ಈ ಕಾರುಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿದ Hyundai!

Hyundai Cars Discounts Offers: ಇತ್ತೀಚಿನ ದಿನಗಳಲ್ಲಿ i20 ಮತ್ತು Grand i10 Nios ಮತ್ತು  ಔರಾ ಸೆಡಾನ್ ಮತ್ತು ಕೋನಾ ಎಲೆಕ್ಟ್ರಿಕ್‌ನಂತಹ ಹ್ಯಾಚ್‌ಬ್ಯಾಕ್‌ಗಳ ಮೇಲೆ ಆಫರ್ ನೀಡುತ್ತಿದೆ. 

Written by - Ranjitha R K | Last Updated : Apr 14, 2023, 04:02 PM IST
  • ಹ್ಯುಂಡೈ ಭಾರತದ ಎರಡನೇ ಅತಿ ದೊಡ್ಡ ಕಾರು ಮಾರಾಟ ಕಂಪನಿ
  • ಗ್ರಾಹಕರನ್ನು ಸೆಳೆಯಲು ಕಂಪನಿಯು ಆಫರ್‌ಗಳನ್ನು ನೀಡುತ್ತಲೇ ಇರುತ್ತದೆ
  • ಹ್ಯುಂಡೈ ಕಾರುಗಳ ಮೇಲೆ ಭಾರೀ ಆಫರ್
ಈ ಕಾರುಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿದ  Hyundai! title=

Hyundai Cars Discounts Offers : ಹ್ಯುಂಡೈ ಮೋಟಾರ್ ಇಂಡಿಯಾ ಪ್ರತಿ ತಿಂಗಳು ಸಾವಿರಾರು ವಾಹನಗಳನ್ನು ಮಾರಾಟ ಮಾಡುತ್ತದೆ. ಹ್ಯುಂಡೈ  ಭಾರತದ ಎರಡನೇ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಯು ಆಫರ್‌ಗಳನ್ನು ನೀಡುತ್ತಲೇ ಇರುತ್ತದೆ. ಸಾಮಾನ್ಯವಾಗಿ, ಜನರು ಹೊಸ ಕಾರು ಖರೀದಿಸುವ ಯೋಚನೆ ಮಾಡುವಾಗ ರಿಯಾಯಿತಿ ದರಗಳತ್ತ  ಗಮನ ಕೊಡುತ್ತಾರೆ. ಇದೀಗ ಹುಂಡೈ ತನ್ನ ಹಲವು ಕಾರುಗಳ ಮೇಲೆ ಕ್ಯಾಶ್‌ಬ್ಯಾಕ್, ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ಬೋನಸ್‌ನಂತಹ ಆಫರ್ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ i20 ಮತ್ತು Grand i10 Nios ಮತ್ತು  ಔರಾ ಸೆಡಾನ್ ಮತ್ತು ಕೋನಾ ಎಲೆಕ್ಟ್ರಿಕ್‌ನಂತಹ ಹ್ಯಾಚ್‌ಬ್ಯಾಕ್‌ಗಳ ಮೇಲೆ ಆಫರ್ ನೀಡುತ್ತಿದೆ. 

ಹ್ಯುಂಡೈ ಗ್ರಾಂಡ್ i10 ನಿಯೋಸ್ ಅನ್ನು ಖರೀದಿಸುವುದಾದರೆ ಈ ತಿಂಗಳು ವಿವಿಧ ರೂಪಾಂತರಗಳನ್ನು ಅವಲಂಬಿಸಿ 13,000 ದಿಂದ 33,000 ವರೆಗಿನ ಪ್ರಯೋಜನವನ್ನು ಪಡೆಯಬಹುದು. ಹ್ಯುಂಡೈನ ಈ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. 

ಇದನ್ನೂ ಓದಿ : ಇಲ್ಲಿ iPhone 12 Pro Max ಅರ್ಧ ಬೆಲೆಗೆ ಲಭ್ಯವಿದೆ! ಕೂಡಲೇ ಖರೀದಿಸಿ

ಹುಂಡೈ i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಇದರ ಮೇಲೆ  20,000 ರೂ.ವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದು ಕ್ಯಾಶ್‌ಬ್ಯಾಕ್ ಮತ್ತು ವಿನಿಮಯ ಬೋನಸ್ ರೂಪದಲ್ಲಿರುತ್ತದೆ.  ಹ್ಯುಂಡೈ i20 ಅನ್ನು ಆನ್‌ಲೈನ್‌ನಲ್ಲಿ ಖರೀದಿಸುವುದಾದರೆ 15000 ರೂ. ವರೆಗಿನ ಫ್ಲಾಟ್ ರಿಯಾಯಿತಿ ಸಿಗುತ್ತಿದೆ. .

ಹುಂಡೈ ಔರಾ ಸಿಎನ್‌ಜಿ ರೂಪಾಂತರವನ್ನು ಖರೀದಿಸುವುದಾದರೆ  33,000 ರೂ.ವರೆಗಿನ ರಿಯಾಯಿತಿ ಸಿಗುತ್ತದೆ. ಇದಲ್ಲದೇ, ಔರಾದ ಇತರ ರೂಪಾಂತರಗಳ ಮೇಲೆ  23,000 ರೂಪಾಯಿ ವರೆಗೆ  ಆಫರ್ ನೀಡಲಾಗಿದೆ.  ಈ ಆಫರ್ ನಗದು ರಿಯಾಯಿತಿ, ಎಕ್ಸ್ಚೇಂಜ್  ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ರೂಪದಲ್ಲಿದೆ. 

ಇದನ್ನೂ ಓದಿ : ಡೆಬಿಟ್ ಕಾರ್ಡ್ ಇಲ್ಲದೆಯೂ UPI PIN ಬದಲಿಸಬಹುದು ! ಇಲ್ಲಿದೆ ಹಂತ ಹಂತದ ವಿವರ

ಇನ್ನು, ಹ್ಯುಂಡೈ ಕೋನಾ ಎಲೆಕ್ಟ್ರಿಕ್ SUV ಮೇಲೆ ಕೂಡಾ ರಿಯಾಯಿತಿ ಈ ಕಾರಿನ ಮೇಲೆ  50,000 ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಆದರೂ ಈ ಎಲ್ಲಾ  ಆಫರ್‌ಗಳ ಬಗ್ಗೆ ಹತ್ತಿರದ ಹುಂಡೈ ಡೀಲರ್‌ಶಿಪ್ ಅನ್ನು ಸಂಪರ್ಕಿಸುವುದು ಉತ್ತಮ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News