World’s 1st Lickable TV Created : ನೆಕ್ಕಿ ರುಚಿ ನೋಡಬಹುದಾದ ಟಿವಿ ಸ್ಕ್ರೀನ್ ಕಂಡುಹಿಡಿದ ವಿಜ್ಞಾನಿಗಳು!

ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಬರುವ ಆಹಾರದ ಸುವಾಸನೆಯ ಜೊತೆಗೆ ಅವುಗಳ ರುಚಿ ಕೂಡ ನೋಡಬಹುದು. ನೀವು ರುಚಿ ಅನುಭವಿಸಲು ನೀವು ನಿಮ್ಮ ಟಿವಿ ಅಥವಾ ಮೊಬೈಲ್ ಸ್ಕ್ರೀನ್ ಅನ್ನು ನೆಕ್ಕಬೇಕು.

Written by - Channabasava A Kashinakunti | Last Updated : Dec 29, 2021, 01:02 PM IST
  • ನಿಮ್ಮ ಮನೆಯ ಟಿವಿ ಮತ್ತೆ ಮೊಬೈಲ್ ಸ್ಕ್ರೀನ್ ಗಳನ್ನ ನೆಕ್ಕಿ ನೋಡಬಹುದು
  • ನೆಕ್ಕಿ ನೋಡಬಹುದಾದ ಟಿವಿ ಪರದೆ ಸಂಶೋಧಿಸಿದ ಜಪಾನಿನ ಪ್ರಾಧ್ಯಾಪಕ
  • ಇದಕ್ಕೆ 'ಟೇಸ್ಟ್ ದಿ ಟಿವಿ' (ಟಿಟಿಟಿವಿ) ಎಂದು ಹೆಸರಿಸಲಾಗಿದೆ.
World’s 1st Lickable TV Created : ನೆಕ್ಕಿ ರುಚಿ ನೋಡಬಹುದಾದ ಟಿವಿ ಸ್ಕ್ರೀನ್ ಕಂಡುಹಿಡಿದ ವಿಜ್ಞಾನಿಗಳು! title=

ನವದೆಹಲಿ : ನಿಮ್ಮ ಮನೆಯ ಟಿವಿ ಮತ್ತೆ ಮೊಬೈಲ್ ಸ್ಕ್ರೀನ್ ಗಳನ್ನ ನೆಕ್ಕಿ ನೋಡಬಹುದು. ಹೌದು, ಅಂತಹ ಒಂದು ಸ್ಕ್ರೀನ್ ತಂತ್ರಜ್ಞಾವನ್ನು ಜಪಾನ ವಿಜ್ಞಾನಿಗಳು ಕಂಡು ಹಿಡದಿದ್ದಾರೆ. ಇತ್ತೀಚೆಗೆ, ಜಪಾನಿನ ಪ್ರಾಧ್ಯಾಪಕರೊಬ್ಬರು ನೆಕ್ಕಿ ನೋಡಬಹುದಾದ ಟಿವಿ ಪರದೆಯನ್ನ ಅಭಿವೃದ್ಧಿಪಡಿಸಿದ್ದಾರೆ. ಇದು ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಬರುವ ಆಹಾರದ ಸುವಾಸನೆಯ ಜೊತೆಗೆ ಅವುಗಳ ರುಚಿ ಕೂಡ ನೋಡಬಹುದು. ನೀವು ರುಚಿ ಅನುಭವಿಸಲು ನೀವು ನಿಮ್ಮ ಟಿವಿ ಅಥವಾ ಮೊಬೈಲ್ ಸ್ಕ್ರೀನ್ ಅನ್ನು ನೆಕ್ಕಬೇಕು.

ಇದಕ್ಕೆ 'ಟೇಸ್ಟ್ ದಿ ಟಿವಿ' (TTTV) ಎಂದು ಹೆಸರಿಸಲಾಗಿದೆ. ಫ್ಲಾಟ್-ಸ್ಕ್ರೀನ್ ಟಿವಿಯಲ್ಲಿ ಲೇಯರ್ ಮಾಡಲಾದ ಪ್ಲಾಸ್ಟಿಕ್ ಫಿಲ್ಮ್‌ಗೆ ಫ್ಲೇವರ್‌ಗಳ ಸಂಯೋಜನೆಯನ್ನು ಸಿಂಪಡಿಸುವ 10 ಫ್ಲೇವರ್ ಕ್ಯಾನಿಸ್ಟರ್‌ಗಳೊಂದಿಗೆ ಇದು ಬರುತ್ತದೆ.

