YouTube Ad Blocker: ಎರಡೇ ನಿಮಿಷಗಳಲ್ಲಿ Block ಆಗುತ್ತದೆ ಎಲ್ಲಾ ಜಾಹೀರಾತು, ನಿರಂತರವಾಗಿರುತ್ತದೆ ವಿಡಿಯೋ

ಗೂಗಲ್‌ನ  ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್   ಅನ್ನು ಇಂದು ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತಿದೆ. ಮಕ್ಕಳ ಮನರಂಜನೆ ಅಥವಾ ಶಿಕ್ಷಣದ ಬಗ್ಗೆ ಇರಲಿ, ಯೂಟ್ಯೂಬ್ ಜನರ ಮೊದಲ ಆಯ್ಕೆಯಾಗಿದೆ.   

Written by - Ranjitha R K | Last Updated : Jul 1, 2021, 04:37 PM IST
  • YouTubeನಲ್ಲಿ ಜಾಹೀರಾತು ನೋಡುವುದು ಬೇಸರವೇ
  • ಹಾಗಿದ್ದರೆ ಇಲ್ಲೊಂದು ಸುಲಭ ಟ್ರಿಕ್ ಇದೆ
  • ಕೇವಲ 2 ನಿಮಿಷಗಳಲ್ಲಿ ಬ್ಲಾಕ್ ಆಗುತ್ತವೆ ಜಾಹೀರಾತುಗಳು
YouTube Ad Blocker: ಎರಡೇ ನಿಮಿಷಗಳಲ್ಲಿ Block ಆಗುತ್ತದೆ ಎಲ್ಲಾ ಜಾಹೀರಾತು, ನಿರಂತರವಾಗಿರುತ್ತದೆ ವಿಡಿಯೋ  title=
ಕೇವಲ 2 ನಿಮಿಷಗಳಲ್ಲಿ ಬ್ಲಾಕ್ ಆಗುತ್ತವೆ ಜಾಹೀರಾತುಗಳು (photo zeenews)

ನವದೆಹಲಿ : ಗೂಗಲ್‌ನ (Google) ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್  (YouTube)  ಅನ್ನು ಇಂದು ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತಿದೆ. ಮಕ್ಕಳ ಮನರಂಜನೆ ಅಥವಾ ಶಿಕ್ಷಣದ ಬಗ್ಗೆ ಇರಲಿ, ಯೂಟ್ಯೂಬ್ ಜನರ ಮೊದಲ ಆಯ್ಕೆಯಾಗಿದೆ. ಆದರೆ ಕೆಲವು ಸಮಯದಿಂದ ಯೂಟ್ಯೂಬ್ ವೀಡಿಯೊಗಳಲ್ಲಿ ಹೆಚ್ಚಿನ ಜಾಹೀರಾತುಗಳು (Ads) ಬರಲು ಪ್ರಾರಂಭಿಸಿವೆ. ಇದರಿಂದಾಗಿ ಜನರು ಈಗ ಅಸಮಾಧಾನಗೊಂಡಿದ್ದಾರೆ. ಅದಕ್ಕಾಗಿಯೇ ಇಂದು ನಾವೊಂದು ಟ್ರಿಕ್ಸ್ ಹೇಳಿಕೊಡಲಿದ್ದೇವೆ. ಅದರ ಮೂಲಕ ನೀವು ಕೇವಲ ಎರಡು ನಿಮಿಷಗಳಲ್ಲಿ ಯೂಟ್ಯೂಬ್‌ನ ಎಲ್ಲಾ ಜಾಹೀರಾತುಗಳನ್ನು ನಿರ್ಬಂಧಿಸಬಹುದು. 

ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ : 
ಸ್ವಲ್ಪ ಸಮಯದ ಹಿಂದೆ ಗೂಗಲ್ ಯೂಟ್ಯೂಬ್ ಚಂದಾದಾರಿಕೆಯನ್ನು  (YouTube Subscription) ಪ್ರಾರಂಭಿಸಿದೆ.  ಇದನ್ನು ಅಕ್ಟಿವೆಟ್ ಮಾಡುತ್ತಿದ್ದಂತೆಯೇ ಎಲ್ಲಾ ಜಾಹೀರಾತುಗಳು ಬ್ಲಾಕ್ ಆಗುತ್ತವೆ. ಇದಕ್ಕಾಗಿ, Google ನಿಮ್ಮಿಂದ ನಿಗದಿತ ಮೊತ್ತವನ್ನು ತೆಗೆದುಕೊಳ್ಳುತ್ತದೆ.  ಆದರೆ ಹಣವನ್ನು ಪಾವತಿಸಿದ ನಂತರ, ಯೂಟ್ಯೂಬ್‌ನ ಜಾಹೀರಾತುಗಳು ನಿಗದಿತ ಸಮಯಕ್ಕೆ ಮಾತ್ರ ಬ್ಲಾಕ್ ಆಗುತ್ತದೆ. ಆದರೆ ನಾವು ಈಗ ಹೇಳಲು ಹೊರಟಿರುವುದಕ್ಕೆ, ಒಂದು ರೂಪಾಯಿ ಕೂಡಾ ಖರ್ಚು ಮಾಡಬೇಕಾಗಿಲ್ಲ. ಅಲ್ಲದೆ, ಇದರಲ್ಲಿ ಕಾನೂನು ತೊಡಕುಗಳು ಕೂಡಾ ಇರುವುದಿಲ್ಲ. ನೀವು ಸೆಟ್ಟಿಂಗ್‌ಗಳನ್ನು ಅಕ್ಟಿವೆಟ್ ಮಾಡಿದ ನಂತರ,  ಜಾಹೀರಾತುಗಳು ಶಾಶ್ವತವಾಗಿ ಬ್ಲಾಕ್ ಆಗುತ್ತವೆ. 

