Phone Gallery: ಫೋನ್‌ನಲ್ಲಿ ನಿಮ್ಮ ವೈಯಕ್ತಿಕ ಫೋಟೋ ಅಥವಾ ವಿಡಿಯೋ ಹೈಡ್ ಮಾಡುವುದು ಹೇಗೆ..?

ಸ್ಮಾರ್ಟ್‌ಫೋನ್‌ನ ಗ್ಯಾಲರಿಯಿಂದ ನೀವು ಫೋಟೋಗಳು ಅಥವಾ ವಿಡಿಯೋಗಳನ್ನು ಹೇಗೆ ಹೈಡ್ ಅಥವಾ ಲಾಕ್  ಮಾಡುವುದು ಎಂಬುದರ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Oct 6, 2021, 12:09 PM IST
  • ನಮ್ಮ ಸ್ಮಾರ್ಟ್‌ಫೋನ್ ವೈಯಕ್ತಿಕ ಮತ್ತು ವೃತ್ತಿಪರ ಡೇಟಾ(Professional Data)ದಿಂದ ತುಂಬಿರುತ್ತದೆ
  • ಅನೇಕ ಸಂದರ್ಭದಲ್ಲಿ ನಮ್ಮ ಫೋನ್ ಅನ್ನು ಬೇರೆಯವರಿಗೆ ನೀಡಬೇಕಾದ ಪರಿಸ್ಥಿತಿಯೂ ಬರುತ್ತದೆ
  • ನಮ್ಮ ಫೋನ್‌ನಲ್ಲಿರುವ ವೈಯಕ್ತಿಕ ಮಾಹಿತಿ ಬೇರೆಯವರು ನೋಡದಂತೆ ಹೈಡ್ ಮಾಡುವುದು ಉತ್ತಮ
Phone Gallery: ಫೋನ್‌ನಲ್ಲಿ ನಿಮ್ಮ ವೈಯಕ್ತಿಕ ಫೋಟೋ ಅಥವಾ ವಿಡಿಯೋ ಹೈಡ್ ಮಾಡುವುದು ಹೇಗೆ..?   title=
ಫೋಟೋ ಅಥವಾ ವಿಡಿಯೋ ಹೈಡ್ ಮಾಡುವುದು ಹೇಗೆ..?

ನವದೆಹಲಿ: ನಮ್ಮ ಸ್ಮಾರ್ಟ್‌ಫೋನ್(Smartphone) ವೈಯಕ್ತಿಕ ಮತ್ತು ವೃತ್ತಿಪರ ಡೇಟಾ(Professional Data)ದಿಂದ ತುಂಬಿರುತ್ತದೆ. ನಾವು ಇತರರೊಂದಿಗೆ ಹಂಚಿಕೊಳ್ಳ ಬಯಸದ ಅನೇಕ ವಿಷಯಗಳಿರುತ್ತವೆ. ಅಗತ್ಯವಿದ್ದಾಗ ನಮ್ಮ ಫೋನ್ ಅನ್ನು ಬೇರೆಯವರಿಗೆ ನೀಡಬೇಕಾದಾಗ ಪರಿಸ್ಥಿತಿಯೂ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಫೋನ್ ಗ್ಯಾಲರಿಗೆ ಹೋಗಿ ನಮ್ಮ ಎಲ್ಲಾ ವೈಯಕ್ತಿಕ ಫೋಟೋ ಅಥವಾ ವಿಡಿಯೋಗಳನ್ನು ನೋಡುತ್ತಾರೆಂಬ ಭಾವನೆ ಅನೇಕರಿಗಿರುತ್ತದೆ. ಇದಕ್ಕಾಗಿಯೇ ನೀವು ಖಾಸಗಿಯಾಗಿಡಲು ಬಯಸುವ ಫೋಟೋಗಳನ್ನು ಮರೆಮಾಚುವುದು ಉತ್ತಮ. ಸ್ಮಾರ್ಟ್‌ಫೋನ್‌ನ ಗ್ಯಾಲರಿಯಿಂದ ನೀವು ಫೋಟೋಗಳು ಅಥವಾ ವಿಡಿಯೋಗಳನ್ನು ಹೇಗೆ ಹೈಡ್ ಅಥವಾ ಲಾಕ್  ಮಾಡುವುದು ಎಂಬುದರ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.

ಫೋನ್‌ನಲ್ಲಿ ಫೋಟೋ ಅಥವಾ ವಿಡಿಯೋ ಹೈಡ್ ಮಾಡುವುದು ಹೇಗೆ..?  

ವಾಸ್ತವವಾಗಿ ಗೂಗಲ್ ಫೋಟೋಸ್ ಆ್ಯಪ್‌(Google Photos App)ಅನ್ನು ಗ್ಯಾಲರಿಯಂತೆ ಬಳಸುವ ಅನೇಕ ಜನರಿದ್ದಾರೆ. ಈ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಲಭ್ಯವಿದೆ. ಈ  ಆ್ಯಪ್‌ ನಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ಮರೆಮಾಡಲು ಒಂದು ಆಯ್ಕೆ ಇದೆ. ಇದಕ್ಕಾಗಿ ನೀವು ಏನು ಮಾಡಬೇಕೆಂದರೆ ಮೊದಲು ಫೋಟೋಸ್ ಆ್ಯಪ್‌ ತೆರೆಯಿರಿ. ಬಳಿಕ ನೀವು ಹೈಡ್ ಮಾಡಬಯಸುವ ಫೋಟೋ ಅಥವಾ ವಿಡಿಯೋಗಳನ್ನು ಆಯ್ಕೆ ಮಾಡಿ. ನಂತರ ಮೂರು ಡಾಟ್ ಮೆನು ಮೇಲೆ ಟ್ಯಾಪ್ ಮಾಡಿ. ಇಲ್ಲಿ ನೀವು ಆರ್ಕೈವ್‌ಗೆ ಸರಿಸಿ ಎಂಬ ಆಯ್ಕೆಯನ್ನು ಪಡೆಯುತ್ತೀರಿ. ಇದರ ನಂತರ ಈ ಎಲ್ಲಾ ಫೋಟೋಗಳು ಆರ್ಕೈವ್ ಫೋಲ್ಡರ್‌ಗೆ ಹೋಗುತ್ತವೆ.

