ರಾತ್ರಿ ಮಲಗುವ ವೇಳೆ ದಿಂಬಿನಿಂದ ಮೊಬೈಲ್‌ ಎಷ್ಟು ದೂರವಿರಬೇಕು? ಹತ್ತಿರ ಇಟ್ಟರೆ ಆಗುವ ಸಮಸ್ಯೆಗಳೇನು?

mobile side effects: ರಾತ್ರಿ ಮಲಗುವಾಗ ಪಕ್ಕದಲ್ಲಿ ಮೊಬೈಲ್ ಇಟ್ಟುಕೊಳ್ಳುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳೋಣ.  

Written by - Bhavishya Shetty | Last Updated : Sep 13, 2024, 09:36 PM IST
    • ಮೊಬೈಲ್ ಇಟ್ಟುಕೊಳ್ಳುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳೋಣ.
    • ಮೊಬೈಲ್ ಪರದೆಯನ್ನು ನೋಡುತ್ತಾ ಮಲಗುವುದರಿಂದ ಕಣ್ಣುಗಳು ಒಣಗುತ್ತವೆ.
    • ಇದಲ್ಲದೆ ದೃಷ್ಟಿ ದೋಷ ಕಾಡಬಹುದು. ಜೊತೆಗೆ ಕಣ್ಣಿನ ಕಾಯಿಲೆಗಳ ಅಪಾಯವೂ ಹೆಚ್ಚುತ್ತದೆ
ರಾತ್ರಿ ಮಲಗುವ ವೇಳೆ ದಿಂಬಿನಿಂದ ಮೊಬೈಲ್‌ ಎಷ್ಟು ದೂರವಿರಬೇಕು? ಹತ್ತಿರ ಇಟ್ಟರೆ ಆಗುವ ಸಮಸ್ಯೆಗಳೇನು? title=
File Photo

how far mobile should be kept while sleeping: ರಾತ್ರಿ ಮಲಗುವಾಗ ತಲೆದಿಂಬಿನ ಪಕ್ಕದಲ್ಲೇ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಳ್ಳುವುದರಿಂದ ಅನೇಕ ರೀತಿಯ ಅಪಾಯ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅಭ್ಯಾಸ ಹಲವರಲ್ಲಿ ಇದ್ದರೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ.

ಇದನ್ನೂ ಓದಿ: ಬೆಳ್ಳಿ ಈ 3 ರಾಶಿಯವರ ಬದುಕನ್ನೇ ನರಕವಾಗಿಸುತ್ತೆ! ಉಂಗುರವಾಗಿ ಧರಿಸಿದರಂತೂ ಕೋಟ್ಯಾಧಿಪತಿಯೂ ಸಾಲದ ಸುಳಿಗೆ ಬೀಳುವನು; ತಪ್ಪಿದು ಒಂದಲ್ಲ ಒಂದು ಕಷ್ಟ!

ರಾತ್ರಿ ಮಲಗುವಾಗ ಪಕ್ಕದಲ್ಲಿ ಮೊಬೈಲ್ ಇಟ್ಟುಕೊಳ್ಳುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳೋಣ.

ನಿದ್ರಾಹೀನತೆ: ಮೊಬೈಲ್ ಪರದೆಯಿಂದ ಹೊರಸೂಸುವ ನೀಲಿ ಬೆಳಕು ನಮ್ಮ ದೇಹದಲ್ಲಿ ಮೆಲಟೋನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಮೆಲಟೋನಿನ್ ನಿದ್ರೆಯನ್ನು ಪ್ರಚೋದಿಸುವ ಹಾರ್ಮೋನ್ ಆಗಿದ್ದು, ಈ ಅಭ್ಯಾಸದಿಂದಾಗಿ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ.

ಕಣ್ಣಿನ ತೊಂದರೆಗಳು: ಮೊಬೈಲ್ ಪರದೆಯನ್ನು ನೋಡುತ್ತಾ ಮಲಗುವುದರಿಂದ ಕಣ್ಣುಗಳು ಒಣಗುತ್ತವೆ. ಇದಲ್ಲದೆ ದೃಷ್ಟಿ ದೋಷ ಕಾಡಬಹುದು. ಜೊತೆಗೆ ಕಣ್ಣಿನ ಕಾಯಿಲೆಗಳ ಅಪಾಯವೂ ಹೆಚ್ಚುತ್ತದೆ.

ಮಾನಸಿಕ ಒತ್ತಡ: ರಾತ್ರಿ ವೇಳೆ ಸಾಮಾಜಿಕ ಜಾಲತಾಣ, ಸುದ್ದಿ ಇತ್ಯಾದಿಗಳನ್ನು ನೋಡುವುದರಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಇದು ನಿದ್ರಾಹೀನತೆ ಮತ್ತು ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ಕ್ಯಾನ್ಸರ್ ಅಪಾಯ: ಕೆಲವು ಅಧ್ಯಯನಗಳ ಪ್ರಕಾರ, ರಾತ್ರಿಯಲ್ಲಿ ಮೊಬೈಲ್ ಫೋನ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವುದರಿಂದ ಕ್ಯಾನ್ಸರ್‌ ರೋಗದಂತಹ ಅಪಾಯವನ್ನು ಹೆಚ್ಚಿಸುತ್ತದೆ.

ಹೃದಯ ಸಂಬಂಧಿ ಸಮಸ್ಯೆಗಳು: ಮೊಬೈಲ್‌ನಿಂದ ಹೊರಸೂಸುವ ವಿಕಿರಣ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಅಲ್ಲದೆ ರಕ್ತದೊತ್ತಡವನ್ನು ಸಹ ಹೆಚ್ಚಿಸುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಅದರಲ್ಲೂ ಮಕ್ಕಳು ರಾತ್ರಿ ವೇಳೆ ಮೊಬೈಲ್ ಬಳಸುತ್ತಾರೆ. ಹಾಗಾಗಿ ಫೋನ್‌ʼಗಳನ್ನು ದೂರವಿಡುವುದು ಅಥವಾ ರಾತ್ರಿ ಮಲಗುವ ಮುನ್ನ ಫೋನ್ ಬಳಸದೇ ಇರುವುದು ಉತ್ತಮ.

ಇದನ್ನೂ ಓದಿ: ನಿಮ್ಮ ದೃಷ್ಟಿಗೆ ನಮ್ಮ ಚಾಲೆಂಜ್!‌ ಈ ಬಾಳೆಹಣ್ಣುಗಳ ರಾಶಿಯಲ್ಲಿ ಒಂದು ಹಾವು ಅಡಗಿದೆ: ಎಲ್ಲಿದೆ ಹೇಳಿ

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News