HF Deluxe: 83 kmpl ಮೈಲೇಜ್ ನೀಡುವ ಭಾರತದ ಅಗ್ಗದ ಬೈಕ್, ಸಣ್ಣ ಬಜೆಟ್‌ನಲ್ಲಿ ಹೆಚ್ಚು ಲಾಭ

ಮಿತವ್ಯಯದ ಹೊರತಾಗಿ ಈ ಬೈಕು ಹೆಚ್ಚಿನ ಮೈಲೇಜ್ ಅನ್ನು ಸಹ ನೀಡುತ್ತದೆ. ವಿಶೇಷವಾಗಿ ಇದು ಮಧ್ಯಮ ವರ್ಗದ ಜನರ ಅತ್ಯುತ್ತಮ ಆಯ್ಕೆಯಾಗಿದೆ.

Written by - Puttaraj K Alur | Last Updated : Dec 12, 2021, 09:37 AM IST
  • ಹೀರೋ HF ಡಿಲಕ್ಸ್ ಪಕ್ಕಾ ಪೈಸಾ ವಸೂಲ್ ಬೈಕ್ ಆಗಿದೆ
  • ಬೈಕಿನ ಆರಂಭಿಕ ಬೆಲೆ 53,000 ರೂ.ಗಿಂತ ಕಡಿಮ ಇದೆ
  • 1 ಲೀಟರ್ ಪೆಟ್ರೋಲ್ ನಲ್ಲಿ 83 ಕಿ.ಮೀ ವರೆಗೆ ಓಡುತ್ತದೆ
HF Deluxe: 83 kmpl ಮೈಲೇಜ್ ನೀಡುವ ಭಾರತದ ಅಗ್ಗದ ಬೈಕ್, ಸಣ್ಣ ಬಜೆಟ್‌ನಲ್ಲಿ ಹೆಚ್ಚು ಲಾಭ title=
ಹೀರೋ HF ಡಿಲಕ್ಸ್ ಬೈಕ್

ನವದೆಹಲಿ: ನಿಮ್ಮ ಬಜೆಟ್ ಚಿಕ್ಕದಾಗಿದ್ದರೆ, ಹೆಚ್ಚು ಮೈಲೇಜ್ ಮತ್ತು ಮಿತವ್ಯಯದ ಬೈಕ್ ಖರೀದಿಸಬಯಸಿದರೆ ಈ ಸುದ್ದಿ ನಿಮಗಾಗಿ. ಭಾರತದ ಅಚ್ಚುಮೆಚ್ಚಿನ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್(Hero MotoCorp), ದೇಶೀಯ ಮಾರುಕಟ್ಟೆಗೆ ಅನೇಕ ಸಣ್ಣ ಬಜೆಟ್ ಮೋಟಾರ್‌ಸೈಕಲ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಹೀರೋ ಹೆಚ್‌ಎಫ್ ಡಿಲಕ್ಸ್(Hero Hf Deluxe) ಗ್ರಾಹಕರಿಗೆ ಅತ್ಯಂತ ಕೈಗೆಟಕುವ ದರದಲ್ಲಿ ಲಭ್ಯವಿರುವ ಬೈಕ್ ಆಗಿದೆ. ಮಾರಾಟದ ವಿಷಯದಲ್ಲಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ, ಈ ಮೋಟಾರ್‌ಸೈಕಲ್ ಗೆ ಕೊಡುವ ಹಣಕ್ಕೆ ಸಂಪೂರ್ಣ ಮೌಲ್ಯವನ್ನು ಗ್ರಾಹಕರಿಗೆ ನೀಡುತ್ತದೆ. ಮಿತವ್ಯಯದ ಹೊರತಾಗಿ ಈ ಬೈಕು ಹೆಚ್ಚಿನ ಮೈಲೇಜ್ ಅನ್ನು ಸಹ ನೀಡುತ್ತದೆ. ವಿಶೇಷವಾಗಿ ಇದು ಮಧ್ಯಮ ವರ್ಗದ ಜನರ ಅತ್ಯುತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: Motorolaದ ಅತ್ಯಂತ ಶಕ್ತಿಶಾಲಿ ಫೋನ್ ಬಿಡುಗಡೆ: ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

ಆರಂಭಿಕ ಎಕ್ಸ್ ಶೋ ರೂಂ ಬೆಲೆ 52,700 ರೂ.

