Instagram ಸ್ಟೋರಿಯನ್ನು ಡೌನ್‌ಲೋಡ್ ಮಾಡಿ ಸೇವ್ ಮಾಡುವುದು ಹೇಗೆ?

Instagram story: ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಂ ಕೂಡ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮವಾಗಿದೆ. ಇನ್ಸ್ಟಾಗ್ರಾಂನಲ್ಲಿ ಹೆಚ್ಚಾಗಿ ಫೋಟೋಗಳು ಮತ್ತು ಕಿರು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಆದರೆ, ಇದರಲ್ಲಿ ನಿಮ್ಮ ಫೋನ್‌ನ ಕ್ಯಾಮೆರಾ ರೋಲ್‌ಗೆ ನೀವು ನಿಮ್ಮ ಇನ್ಸ್ಟಾಗ್ರಾಂ ಸ್ಟೋರಿಯನ್ನು ಡೌನ್‌ಲೋಡ್ ಮಾಡಿ ಸೇವ್ ಮಾಡುವ ವಿಧಾನ ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Jun 20, 2023, 09:55 AM IST
  • Instagram ಸ್ಟೋರಿಯನ್ನು ಹೇಗೆ ಡೌನ್‌ಲೋಡ್ ಮಾಡುವುದು?
  • ನಿಮ್ಮ ಫೋನ್‌ಗೆ ಇನ್ಸ್ಟಾಗ್ರಾಂ ಸ್ಟೋರಿಯನ್ನು ಡೌನ್‌ಲೋಡ್ ಮಾಡಲು ಅತ್ಯಂತ ಸುಲಭ ವಿಧಾನವೆಂದರೆ ಅಪ್ಲಿಕೇಶನ್‌ನ ಅಂತರ್ನಿರ್ಮಿತ ಸೇವ್ ಆಯ್ಕೆಯನ್ನು ಬಳಸುವುದು.
  • ಈ ಆಯ್ಕೆಯು ನಿಮ್ಮ ಕಥೆಗಳಿಂದ ನಿಮ್ಮ ಫೋನ್‌ನ ಕ್ಯಾಮರಾ ರೋಲ್‌ಗೆ ಫೋಟೋಗಳು, ವೀಡಿಯೊಗಳು ಅಥವಾ ಎರಡನ್ನೂ ಡೌನ್‌ಲೋಡ್ ಮಾಡಲು ಅನುಮತಿ ನೀಡುತ್ತದೆ.
Instagram ಸ್ಟೋರಿಯನ್ನು  ಡೌನ್‌ಲೋಡ್ ಮಾಡಿ ಸೇವ್ ಮಾಡುವುದು ಹೇಗೆ?  title=

How to save Instagram story: ನೀವು ಇನ್ಸ್ಟಾಗ್ರಾಂ ಬಳಕೆದಾರರೇ! ನೀವು ನಿಮ್ಮ ಫೋನ್‌ನಲ್ಲಿ ಇನ್ಸ್ಟಾಗ್ರಾಂ ಸ್ಟೋರಿಯನ್ನು ಡೌನ್‌ಲೋಡ್ ಮಾಡಲು ಬಯಸುವಿರಾ? ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾದ ಸ್ಟೋರಿಯನ್ನು ಡೌನ್‌ಲೋಡ್ ಮಾಡಿ ಸೇವ್ ಮಾಡಲು ಹಲವು ವಿಧಾನಗಳಿವೆ. ನಾವು ಈ ಲೇಖನದಲ್ಲಿ ಇನ್ಸ್ಟಾಗ್ರಾಂನಲ್ಲಿ ನಿಮ್ಮ ಮೆಚ್ಚಿನ ಫೋಟೋಗಳು ಅಥವಾ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿ ಸೇವ್ ಮಾಡುವ ಸುಲಭ ವಿಧಾನವನ್ನು ತಿಳಿಸಲಿದ್ದೇವೆ. 

ನಿಮ್ಮ ಫೋನ್‌ನ ಕ್ಯಾಮೆರಾ ರೋಲ್‌ಗೆ ನಿಮ್ಮ ಇನ್ಸ್ಟಾಗ್ರಾಂ ಸ್ಟೋರಿಯನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: 
ನಿಮ್ಮ ಫೋನ್‌ಗೆ ಇನ್ಸ್ಟಾಗ್ರಾಂ ಸ್ಟೋರಿಯನ್ನು ಡೌನ್‌ಲೋಡ್ ಮಾಡಲು ಅತ್ಯಂತ ಸುಲಭ ವಿಧಾನವೆಂದರೆ ಅಪ್ಲಿಕೇಶನ್‌ನ ಅಂತರ್ನಿರ್ಮಿತ ಸೇವ್ ಆಯ್ಕೆಯನ್ನು ಬಳಸುವುದು. ಈ ಆಯ್ಕೆಯು ನಿಮ್ಮ ಕಥೆಗಳಿಂದ ನಿಮ್ಮ ಫೋನ್‌ನ ಕ್ಯಾಮರಾ ರೋಲ್‌ಗೆ ಫೋಟೋಗಳು, ವೀಡಿಯೊಗಳು ಅಥವಾ ಎರಡನ್ನೂ ಡೌನ್‌ಲೋಡ್ ಮಾಡಲು ಅನುಮತಿ ನೀಡುತ್ತದೆ. 