ಇದನ್ನೂ ಓದಿ : ಎಚ್ಚರ! ನಕಲಿ WhatsApp, Facebook, Instagram ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಿದ್ದೀರಾ? ಈಗಲೇ ಪರಿಶೀಲಿಸಿ

"ಮನೆಯಲ್ಲಿಯೇ ಇದ್ದು ನೀವು ಪ್ರಪಂಚದ ಇತರ ಭಾಗದಲ್ಲಿರುವ ರೆಸ್ಟೋರೆಂಟ್‌(Resturent)ನಲ್ಲಿ ಸಿಗುವ ಆಹಾರಗಳ ರುಚಿ ಅನುಭವವ ಪಡೆಯುವುದು ಇದರ ಗುರಿಯಾಗಿದೆ" ಎಂದು ಮೀಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೋಮಿ ಮಿಯಾಶಿತಾ ತಿಳಿಸಿದ್ದಾರೆ.

ಮಿಯಾಶಿತಾ(Homei Miyashita) ತನ್ನ ಸ್ಪ್ರೇ ತಂತ್ರಜ್ಞಾನವನ್ನು ಟೋಸ್ಟ್ ಮಾಡಿದ ಬ್ರೆಡ್‌ನ ಸ್ಲೈಸ್‌ಗೆ ಪಿಜ್ಜಾ ಅಥವಾ ಚಾಕೊಲೇಟ್ ರುಚಿಯನ್ನು ಅನ್ವಯಿಸುವ ಸಾಧನದಂತಹ ಅಪ್ಲಿಕೇಶನ್‌ಗಳಿಗೆ ಬಳಸುವ ಕುರಿತು ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

TTTV ಯ ಮೂಲಮಾದರಿಯು ಕಳೆದ ವರ್ಷದಲ್ಲಿ ನಿರ್ಮಿಸಲ್ಪಟ್ಟಿದೆ ಮತ್ತು ವಾಣಿಜ್ಯ ಆವೃತ್ತಿಯನ್ನು ತಯಾರಿಸಲು ಸುಮಾರು 100,000 ಯೆನ್ (ಅಂದಾಜು ರೂ. 65,000) ವೆಚ್ಚವಾಗುತ್ತದೆ.

ಪ್ರೊಫೆಸರ್ ಪ್ರಕಾರ, ಈ ಸಾಧನವು ಸೊಮೆಲಿಯರ್‌ಗಳು ಮತ್ತು ಬಾಣಸಿಗರಿಗೆ(Chef) ಉಪಯುಕ್ತವಾಗಬಹುದು, ಅವರು ತಮ್ಮ ಕೈಚಳಕದ ರುಚಿ ನೋಡಲು ಈ ಸಾಧನ ನೋಡಬಹುದು. 

ಇದನ್ನೂ ಓದಿ : ಮೊಬೈಲ್ ರೀಚಾರ್ಜ್‌ ಮಾಡಿದರೆ Paytm ನೀಡುತ್ತಿದೆ 1,000 ರೂ. ವರೆಗೆ ಕ್ಯಾಶ್‌ಬ್ಯಾಕ್

ಮೀಜಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಯುಕಿ ಹೌ, 22, ಪ್ರದರ್ಶನವನ್ನು ಮಾಡಿದರು. ಸಿಹಿ ಚಾಕೊಲೇಟ್(Chocolate) ರುಚಿಯನ್ನು ರಚಿಸಲು ಯಂತ್ರವನ್ನು ಕೇಳಿದಳು. ಅದರ ನಂತರ, ಫ್ಲೇವರ್ ಡಬ್ಬಿಗಳು ಪರದೆಯ ಮೇಲೆ ಜೋಡಿಸಲಾದ ಪ್ಲಾಸ್ಟಿಕ್ ಹಾಳೆಯ ಮೇಲೆ ಮಾದರಿಯನ್ನು ತೋರಿಸಲಾಯಿತು.

"ಇದು ಒಂದು ರೀತಿಯ ಹಾಲಿನ ಚಾಕೊಲೇಟ್‌ನಂತಿದೆ, ಇದು ಚಾಕೊಲೇಟ್ ಸಾಸ್‌ನಂತೆ ಸಿಹಿಯಾಗಿದೆ" ಎಂದು ಪರದೆಯನ್ನು ನೆಕ್ಕಿದ ನಂತರ ತಮ್ಮ ಅನುಭವನ್ನು  ಹೌ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News