ಯಾರಿಗೂ ಸಾಧ್ಯವಾಗಿಲ್ಲ. ನೀವು ಕೂಡಾ  ಹೋಂಡಾ ಆಕ್ಟಿವಾವನ್ನು ಖರೀದಿಸುವ ಯೋಚನೆಯಲ್ಲಿದ್ದರೆ ನಿಮ್ಮ ಪ್ಲಾನ್ ಅನ್ನು ಮುಂದೂಡುವುದು ಸೂಕ್ತ. ಏಕೆಂದರೆ ಶೀಘ್ರದಲ್ಲೇ ಹೋಂಡಾ ಹೊಸ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಹೋಂಡಾದ ಹೊಸ ಸ್ಕೂಟರ್ ಅದು ಹೋಂಡಾ ಆಕ್ಟಿವಾ 7 ಜಿ ಆಗಿರಬಹುದು ಎನ್ನಲಾಗಿದೆ. ವರದಿಗಳ ಪ್ರಕಾರ, ಆಕ್ಟಿವಾ 7G ಎಲೆಕ್ಟ್ರಿಕ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರಲಿದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಸಾಮಾಜಿಕ ಮಾಧ್ಯಮದಲ್ಲಿ ಟೀಸರ್ ಅನ್ನು ಕೂಡಾ ಹಂಚಿಕೊಂಡಿದೆ. ಕಂಪನಿಯು ಸ್ಕೂಟರ್‌ನಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ. ಈ ಸ್ಕೂಟರ್ ಅನ್ನು ಜನವರಿ 23  2023 ರಂದು ಬಿಡುಗಡೆ ಮಾಡಲಾಗುವುದು. ಡಿಸೆಂಬರ್ 2022 ರಲ್ಲಿ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಹೊಸ ಸ್ಕೂಟರ್‌ಗಾಗಿ H-ಸ್ಮಾರ್ಟ್ ಟ್ರೇಡ್‌ಮಾರ್ಕ್ ಅನ್ನು  ಅಪ್ಲೈ ಮಾಡಿತ್ತು.  ಹೊಸ ಸ್ಕೂಟರ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಇದನ್ನೂ ಓದಿ : ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಐಫೋನ್ 14ರ ಮೇಲೆ ಬಂಪರ್ ಡಿಸ್ಕೌಂಟ್

ಪ್ರಸ್ತುತ ಹೋಂಡಾ ಆಕ್ಟಿವಾ ಬೆಲೆ :
ಹೋಂಡಾ ಆಕ್ಟಿವಾ ಬೆಲೆ 73,086-76,587 ರೂ.ವರೆಗೆ ಇದೆ. ಇದರ Activa 6G STD ಬೆಲೆ  73,086 ರೂಪಾಯಿ. Activa 6G DLX ಬೆಲೆ 75,586 ರೂಪಾಯಿ. ಆಕ್ಟಿವಾ 125 ಡ್ರಮ್ (BSVI)ಬೆಲೆ  77,062 ರೂಪಾಯಿ. ಆಕ್ಟಿವಾ 125 ಡ್ರಮ್ ಅಲಾಯ್ (BSVI)ಬೆಲೆ  80,730 ರೂಪಾಯಿ. ಆಕ್ಟಿವಾ  125 ಡಿಸ್ಕ್ (ಬಿಎಸ್‌ವಿಐ)- ರೂ 8
ಬೆಲೆ  84235  ರೂಪಾಯಿ. Activa Premium Edition Deluxe ಅನ್ನು 76,587 ರುಪಾಯಿಗ್ ಖರೀದಿಸಬಹುದು.  ನೆನಪಿರಲಿ ಇಲ್ಲಿ ನೀಡಿರುವುದು ಎಕ್ಸ್ ಶೋರೂಂ ಬೆಲೆಯನ್ನು. ಹೊಸ Activa 7G ಬೆಲೆ ಅದರ ತಂತ್ರಜ್ಞಾನಕ್ಕೆ ಅನುಗುಣವಾಗಿ ಸ್ವಲ್ಪ ಹೆಚ್ಚಿರಬಹುದು ಎನ್ನಲಾಗಿದೆ. 

ಇದನ್ನೂ ಓದಿ :  LeEco S1 Pro: 11 ಸಾವಿರಕ್ಕೆ ಚೀನಾದಿಂದ ಐಫೋನ್ ಹೋಲುವ ಸ್ಮಾರ್ಟ್‍ಫೋನ್ ಬಿಡುಗಡೆ​

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News