ಇದನ್ನೂ ಓದಿ: Whatsappನಲ್ಲಿ ಈಗ ಕೇವಲ ಒಂದು ಕ್ಲಿಕ್ ಮೂಲಕ ನಡೆದು ಹೋಗುತ್ತದೆ ಪೇಮೆಂಟ್

 Xiaomi ಸ್ಮಾರ್ಟ್‌ಫೋನ್‌ ಬಳಕೆದಾರರು ಹೀಗೆ ಮಾಡಿ

ಶಿಯೋಮಿ ಸ್ಮಾರ್ಟ್‌ಫೋನ್‌(Android Phones)ಗಳನ್ನು ಭಾರತದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅದರ ಗ್ಯಾಲರಿಯನ್ನು ತೆರೆಯಿರಿ ಮತ್ತು ನೀವು ಮರೆಮಾಡಲು ಬಯಸುವ ಚಿತ್ರಗಳು ಅಥವಾ ವಿಡಿಯೋಗಳನ್ನು ಆಯ್ಕೆ ಮಾಡಿ. ನಂತರ ಮೆನುವಿನಲ್ಲಿ ನೀಡಿರುವ ಹೈಡ್ ಗುಂಡಿಯನ್ನು ಒತ್ತಿ. ಈ ರೀತಿ ಫೋಟೋಗಳನ್ನು ಗ್ಯಾಲರಿಯಲ್ಲಿ ತೋರಿಸುವುದನ್ನು ನಿಲ್ಲಿಸುತ್ತವೆ.

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌(OnePlus Smartphone)ನಲ್ಲಿ ಕಂಡುಬರುವ ಗ್ಯಾಲರಿ ಅಪ್ಲಿಕೇಶನ್ ತೆರೆಯಿರಿ. ನೀವು ಮರೆಮಾಡಲು ಬಯಸುವ ಫೋಟೋಗಳು ಅಥವಾ ವಿಡಿಯೋಗಳನ್ನು ಆಯ್ಕೆ ಮಾಡಿ. ಈಗ ಮೇಲಿನ ಬಲ ಮೂಲೆಯಲ್ಲಿರುವ ಮೂರು ಡಾಟ್ ಮೆನು ಮೇಲೆ ಟ್ಯಾಪ್ ಮಾಡಿ. ಇಲ್ಲಿ ನೀವು ಮರೆಮಾಡುವ ಆಯ್ಕೆಯನ್ನು ಪಡೆಯುತ್ತೀರಿ, ಅದರ ಮೇಲೆ ಟ್ಯಾಪ್ ಮಾಡಿ. ಈ ರೀತಿ ಆ ಫೋಟೋಗಳು ಗ್ಯಾಲರಿಯಲ್ಲಿ ತೋರಿಸುವುದನ್ನು ನಿಲ್ಲಿಸುತ್ತವೆ.

ಇದನ್ನೂ ಓದಿ: ಸ್ಟ್ರಾಂಗ್ ಬ್ಯಾಟರಿ ಮತ್ತು ದೊಡ್ಡ ಸ್ಕ್ರೀನ್ ನೊಂದಿಗೆ 4 ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ Oppo, ಬೆಲೆ ಮತ್ತು ಇತರ ಫೀಚರ್ ಗಳನ್ನು ತಿಳಿಯಿರಿ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ

ನೀವು ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್‌ನಲ್ಲಿರುವ ಗ್ಯಾಲರಿ ಆ್ಯಪ್‌(Gallery App)ಅನ್ನು ಬಳಸುತ್ತಿದ್ದರೆ ನಿಮ್ಮ ವೈಯಕ್ತಿಕ ಫೋಟೋಗಳು / ವಿಡಿಯೋಗಳನ್ನು ಸಹ ನೀವು ಇಲ್ಲಿ ಮರೆಮಾಡಬಹುದು. ಇದಕ್ಕಾಗಿ ಹೊಸ ಆಲ್ಬಮ್ ರಚಿಸಿ ಮತ್ತು ಅದಕ್ಕೆ ಯಾವುದಾದರೂ ಹೆಸರನ್ನು ನೀಡಬಹುದು. ಅಗತ್ಯವಿರುವ ಫೋಟೋಗಳು/ವಿಡಿಯೋಗಳನ್ನು ಈ ಆಲ್ಬಮ್‌ಗೆ ಸರಿಸಿ. ಈಗ ಕೆಳಗೆ ನೀಡಿರುವ ಆಲ್ಬಮ್‌ಗಳ ಆಯ್ಕೆಗೆ ಹೋಗಿ ಮತ್ತು ಮೂರು ಡಾಟ್ ಮೆನುವನ್ನು ಟ್ಯಾಪ್ ಮಾಡಿ. ಇದರ ನಂತರ ಆಲ್ಬಮ್‌ಗಳನ್ನು ಹೈಡ್ ಆಯ್ಕೆಯನ್ನು ಆರಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News