ನಿಮ್ಮ WhatsApp Chat ಅನ್ನು ಯಾರಾದರೂ ಕದ್ದು ಓದುತ್ತಿದ್ದಾರೆಯೇ ? ತಿಳಿದುಕೊಳ್ಳಲು ಈ ಟ್ರಿಕ್ಸ್ ಬಳಸಿ

 Whatsapp Tips And Tricks: ಕೆಲವೊಮ್ಮೆ ನಮ್ಮ ತಪ್ಪಿನಿಂದಲೇ ಬೇರೆಯವರು ನಮ್ಮ WhatsApp Chat ಅನ್ನು ಓದುತ್ತಾರೆ. ಅಂದರೆ ನಮ್ಮ ತಪ್ಪಿನಿಂದಲೇ ನಮ್ಮ ವಾಟ್ಸಾಪ್ ಹ್ಯಾಕ್ ಆಗುತ್ತದೆ. ಹೀಗೆ ಹ್ಯಾಕ್ ಆದ ಚಾಟ್ ದುರುಪಯೋಗ ಕೂಡಾ ಆಗಬಹುದು.

Written by - Ranjitha R K | Last Updated : Jul 18, 2021, 11:23 AM IST
  • ನಿಮ್ಮ ವಾಟ್ಸಾಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ
  • ಥರ್ಡ್ ಪಾರ್ಟಿ ಅಪ್ಲಿಕೇಶನ್ ಇಲ್ಲದೆ ಇದನ್ನು ಕಂಡುಹಿಡಿಯಬಹುದು
  • ವಾಟ್ಸಾಪ್ ವೆಬ್‌ ಮೂಲಕ ನಿಮ್ಮ ಚಾಟ್‌ಗಳನ್ನು ಯಾರು ಓದುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಬಹುದು.
ನಿಮ್ಮ WhatsApp Chat ಅನ್ನು ಯಾರಾದರೂ ಕದ್ದು ಓದುತ್ತಿದ್ದಾರೆಯೇ ? ತಿಳಿದುಕೊಳ್ಳಲು ಈ ಟ್ರಿಕ್ಸ್ ಬಳಸಿ  title=
ವಾಟ್ಸಾಪ್ ವೆಬ್‌ ಮೂಲಕ ನಿಮ್ಮ ಚಾಟ್‌ಗಳನ್ನು ಯಾರು ಓದುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಬಹುದು. (photo zee news)

ನವದೆಹಲಿ : Whatsapp Tips And Tricks: ದಿನೇ ದಿನೇ ವಾಟ್ಸಾಪ್ ನಲ್ಲಿ ಹೊಸ ಹೊಸ ವೈಶಿಷ್ಟ್ಯಗಳು ಸೇರಿಕೊಳ್ಳುತ್ತಲೇ ಇವೆ. ಈ ಅಪ್ಲಿಕೇಶನ್‌ನಲ್ಲಿ ಹಲವು ಸುರಕ್ಷತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳಿದ್ದು, ಹ್ಯಾಕ್ ಮಾಡುವುದು ತುಂಬಾ ಕಷ್ಟ. ಆದರೂ ಹ್ಯಾಕರ್‌ಗಳು ನಿಮ್ಮ ಚಾಟ್ ಅನ್ನು ಹ್ಯಾಕ್ ಮಾಡುವ ಪ್ರಯತ್ನ ಪಡುತ್ತಲೇ ಇರುತ್ತಾರೆ. ಹೀಗಿರುವಾಗ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಚಾಟ್ ಅನ್ನು ಯಾರಾದರೋ ಓದುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುವುದು ಸುಲಭ. ಈ ಸುಲಭ ಟ್ರಿಕ್ ಬಳಸಿದರೆ ಯಾರು ನಿಮ್ಮ ವ್ಯಾಟ್ಸ್ ಆಪ್ ಚಾಟ್ (Whatsapp chat) ಅನ್ನು ಓದುತ್ತಿದ್ದಾರೆ ಎಂದು ತಿಳಿಯಬಹುದು.  