ಇದನ್ನೂ ಓದಿ- ಶೀಘ್ರದಲ್ಲೇ Android ಬೀಟಾದಲ್ಲಿ ಮೆಟಾ ಕ್ವೆಸ್ಟ್ ಹೊಂದಾಣಿಕೆಯನ್ನು ಸೇರಿಸಲಿದೆ ವಾಟ್ಸಪ್!

>> ಈ ವಿಧಾನದಿಂದ ಬಳಸಲು, ನಿಮ್ಮ ಫೋನ್‌ನಲ್ಲಿ ಇನ್ಸ್ಟಾಗ್ರಾಂ ಅಪ್ಲಿಕೇಶನ್ ಅನ್ನು ಓಪೆನ್ ಮಾಡಿ "ಮೈ ಸ್ಟೋರಿ" ಅನ್ನು ಟ್ಯಾಪ್ ಮಾಡಿರಿ.  
>>  "ಮೈ ಸ್ಟೋರಿ" ಪ್ಲೇ ಮಾಡಿದಾಗ ನೀವು ಡೌನ್‌ಲೋಡ್ ಮಾಡಲು ಬಯಸುವ ಫೋಟೋ ಅಥವಾ ವೀಡಿಯೊವನ್ನು ಹೊಂದಿರುವ ಸ್ಲೈಡ್ ಅನ್ನು ಸರ್ಚ್ ಮಾಡಿ. 
>> ಒಂದೊಮ್ಮೆ ನೀವು ಐಫೋನ್ ಬಳಕೆದಾರರಾಗಿದ್ದರೆ ಮೈ ಸ್ಟೋರಿಯಿಂದ ಎಲ್ಲಾ ಸ್ಲೈಡ್‌ಗಳನ್ನು ಒಂದೇ ಬಾರಿಗೆ ಸೇವ್ ಮಾಡಬಹುದು. 
>> ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ  ಪ್ರತಿ ಸ್ಲೈಡ್ ಅನ್ನು ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಬೇಕಾಗುತ್ತದೆ. 

ಮೈ ಸ್ಟೋರಿ ಪುಟದಲ್ಲಿ, ಕೆಳಗಿನ ಬಲ ಮೂಲೆಯಲ್ಲಿ, ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.
ಆಂಡ್ರಾಯ್ಡ್ ಬಳಕೆದಾರರಾಗಿ ತೆರೆಯುವ ಮೆನುವಿನಲ್ಲಿ, ನೀವು ಸ್ಲೈಡ್ ವಿಷಯವನ್ನು ಅವಲಂಬಿಸಿ "ಫೋಟೋ ಉಳಿಸಿ" ಅಥವಾ "ವೀಡಿಯೊ ಉಳಿಸಿ" ಆಯ್ಕೆ ಮಾಡಬಹುದಾಗಿದೆ. 
ಇದು ನಿಮ್ಮ ಫೋನ್‌ನ ಸ್ಥಳೀಯ ಸಂಗ್ರಹಣೆಯಲ್ಲಿ ನೀವು ಆಯ್ಕೆ ಮಾಡಿದ ಫೈಲ್ ನಲ್ಲಿ ಫೋಟೋ ಅಥವಾ ವಿಡಿಯೋವನ್ನು ಸೇವ್ ಮಾಡಲು ಅನುವುಮಾಡಿಕೊಡುತ್ತದೆ. 

ಇದನ್ನೂ ಓದಿ- ಗ್ರಾಹಕರು ಆಂಡ್ರಾಯ್ಡ್‌ಗಿಂತ ಆಪಲ್ ಐಫೋನ್‌ಗೆ ಹೆಚ್ಚಿನ ಆದ್ಯತೆ ನೀಡಲು ಇವೇ ಪ್ರಮುಖ ಕಾರಣಗಳು

ಐಫೋನ್‌ನಲ್ಲಿ,  ತೆರೆಯುವ ಮೆನುವಿನಲ್ಲಿ, ನೀವು  "ಸೇವ್" ಎಂಬ ಆಯ್ಕೆಯನ್ನು ಪಡೆಯುತ್ತೀರಿ. ಬಳಿಕ ಫೋಟೋ ಸೇವ್ ಅಥವಾ ವಿಡಿಯೋ ಸೇವ್ ಎಂಬ ಬೇರೆ ಬೇರೆ ಆಯ್ಕೆಗಳು ಇದರಲ್ಲಿ ಲಭ್ಯವಾಗಲಿವೆ. ಒಂದೊಮ್ಮೆ ನೀವು ಫುಲ್ ಸ್ಟೋರಿಯನ್ನು ಒಂದೇ ವೀಡಿಯೊ ಫೈಲ್ ಆಗಿ ಡೌನ್‌ಲೋಡ್ ಮಾಡಲು ಬಯಸಿದರೆ "ಸ್ಟೋರಿ ಸೇವ್" ಆಯ್ಕೆಯನ್ನು ಟ್ಯಾಪ್ ಮಾಡಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News