ನೀವೂ ಮಾರುತಿ ಸ್ವಿಫ್ಟ್ ಮತ್ತು ಹೀರೋ ಸ್ಪ್ಲೆಂಡರ್ ಗಾಡಿಗಳ ಮಾಲೀಕರೇ ? ಕಳ್ಳರಿಗೆ ಸುಲಭ ಟಾರ್ಗೆಟ್ ಅಂತೆ ಈ ವಾಹನಗಳು .!

Most stolen vehicles in india: ವರದಿಯಲ್ಲಿ ಒಂದು ಆಘಾತಕಾರಿ ಅಂಶ ಹೊರ ಬಿದ್ದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಹೀರೋ ಸ್ಪ್ಲೆಂಡರ್‌ನಂತಹ ಬೈಕ್‌ಗಳನ್ನು ಬಳಸುತ್ತಿದ್ದವರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ. 

Written by - Ranjitha R K | Last Updated : Oct 18, 2022, 01:07 PM IST
  • ಕಾರು ಕಳ್ಳತನವಾಗದಂತೆ ತಡೆಯಲು ಅನೇಕರು ಪ್ರಯತ್ನ ಪಡುತ್ತಾರೆ.
  • ಆದರೆ, ಕಳ್ಳತನ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ.
  • ವಿಮಾ ಕಂಪನಿ Acko ಒಂದು ವರದಿಯನ್ನು ಬಿಡುಗಡೆ ಮಾಡಿದೆ.
 ನೀವೂ ಮಾರುತಿ ಸ್ವಿಫ್ಟ್ ಮತ್ತು ಹೀರೋ ಸ್ಪ್ಲೆಂಡರ್ ಗಾಡಿಗಳ ಮಾಲೀಕರೇ ? ಕಳ್ಳರಿಗೆ ಸುಲಭ  ಟಾರ್ಗೆಟ್ ಅಂತೆ ಈ ವಾಹನಗಳು .!  title=
Most stolen vehicles in india

Most stolen vehicles in india : ಕಾರು ಕಳ್ಳತನದ ಸುದ್ದಿಗಳು ದಿನ ಬೆಳಗಾದರೆ ಕಿವಿಗೆ ಬೀಳುತ್ತಿರುತ್ತದೆ. ತಮ್ಮ ಕಾರು ಕಳ್ಳತನವಾಗದಂತೆ ತಡೆಯಲು ಅನೇಕರು ಪ್ರಯತ್ನ ಪಡುತ್ತಾರೆ. ಆದರೆ, ಕಳ್ಳತನ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ನಿಮ್ಮ ಕಾರನ್ನು ಕದಿಯುವುದು  ಕಳ್ಳರಿಗೆ ಎಷ್ಟು ಸುಲಭ ಎನ್ನುವುದು ನೀವು ಬಳಸುತ್ತಿರುವ ಕಾರು ಯಾವುದು ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ವಿಮಾ ಕಂಪನಿ Acko  ಇತ್ತೀಚೆಗೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಒಂದು ಆಘಾತಕಾರಿ ಅಂಶ ಹೊರ ಬಿದ್ದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಹೀರೋ ಸ್ಪ್ಲೆಂಡರ್‌ನಂತಹ ಬೈಕ್‌ಗಳನ್ನು ಬಳಸುತ್ತಿದ್ದವರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ.  

ಹೆಚ್ಚು ಕದ್ದ ಕಾರುಗಳು :
ಮಾರುತಿ ಸುಜುಕಿ ವ್ಯಾಗನ್ ಆರ್/ ಮಾರುತಿ ಸುಜುಕಿ ಸ್ವಿಫ್ಟ್
ಹುಂಡೈ ಕ್ರೆಟಾ
ಹುಂಡೈ ಸ್ಯಾಂಟ್ರೋ
ಹೋಂಡಾ ಸಿಟಿ
ಹುಂಡೈ ಐ10

ಇದನ್ನೂ ಓದಿ : ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಪೋರ್ಟಬಲ್ ವಾಟರ್ ಹೀಟರ್.! ವಿದ್ಯುತ್ ಬಳಕೆ ಕೂಡಾ ಕಡಿಮೆ

ಕಳುವಾದ ದ್ವಿಚಕ್ರ ವಾಹನಗಳು : 
ಹೀರೋ ಸ್ಪ್ಲೆಂಡರ್
ಹೋಂಡಾ ಆಕ್ಟಿವಾ
ಬಜಾಜ್ ಪಲ್ಸರ್
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350
ಟಿವಿಎಸ್ ಅಪಾಚೆ

ಭಾರತದಲ್ಲಿ ದೆಹಲಿ-ಎನ್‌ಸಿಆರ್ ನಲ್ಲಿ ಕಾರು ಕಳ್ಳತನದ ಅಪಾಯ ಹೆಚ್ಚು ಎಂದು ಹೇಳಲಾಗಿದೆ. ದೆಹಲಿಯ ಉತ್ತರದ ಪ್ರದೇಶಗಳಾದ ರೋಹಿಣಿ, ಭಜನ್‌ಪುರ, ದಯಾಲ್‌ಪುರ ಮತ್ತು ಸುಲ್ತಾನ್‌ಪುರಿಗಳಲ್ಲಿ ಕಳ್ಳತನದ ಸಾಧ್ಯತೆಗಳು ಹೆಚ್ಚು. ಈ ಪಟ್ಟಿಯಲ್ಲಿ ನೋಯ್ಡಾದ ಸೆಕ್ಟರ್ 12, ಪಶ್ಚಿಮದಲ್ಲಿ ಉತ್ತಮ್ ನಗರ ಮತ್ತು ಗುರುಗ್ರಾಮ್‌ನ ದಕ್ಷಿಣ ನಗರವೂ ​​ಸೇರಿದೆ. ಎನ್‌ಸಿಆರ್‌ನಲ್ಲಿ ಪ್ರತಿ 12 ನಿಮಿಷಕ್ಕೊಂದು ವಾಹನ ಕಳ್ಳತನವಾಗುತ್ತಿದೆ ಎಂದು  ವರದಿಯಲ್ಲಿ ಹೇಳಲಾಗಿದೆ. 

ಇದನ್ನೂ ಓದಿ : Google Diwali Surprise: ಗೂಗಲ್‌ನಲ್ಲಿ ಈ ಒಂದು ಪದ ಸರ್ಚ್ ಮಾಡಿದರೆ ಬೆಳಗುತ್ತೆ ಸ್ಕ್ರೀನ್

ಈ ಬಣ್ಣದ ಕಾರುಗಳೇ ಹೆಚ್ಚು ಕಳುವಾಗುವುದು : 
ಬಿಳಿ ಬಣ್ಣದ ಕಾರುಗಲೇ ಕಳ್ಳರ  ಟಾರ್ಗೆಟ್ ಅಂತೆ.  ಬಿಳಿ ಬಣ್ಣದ ಕಾರನ್ನೇ ಟಾರ್ಗೆಟ್ ಮಾಡುವ ಹಿಂದಿನ ಉದ್ದೇಶವೆಂದರೆ  ಬಿಳಿ ಬಣ್ಣದ ಕಾರುಗಳು ಟ್ರಾಫಿಕ್‌ನೊಂದಿಗೆ ಬೆರೆಯುವುದು ತುಂಬಾ ಸುಲಭ. ಇದಲ್ಲದೇ ಬಿಳಿ ಬಣ್ಣದ ಕಾರುಗಳಿಗೆ ಬೇರೆ ಬಣ್ಣ ಬಳಿಯುವುದು ಕೂಡಾ ಸುಲಭ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News