Hero MotoCorp BS6 ಮಾನದಂಡಗಳ 97.2 cc ಏರ್-ಕೂಲ್ಡ್ 4-ಸ್ಟ್ರೋಕ್ ಸಿಂಗಲ್-ಸಿಲಿಂಡರ್ ಎಂಜಿನ್ ಜೊತೆಗೆ HF ಡಿಲಕ್ಸ್ ಅನ್ನು ನೀಡಿದೆ. ಈ ಎಂಜಿನ್ 8000 rpm ನಲ್ಲಿ 8.24 bhp ಪವರ್ ಮತ್ತು 5000 rpm ನಲ್ಲಿ 8.05 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಂಪನಿಯು ಬೈಕ್‌ನ ಎಂಜಿನ್‌ಗೆ 4-ಸ್ಪೀಡ್ ಟ್ರಾನ್ಸ್‌ ಮಿಷನ್ ನೀಡಿದೆ. ಈ ಮೋಟಾರ್ ಸೈಕಲ್ 1 ಲೀಟರ್ ಪೆಟ್ರೋಲ್ ಗೆ 83 ಕಿ.ಮೀ ಮೈಲೇಜ್ ನೀಡುತ್ತದೆ. ದೆಹಲಿಯಲ್ಲಿ ಈ ಬೈಕಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 52,700 ರೂ. ಇದೆ. ಇದು ಎಲ್ಲಾ Fi-i3S ಗೆ 63,400 ರೂ.ಗೆ ಏರಿಕೆಯಾಗುತ್ತದೆ. ಬೈಕಿನ ಡ್ರಮ್ ಬ್ರೇಕ್ ಅಲಾಯ್ ವೀಲ್ ಮಾದರಿಯ ಬೆಲೆ 53,700 ರೂ. ಇದೆ.

ಇದನ್ನೂ ಓದಿ: BoAt: ಬಜೆಟ್ ಬೆಲೆಯ ಅದ್ಭುತ ಜಲನಿರೋಧಕ ಸ್ಮಾರ್ಟ್ ವಾಚ್ ಬಿಡುಗಡೆ

ಅಗ್ಗದ ಮತ್ತು ಹೆಚ್ಚಿನ ಮೈಲೇಜಿನ ಬೈಕು

ಸೆಲ್ಫ್-ಸ್ಟಾರ್ಟ್ ಮಾಡೆಲ್ ಬೆಲೆ 61,900 ರೂ. ಇದ್ದು, ಕಪ್ಪು ವೇರಿಯಂಟ್ ಮಾದರಿಗೆ 62,500 ರೂ. ಆಗಲಿದೆ. ಹೀರೋ ಹೆಚ್‌ಎಫ್ ಡಿಲಕ್ಸ್(HF Deluxe) ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಹೈಡ್ರಾಲಿಕ್ Suspension ಹೊಂದಿದೆ. ಇದರ ಹಿಂಭಾಗವು 2-Step Adjustable Suspension ಮತ್ತು ಹಿಂಭಾಗದ ಸ್ವಿಂಗ್ ಆರ್ಮ್‌ನೊಂದಿಗೆ ಬರುತ್ತದೆ. ಬೈಕ್‌ನ ಮುಂಭಾಗದ ಚಕ್ರಕ್ಕೆ 130 MM ಡ್ರಮ್ ಬ್ರೇಕ್ ನೀಡಲಾಗಿದ್ದು, ಹಿಂಬದಿ ಚಕ್ರಕ್ಕೆ 130 MM ಡ್ರಮ್ ಬ್ರೇಕ್ ನೀಡಲಾಗಿದೆ. ಈ ಬ್ರೇಕಿಂಗ್ ಸಿಸ್ಟಮ್ CBS ಅಂದರೆ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಬರುತ್ತದೆ. ನೀವು ಅಗ್ಗದ ಮತ್ತು ಹೆಚ್ಚಿನ ಮೈಲೇಜ್ ಬೈಕ್(Hero Cheapest Bike) ಖರೀದಿಸಲು ಯೋಜಿಸುತ್ತಿದ್ದರೆ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News