ಇದನ್ನೂ ಓದಿ : WhatsApp Pay: ಈಗ ನೀವು ಚಾಟ್ ಮೂಲಕವೂ ಪಾವತಿಸಬಹುದು, ಅದನ್ನು ಹೇಗೆ? ಯಾರು ಬಳಸಬಹುದು ಎಂದು ತಿಳಿಯಿರಿ

ಕೇವಲ 2 ನಿಮಿಷಗಳಲ್ಲಿ ಬ್ಲಾಕ್ ಆಗುತ್ತವೆ ಜಾಹೀರಾತುಗಳು : 
1. ನೀವು ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ (Laptop) ಬಳಕೆದಾರರಾಗಿದ್ದರೆ, ಮೊದಲು ಗೂಗಲ್ ಕ್ರೋಮ್ (Google Chrome) ತೆರೆಯಿರಿ. ಇದರ ನಂತರ, URL ಬಾರ್‌ನಲ್ಲಿ adblocker extension chrome ಟೈಪ್ ಮಾಡಿ ಸರ್ಚ್ ಕೊಡಿ. 
2. ಇದರ ನಂತರ ಹೊಸ ವಿಂಡೋ ನಿಮ್ಮ ಮುಂದೆ ತೆರೆಯುತ್ತದೆ. ಇಲ್ಲಿ  AdBlock — best ad blocker - Google Chrome ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
3. ಇದನ್ನು ಮಾಡಿದ ನಂತರ, ನಿಮ್ಮ ಮುಂದೆ ಮತ್ತೊಂದು ಹೊಸ ವಿಂಡೋ ತೆರೆಯುತ್ತದೆ. ಇಲ್ಲಿ Add to Chrome ಮೇಲೆ ಕ್ಲಿಕ್ ಮಾಡಿ 
4. ಇದರ ನಂತರ ಫೈಲ್ ನಿಮ್ಮ ಸಿಸ್ಟಂನಲ್ಲಿ ಡೌನ್‌ಲೋಡ್ (download) ಆಗಲು ಪ್ರಾರಂಭಿಸುತ್ತದೆ.  ಮತ್ತು ಆಟೋಮ್ಯಾಟಿಕ್ ಇನ್ಸ್ಟಾಲ್ ಆಗಲು ಶುರುವಾಗುತ್ತದೆ. ಒಂದು ವೇಳೆ, ಆಟೋಮ್ಯಾಟಿಕ್ ಇನ್ಸ್ಟಾಲ್ ಆಗದೆ ಹೋದರೆ ಡೌನ್‌ಲೋಡ್ ಫೋಲ್ಡರ್‌ಗೆ ಹೋಗಿ ಇನ್ಸ್ಟಾಲ್ ಮಾಡಬೇಕಾಗುತ್ತದೆ.
5.  ಇನ್ಸ್ಟಾಲ್ ಪೂರ್ಣಗೊಂಡ ನಂತರ, Google Chrome ಅನ್ನು ಕ್ಲೋಸ್ ಮಾಡಿ ಪುನಃ ಓಪನ್ ಮಾಡಿ. ಇದರ ನಂತರ, ನೀವು URL ಬಾರ್‌ನ ಪಕ್ಕದಲ್ಲಿ Extension ಐಕಾನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಇಲ್ಲಿ  AdBlock — best ad blocker ಎನ್ನುವುದು ಕಾಣಿಸಿದರೆ YouTube ಬ್ಲಾಕ್ ಆಗಿದೆ ಎಂದರ್ಥ. ಒಂದು ವೇಳೆ ಅದು ಕಾಣಿಸದಿದ್ದರೆ, ಇಡಿ ಪ್ರಕ್ರಿಯೆಯನ್ನು ಮತ್ತೆ ಮಾಡಿ. 

ಇದನ್ನೂ ಓದಿ : ಫೋನ್ ಕಳೆದು ಹೋಗಿದ್ದರೆ ಕಾಂಟಾಕ್ಟ್ ಗಳನ್ನು ಮರಳಿ ಪಡೆಯಲು ಏನು ಮಾಡಬೇಕು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News