ನಿಮ್ಮ ವಾಟ್ಸಾಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ?
ಕೆಲವೊಮ್ಮೆ ನಮ್ಮ ತಪ್ಪಿನಿಂದಲೇ ಬೇರೆಯವರು ನಮ್ಮ WhatsApp Chat ಅನ್ನು ಓದುತ್ತಾರೆ. ಅಂದರೆ ನಮ್ಮ ತಪ್ಪಿನಿಂದಲೇ ನಮ್ಮ ವಾಟ್ಸಾಪ್ ಹ್ಯಾಕ್ (Whatsapp hack) ಆಗುತ್ತದೆ. ಹೀಗೆ ಹ್ಯಾಕ್ ಆದ ಚಾಟ್ ದುರುಪಯೋಗ ಕೂಡಾ ಆಗಬಹುದು. ಹೀಗಾಗಿ ನಿಮ್ಮ ವಾಟ್ಸಾಪ್ ಚಾಟ್ ಅನ್ನು ಬೇರೆಯವರು ರಹಸ್ಯವಾಗಿ ಓದುತ್ತಿದ್ದಾರೆಯೇ ಎನ್ನುವುದನ್ನು ಕಂಡುಹಿಡಿಯಿರಿ.

ಇದನ್ನೂ ಓದಿ Buy New Smartphone Tips : ಹೊಸ ಮೊಬೈಲ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ನಿಮಗೆ ಬಹು ಮುಖ್ಯ ಸಲಹೆಗಳು

 ವಾಟ್ಸಾಪ್ ನಲ್ಲಿಯೇ ಕಂಡು ಹಿಡಿಯಬಹುದು : 
ಇದನ್ನು ಕಂಡುಹಿಡಿಯಲು ಥರ್ಡ್ ಪಾರ್ಟಿ ಅಪ್ಲಿಕೇಶನ್  ಅಗತ್ಯ ಇಲ್ಲ. ನಿಮ್ಮ ವಾಟ್ಸಾಪ್‌ನಲ್ಲಿಯೇ ಅದನ್ನು ಕಂಡು ಹಿಡಿಯಬಹುದು. 
-ಮೊದಲಿಗೆ ನಿಮ್ಮ ವಾಟ್ಸಾಪ್ (Whatsapp) ಅನ್ನು ತೆರೆಯಿರಿ. 
-ಅಲ್ಲಿ ವಾಟ್ಸಾಪ್ ವೆಬ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
-ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್ ತೆರೆಯದಿದ್ದರೂ ಲಿಂಕ್ ಆಗಿದೆ ಎನ್ನುವುದನ್ನು ತೋರಿಸುತ್ತಿದ್ದರೆ ನಿಮ್ಮ ವಾಟ್ಸಾಪ್ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂದರ್ಥ.

ಒಂದು ವೇಳೆ, ನೀವು ಲ್ಯಾಪ್‌ಟಾಪ್‌ನಲ್ಲಿ (Laptop) ವಾಟ್ಸಾಪ್ ಅನ್ನು ಲಿಂಕ್ ಮಾಡಿದ್ದು, ಲಾಗ್ ಔಟ್ ಮಾಡಲು ಮರೆತಿದ್ದರೆ, ಇಡೀ ಅವಕಾಶವನ್ನು ಉಪಯೋಗಿಸಿಕೊಂಡು ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ವಾಟ್ಸಾಪ್ ಅನ್ನು ಲಿಂಕ್ ಮಾಡಿರಬಹುದು. ಇದನ್ನು ತಪ್ಪಿಸಲು, ನೀವು ತಕ್ಷಣ ಲಾಗ್ ಔಟ್ ಆಗುವುದನ್ನು ಮರೆಯಬೇಡಿ.

ಇದನ್ನೂ ಓದಿ : WhatsApp: ಎಚ್ಚರ! ನಿಮ್ಮ ವಾಟ್ಸಾಪ್ ಚಾಟ್ ಬ್ಯಾಕಪ್ ಅನ್ನು ಹ್ಯಾಕರ್ಸ್ ಕದಿಯಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News